ತುಂಗಭದ್ರಾ ಜಲಾಶಯದ ಆಯುಷ್ಯ ಮುಗಿದಿದೆ: ಜಲತಜ್ಞರು ನೀಡಿದ ಅಚ್ಚರಿಯ ಮಾಹಿತಿ ಇಲ್ಲಿದೆ

| Updated By: Ganapathi Sharma

Updated on: Aug 16, 2024 | 8:44 AM

ತುಂಗಭದ್ರಾ ಡ್ಯಾಂನ ಗೇಟ್ ತುಂಡಾಗಿ ನೀರು ಪೋಲಾಗುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ಸಮಾನಾಂತರವಾಗಿ ಮತ್ತೊಂದು ಜಲಾಶಯ ನಿರ್ಮಾಣ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದರ ಜತೆಗೇ, ತುಂಗಭದ್ರಾ ಜಲಾಶಯ ಸಂಬಂಧಿತ ಅಚ್ಚರಿಯ ಮಾಹಿತಿಗಳೂ ಹೊರಬೀಳುತ್ತಿವೆ. ಸಮಾನಾಂತರವಾಗಿ ಮತ್ತೊಂದು ಡ್ಯಾಂ ನಿರ್ಮಾಣ ಮಾಡುವ ವಿಚಾರ ಸುಮಾರು 25 ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ, ಆಳುವ ಸರ್ಕಾರಗಳು ಈ ವಿಚಾರದಲ್ಲಿ ಮುಂದೆ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

1 / 6
ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸ್ಥಳವನ್ನು ಸಹ ಗುರುತಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾದ ಹೊಳನ್ನು ತೆಗೆಸಲು ಇತರೆ ದೇಶಗಳಿಂದ ಆಧುನಿಕ ಯಂತ್ರಗಳನ್ನು ಸಹ ತರಿಸಲಾಗಿತ್ತು. ತುಂಗಭದ್ರಾ ಜಲಾಶಯದ ಹೂಳನ್ನು ಎಲ್ಲಿ ಹಾಕುವುದು ಎಂಬ ಪ್ರಶ್ನೆ ಬಂತು. ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಆ ಹುಳನ್ನು ಹಾಕಿದರೂ ಸ್ಥಳ ಸಾಲದು ಎನ್ನಲಾಗಿದೆ.

2 / 6
ಈ ಸಮಸ್ಯೆಗೆ ಪರಿಹಾರವೆಂಬಂತೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಆದರೆ, ಸಮನಂತರ ಜಲಾಶಯ ನಿರ್ಮಾಣ ವಿಚಾರದಲ್ಲಿ ಕಳೆದ 25 ವರ್ಷಗಳಿಂದ ಆಡಳಿತ ನಡೆಸಿದ ಯಾವುದೇ ಸರ್ಕಾರ ಗಮನ ಹರಿಸಿಲ್ಲ. ಗಮನಹರಿಸಿದ್ದರೆ ಇಂದಿನ ಸಮಸ್ಯೆಯೇ ಬರುತ್ತಿರಲಿಲ್ಲ ಎಂದು ಜಲತಜ್ಞ ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದ್ದಾರೆ.

3 / 6
132 ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಿಸಿದ ಹೊರತಾಗಿ 150 ರಿಂದ 200 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನೇ ಸಮಾನಾಂತರ ಜಲಾಶಯದಲ್ಲಿ ನಿಲ್ಲಿಸಿದರೆ ಅನುಕೂಲ. ತುಂಗಭದ್ರಾ ಜಲಾಶಯಕ್ಕೆ ಸಮಾನಂತರವಾಗಿ ಪರ್ಯಾಯ ಜಲಾಶಯ ನಿರ್ಮಾಣ ವಿಚಾರದಲ್ಲಿ ಈಗಾಗಲೇ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮಧ್ಯೆ ಒಪ್ಪಂದವಾಗಿದೆ. ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ಮತ್ತೊಂದು ಜಲಾಶಯ ನಿರ್ಮಾಣ ಮಾಡಬೇಕೆಂಬ ಒಪ್ಪಂದದ ಮೇರೆಗೇ ಟಿಬಿ ಡ್ಯಾಂ ಕಟ್ಟಲಾಗಿದೆ. ಈಗ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಯಾವುದೇ ಕಾನೂನು ಸಮಸ್ಯೆ ಇಲ್ಲ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದ್ದಾರೆ.

