ಉತ್ಕೃಷ್ಟ ಗುಣಮಟ್ಟ, ಸೇವೆಯಲ್ಲಿ ರಾಜಧಾನಿ ಎಕ್ಸ್​ಪ್ರೆಸ್ ಅನ್ನೂ ಮೀರಿಸುತ್ತೆ ವಂದೇ ಭಾರತ್ ಸ್ಲೀಪರ್ ಟ್ರೈನು

|

Updated on: Oct 27, 2024 | 5:21 PM

ನವದೆಹಲಿ, ಅಕ್ಟೋಬರ್ 27: ಭಾರತೀಯ ರೈಲ್ವೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ನಾವೀನ್ಯತೆ ತೋರುತ್ತಿದೆ. ರೈಲಿನ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ, ಹೊಸ ಆಧುನಿಕ ಟ್ರೈನುಗಳು, ಸೇವೆಗಳನ್ನು ತರುತ್ತಿದೆ. ವಂದೇ ಭಾರತ್ ರೈಲುಗಳು ಗಮನ ಸೆಳೆಯುತ್ತಿವೆ. ಇದೀಗ ವಂದೇ ಭಾರ್ ಸ್ಲೀಪರ್ ಟ್ರೈನು ಬಿಡುಗಡೆಗೆ ಸಿದ್ಧವಾಗಿದೆ. ವೇಗದಲ್ಲಿ, ಗುಣಮಟ್ಟದ ಸೇವೆಯಲ್ಲಿ ರಾಜಧಾನಿ ಎಕ್ಸ್​​ಪ್ರೆಸ್ ಅನ್ನೂ ವಂದೇ ಭಾರತ್ ಸ್ಲೀಪರ್ ಟ್ರೈನು ಮೀರಿಸುತ್ತದೆ. ಈ ಬಗ್ಗೆ ಒಂದು ವರದಿ.

1 / 5
ವಂದೇ ಭಾರತ್ ಸ್ಲೀಪರ್ ಟ್ರೈನು 160 ಕಿಮೀವರೆಗೂ ವೇಗದಲ್ಲಿ ಓಡಬಲ್ಲುದು. ವೇಗ ಹೆಚ್ಚಿಸುವ ಸಮಯ, ಮತ್ತು ವೇಗ ಕಡಿಮೆ ಮಾಡುವ ಸಮಯ ಎರಡೂ ಕೂಡ ಕಡಿಮೆ. ಇದರಿಂದ ವಂದೇ ಭಾರತ್ ಸ್ಲೀಪರ್ ರೈಲುಗಳು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣವನ್ನು ಬೇಗ ತಲುಪುತ್ತದೆ.

2 / 5
ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಕುಳಿತುಕೊಳ್ಳಲು, ಅಥವಾ ಮಲಗಲು ಸೀಟಿನ ಕುಶನಿಂಗ್ ಉತ್ತಮವಾಗಿದೆ. ಪ್ರಯಾಣಿಕರಿಗೆ ಕೂರಲು ಮತ್ತು ಮಲಗಲು ಹೆಚ್ಚು ಆರಾಮದಾಯಕವಾಗುವಂತಿದೆ. ಮೇಲಿನ ಬರ್ತ್​ಗೆ ಏರಲು ಏಣಿ ವ್ಯವಸ್ಥೆ ಉತ್ತಮವಾಗಿದೆ.

3 / 5
ವಂದೇ ಭಾರತ್ ಸ್ಲೀಪರ್ ಟ್ರೈನ್​ನ ಎರಡೂ ತುದಿಗಳಲ್ಲಿ ಡ್ರೈವರ್ ಕ್ಯಾಬಿನ್ ಇದೆ. ಅಂದರೆ ಎರಡೂ ಕಡೆಯಲ್ಲಿ ಡ್ರೈವಿಂಗ್ ವ್ಯವಸ್ಥೆ ಇದೆ. ಇದರಿಂದ ಈ ತುದಿಯಿಂದ ಇನ್ನೊಂದು ತುದಿಗೆ ಡ್ರೈವರ್ ಕ್ಯಾಬಿನ್ ಕೋಚ್ ಅನ್ನು ಎಳೆದು ತಂದು ಜೋಡಿಸುವ ಕೆಲಸ ತಪ್ಪುತ್ತದೆ.

4 / 5
ಟ್ರೈನ್​ನಲ್ಲಿ ಆಟೊಮ್ಯಾಟಿಕ್ ಎಂಟ್ರಿ ಮತ್ತು ಎಕ್ಸಿಟ್ ಡೋರ್​ಗಳಿರುತ್ತವೆ. ಚಾಲಕರೇ ಇದನ್ನು ನಿಯಂತ್ರಿಸಬಹುದು. ಬೋಗಿಯಿಂದ ಇನ್ನೊಂದು ಬೋಗಿಗೆ ಕನೆಕ್ಟಿಂಗ್ ಡೋರ್​ಗಳಿರುತ್ತವೆ. ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಸಿಸ್ಟಮ್ ಇರುತ್ತದೆ. ಹಲವು ಸುರಕ್ಷಿತ ವ್ಯವಸ್ಥೆ ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಇದೆ.

5 / 5
ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ 16 ಬೋಗಿಗಳಿವೆ. ಎಲ್ಲವೂ ಎಸಿ ಕೋಚ್​ಗಳೇ. ಒಂದು ಫಸ್ಟ್ ಕ್ಲಾಸ್ ಕೋಚ್, ನಾಲ್ಕು 2-ಟಯರ್ ಕೋಚ್, ಹನ್ನೊಂದು 3-ಟಯರ್ ಕೋಚ್​ಗಳಿದ್ದು, ಒಟ್ಟು 823 ಪ್ರಯಾಣಿಕರಿಗೆ ಕೂರಲು ಮತ್ತು ಮಲಗಲು ಅವಕಾಶ ಇದೆ.