ರಾಜಕೀಯ ಕೆಲಸಕ್ಕೆ ಕೊಂಚ ಬಿಡುವು: ಪಗಡೆ ಆಟವಾಡಿದ ಪ್ರಲ್ಹಾದ್​ ಜೋಶಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 17, 2024 | 7:42 PM

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡದ ಹೆಬ್ಬಳ್ಳಿ ಗ್ರಾಮದ ಮೂಗ ಬಸವೇಶ್ವರ ದೇವಸ್ಥಾನದಲ್ಲಿ ಹಿರಿಯರೊಂದಿಗೆ ಪಗಡೆಯಾಟ ಆಡಿದ್ದಾರೆ. ರಾಜಕೀಯದಿಂದ ವಿರಾಮ ಪಡೆದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಈ ಘಟನೆಯನ್ನು ಟ್ವೀಟ್ ಮಾಡಿ, ಜೀವನದಲ್ಲಿ ನಾವು ಕೇವಲ ಕಾಯಿಗಳು ಎಂದು ಅವರು ಬರೆದಿದ್ದಾರೆ. ದೇವರ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ ಎಂದಿದ್ದಾರೆ.

1 / 5
ರಾಜಕೀಯ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡ ಕೇಂದ್ರ ಸಚಿವ ಪ್ರಲ್ದಾದ್ ಜೋಶಿ ಇಂದು ಹಿರಿಯರೊಂದಿಗೆ ಪಗಡೆಯಾಟ ಆಡಿ ತಮ್ಮ ಬಾಲ್ಯವನ್ನು ಮೆಲಕು ಹಾಕಿದರು.

2 / 5
ಹೌದು. ಪ್ರಲ್ಹಾದ್​ ಜೋಶಿ ಇಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ  ಸಂದರ್ಭದಲ್ಲಿ ಮೂಗ ಬಸವೇಶ್ವರ ದೇವಸ್ಥಾನಕ್ಕೆ ಈ ಘಟನೆ ನಡೆದಿದೆ.

3 / 5
ದೇವಸ್ಥಾನದ ಭೇಟಿ ವೇಳೆ ಪ್ರಾಂಗಣದಲ್ಲಿ ಗ್ರಾಮದ ಹಿರಿಯರು ಪಗಡೆಯಾಡುತ್ತಿದ್ದರು. ಇದನ್ನು ನೋಡಿ ಅವರು ಆಟಕ್ಕೆ ಕುಳಿತುಕೊಂಡರು. ದೇವರಿಗೆ ನಮಸ್ಕರಿಸಿ ದಾಳ ಉರುಳಿಸಿ ಖುಷಿ ಪಟ್ಟರು.

4 / 5
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ. ನಡೆಸುವಾತ ಬೇರೆ. ಅವನ ಇಚ್ಛೆ ಯಾರು ಬಲ್ಲರು? ಎಂದು ಬರೆದುಕೊಂಡಿದ್ದಾರೆ.

5 / 5
ದೇವಸ್ಥಾನದ ಆವರಣದಲ್ಲಿ ಪರಂಪರಾಗತವಾಗಿ ಮಹಾನವಮಿಯಿಂದ ಪಗಡೆ ಆಟ ಆಡುತ್ತಿದ್ದ ಹಿರಿಯರೊಂದಿಗೆ ದಾಳ ಉರುಳಿಸುವ ಅವಕಾಶ ಸಿಕ್ಕಿದ್ದು, ಆ ಮೂಗಬಸವೇಶ್ವರ ದೈವನ ಇಚ್ಛೆ ಎಂದಿದ್ದಾರೆ.