Kannada News Photo gallery Kannada News | Various inventions by students who want to serve the country through technology, Here are the photos
ತಂತ್ರಜ್ಞಾನದ ಮೂಲಕ ದೇಶ ಸೇವೆ ಮಾಡಲು ಬಯಸಿದ ವಿದ್ಯಾರ್ಥಿಗಳಿಂದ ನಾನಾ ಆವಿಷ್ಕಾರಗಳು; ಇಲ್ಲಿವೆ ಫೋಟೋಸ್
ಅವರೆಲ್ಲ ತಂತ್ರಜ್ಞಾನದಲ್ಲಿ ಪರಿಣಿತಿ ಪಡೆದ ವಿದ್ಯಾರ್ಥಿಗಳು. ತಂತ್ರಜ್ಞಾನದ ಮೂಲಕ ದೇಶಕ್ಕೆ ಒಂದಷ್ಟು ಸೇವೆ ನೀಡಬೇಕೆಂದು ಬಯಸಿದ್ದವರು. ಅದಕ್ಕಾಗಿ ತಮ್ಮ ಅನುಭವ ಹಾಗೂ ಜ್ಞಾನ ಬಳಸಿಕೊಂಡು ಒಂದಷ್ಟು ವಿನೂತನ ಹಾಗೂ ವಿಭಿನ್ನ ಪ್ರಯತ್ನಗಳನ್ನ ಮಾಡಿ ಸೈ ಎನಿಸಿಕೊಂಡಿದ್ದು, ವಿದ್ಯಾರ್ಥಿಗಳು ಮಾಡಿದ ತಾಂತ್ರಿಕ ಆವಿಷ್ಕಾರಗಳು ಇಲ್ಲಿವೆ.
1 / 8
ಹೀಗೆ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಪ್ರಾಜೆಕ್ಟ್‌ಗಳನ್ನ ತಯಾರಿ ಮಾಡಿ ತೋರಿಸುತ್ತಿರುವ ತಾಂತ್ರಿಕ ವಿದ್ಯಾರ್ಥಿಗಳು. ರೈತರು, ಜನ ಸಾಮಾನ್ಯರು, ಮಹಿಳೆಯರು, ಅಂಗವಿಕಲರು, ದೇಶ ಕಾಯುವವರಿಗೆ ಅನುಕೂಲವಾಗುವ ಹೊಸ ಹೊಸ ತಾಂತ್ರಿಕ ಆವಿಷ್ಕಾರಗಳನ್ನ ಮಾಡಿರುವ ಮೆಕಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು, ಇದೆಲ್ಲ ದಶ್ಯಗಳು ಕಂಡು ಬಂದಿದ್ದು ಕೋಲಾರದ ಸಿ.ಬೈರೇಗೌಡ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ.
2 / 8
ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನ, ಒಬ್ಬರಿಗಿಂತ ಮತ್ತೊಬ್ಬರು ಎಂಬಂತೆ ನಾನಾ ರೀತಿಯ ಯೋಜನೆಗಳನ್ನ ತಯಾರಿ ಮಾಡಿದ್ದಾರೆ. ಅಂಡ್ರಾಯಿಡ್ ಕಂಟ್ರೋಲಡ್ ರೋಬೋಟಿಕ್ ಆರ್ಮ್ ಮೂಲಕ ಬ್ಲೂಟೂತ್‌ನಿಂದ ವಾಹನ ನಿಯಂತ್ರಣ ಮಾಡುವ ಸೇನಾ ವಾಹನ, ವಿಷುವಲ್ ಗೈಡೆನ್ಸ್ ಫಾರ್ ಬ್ಲೈಂಡ್ ಅನ್ನೋ ಸ್ಮಾರ್ಟ್ ಕ್ಯಾಪ್, ಹ್ಯಾಂಡ್ ರೊಬೋ ಅನ್ನೋ ಕೇರ್ ಆಂಡ್ ಗೆಸ್ಟರ್ ಟೇಕರ್ ಫಾರ್ ಬ್ಲೈಂಡ್, ಕ್ಯಾಮರ ಬೇಸ್ ಸಿಸ್ಟಮ್, ಟ್ರಾಫಿಕ್ ಮ್ಯಾನೇಜ್ ಮೆಂಟ್, ಗ್ರೀನ್ ಹೌಸ್ ಮ್ಯಾನೇಜ್ ಮೆಂಟ್, ರೈಲ್ವೇ ಟ್ರ್ಯಾಕ್ ಕ್ರಾಕ್ ಡಿಟೆಕ್ಷನ್ ಸಿಸ್ಟಮ್, ಸ್ಪ್ರಿಂಗ್ ಪವರ್ ಜನರೇಟರ್ ಸಿಸ್ಟಮ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೇರಿದಂತೆ ಹಲವು ಬಗೆಯ ಪ್ರಾಜೆಕ್ಟ್‌ಗಳನ್ನ ಮಾಡಿದ್ದಾರೆ.
