Updated on: Mar 21, 2022 | 9:05 AM
ಕಳೆದ ವರ್ಷ ಕ್ಲಬ್ ಹೌಸ್ ಎಂಬ ಆ್ಯಪ್ ಭಾರತದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದರಲ್ಲಿರುವ ಲೈವ್ ಆಡಿಯೋ ಫೀಚರ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಪ್ರಸಿದ್ಧ ಟ್ವಿಟರ್ ಕೂಡ ಇದೇ ಮಾದರಿಯ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ಆಡಿಯೋ ಚಾಟ್ ಸೇವೆ ಒದಗಿಸುವಿದಕ್ಕೆ ಸ್ಪೇಸಸ್ ಎಂದು ಹೆಸರಿಡಲಾಗಿದೆ.
ಇದು ಕ್ಲೌಬ್ ಹೌಸ್ ಪ್ರೇರಿತವಾಗಿದ್ದು, ಬಳಕೆದಾರರಿಗೆ ಆಡಿಯೋ ಚಾಟ್ ರೂಮ್ ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಕಳೆದ ವರ್ಷ ಐಒಎಸ್ ನಲ್ಲಿನ ಸಣ್ಣ ಗುಂಪಿನ ಜನರೊಂದಿಗೆ ಅದರ ಆಡಿಯೋ ಚಾಟ್ ಫೀಚರ್ ಮೊದಲು ಪರೀಕ್ಷಿಸಿದ ನಂತರ, ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷೆ ವಿಸ್ತರಿಸಿತ್ತು.