4 / 6
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ನೀರಿನ ಬಳಕೆ ವಿಚಾರದಲ್ಲಿ ತಗಾದೆ ತೆಗೆದಿವೆ. ಆದರೆ ಸಮಾನಾಂತರ ಜಲಾಶಯ ನಿರ್ಮಾಣ ವಿಚಾರದಲ್ಲಿ ಅವರ ತಗಾದೆ ಇಲ್ಲ. ಅಧಿಕಾರದಲ್ಲಿರುವವರ ನಿರ್ಲಕ್ಷ್ಯದಿಂದಲೇ ಸಮಾನಾಂತರ ಜಲಾಶಯ ನಿರ್ಮಾಣ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

5 / 6
ಸದ್ಯ ತುಂಗಭದ್ರಾ ಜಲಾಶಯದ ಆಯುಷ್ಯವೇ ಮುಗಿದು ಹೋಗಿದೆ. ಅಂತಾರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ಟಿಬಿ ಡ್ಯಾಂ ಆಯುಷ್ಯ ಮುಗಿದಿದೆ. ಒಂದು ಯೋಜನೆ ಕಾಮಗಾರಿ ಆರಂಭವಾದರೆ ಮೂರರಿಂದ ಐದು ವರ್ಷದ ಒಳಗೆ ಅದು ಮುಗಿಯಬೇಕು. ಮುಂದಿನ 45 ವರ್ಷಗಳ ಕಾಲ ಅದರ ಫಲವನ್ನು ಸವಿಯಬೇಕು. 50 ವರ್ಷಕ್ಕೆ ಅದರ ಆಯುಷ್ಯ ಮುಗಿಯುತ್ತದೆ. ಮುಂದಿನ ಐವತ್ತು ವರ್ಷಗಳ ಕಾಲ ದುರಸ್ತಿ ಮಾಡುತ್ತಾ ಹೋಗಬೇಕು. ನೂರು ವರ್ಷಗಳು ಆದ ಬಳಿಕ ಅದರ ಪೂರ್ಣ ಆಯುಷ್ಯ ಮುಗಿದಂತೆ. ಬಳಿಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇದು ಅಣೆಕಟ್ಟುಗಳ ವಿಚಾರದಲ್ಲಿ ಅಂತರಾಷ್ಟ್ರೀಯ ನಿಯಮಾವಳಿಗಳಲ್ಲಿ ಇದೆ. ಹಾಗಾಗಿ ಟಿವಿ ಡ್ಯಾಂಗೆ  ಪರ್ಯಾಯವಾಗಿ ಅಣೆಕಟ್ಟು ನಿರ್ಮಾಣ ಆಗಲೇಬೇಕು. ಆ ನಿಟ್ಟಿನಲ್ಲಿ ಆಳುವ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಹೇಳಿದ್ದಾರೆ.

6 / 6
ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂ ಸುರಕ್ಷತೆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇನ್ನೂ ಆಲಮಟ್ಟಿ ಡ್ಯಾಂನ ನಿರ್ಮಾಣ ಕಾಮಗಾರಿಯ ಮುಗಿದಿಲ್ಲ. 24 ವರ್ಷಗಳಿಂದ ನೀರು ನಿಲ್ಲಿಸಲಾಗುತ್ತಿರುವ ಕಾರಣ ಡ್ಯಾಂ ಗೇಟ್​ಗಳಿಗೆ ತೊಂದರೆ ಇಲ್ಲ. ಆಲಮಟ್ಟಿ ಡ್ಯಾಂ ನಲ್ಲೂ ಕೂಡ ಶೇಕಡ 10 ರಿಂದ 15 ಪ್ರಮಾಣದಲ್ಲಿ ಹೂಳಿದೆ. ವರ್ಷ ವರ್ಷ ಈ ಹೂಳನ್ನು ತೆಗೆದರೆ ಮುಂದೆ ಧಕ್ಕೆ ಅಗಲ್ಲ. ಇಂದಿನ 25  ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲ. ಆದರೆ ಮುಖ್ಯವಾಗಿ ಡ್ಯಾಂನ ಕಾಮಗಾರಿ ಮುಕ್ತಾಯವಾಗಬೇಕು ಎಂದು ಅವರು ಹೇಳಿದ್ದಾರೆ.

Published On - 10:31 am, Tue, 13 August 24