3 / 8
ಟ್ರಾಫಿಕ್ ಮ್ಯಾನೇಜ್ ಮೆಂಟ್ ವಿತ್ ಪ್ರಿಯಾರಿಟಿ ಟು ಎಮರ್ಜೆನ್ಸಿ ವೆಹಿಕಲ್ಸ್ ಯೂಸಿಂಗ್ ಇಮೇಜ್ ಪ್ರೊಸೆಸಿಂಗ್ ಅಂಡ್ ಮೆಷನ್ ಲರ್ನಿಂಗ್, ವಿಶೇಷವಾಗಿ ಬ್ಯಾಂಕ್ ಲಾಕರ್ ಸೆಕ್ಯೂರಿಟಿ ಸಿಸ್ಟಮ್ ವಿತ್ ಫೇಸ್ ಅಂಡ್, ವಾಯ್ಸ್ ಅಂಥೆಟಿಕೇಷನ್ ಬಳಸಿ ಬ್ಯಾಂಕ್ನಲ್ಲಾಗಬಹುದಾದ ಅವಘಡ, ಕಳ್ಳತನಗಳಿಗೆ ಬ್ರೇಕ್ ಹಾಕಬಲ್ಲ ತಂತ್ರಜ್ಞಾನದ ಆಪ್‌ಗಳನ್ನ ಮಾಡಲಾಗಿದೆ.
4 / 8
ಇನ್ನೂ ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ ವಿದ್ಯಾರ್ಥಿಗಳು ತಮ್ಮ ಯೋಜನಾ ವರದಿಗಳಲ್ಲಿ ವಿಶೇಷವಾಗಿ ದೇಶದಲ್ಲೆ ಮಾದರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಗೆ ಅನುಕೂಲವಾಗಬಲ್ಲ ರಿಯಲ್ ಟೈಮ್ ಮಾನಿಟರಿಂಗ್ ಅಂಡ್ ಕಂಟ್ರೋಲಿಂಗ್ ಅಫ್ ವೇಸ್ಟ್ ವಾಟರ್ ಕ್ವಾಲಿಟ್ ಸಿಸ್ಟಮ್.
5 / 8
ಮತ್ತಷ್ಟು ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಈ-ವೋಟಿಂಗ್ ಸಿಸ್ಟಮ್ ಯೂಸಿಂಗ್ ಬ್ಲಾಕ್ ಚೈನ್ ಟೆಕ್ನಾಲಜಿ, ಆನ್ ಲೈನ್ ವೋಟಿಂಗ್ ಸಿಸ್ಟಮ್, ಅಂಡ್ ರಿಸಲ್ಟ್. ಇಂಟರ್‌ನೆಟ್ ಫ್ರಾಡ್ ತಪ್ಪಿಸುವ ಉದ್ದೇಶದಿಂದ ಹೈ ಅಂಡ್ ಫೇಸ್ ರೆಗನೈಸೇಷನ್, ಕರೆಪ್ಷನ್ ಫ್ರೀ ವೋಟಿಂಗ್ ಸಿಸ್ಟಮ್, ಜೊತೆಗೆ ಸ್ಮಾರ್ಟ್ ವೋಟಿಂಗ್ ಮೆಷನ್ ಬೇಸಡ್ ಅನ್ ಫಿಂಗರ್ ಪ್ರಿಂಟರ್ ಅಂಡ್ ಫೇಸ್ ರೆಕಗನೈಸೇಷನ್ ಮಾಡಲಾಗಿದೆ.
6 / 8
ಜೊತೆಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರೀನ್ ಹೌಸ್ ಮಾನಿಟರಿಂಗ್ ಯೂಸಿಂಗ್ ವೈರ್ ಲೆಸ್ ಸೆನ್ಸಾರ್ ನೆಟ್ ವರ್ಕ್ ತಂತ್ರಜ್ಞಾನ.
7 / 8
ರೈಲ್ವೇ ಟ್ರ್ಯಾಕ್ ಕ್ರಾಕ್ ಡಿಟೆಕ್ಷನ್ ಸಿಸ್ಟಮ್, ಸ್ಪ್ರಿಂಗ್ ಪವರ್ ಜನರೇಟರ್ ಸಿಸ್ಟಮ್ ಹೀಗೆ ವಿಜ್ಞಾನ- ತಂತ್ರಜ್ಞಾನದ ಮೂಲಕ ಬೇರೆ ಬೇರೆ ಆವಿಷ್ಕಾರಗಳನ್ನ ಮಾಡಿರುವ ವಿದ್ಯಾರ್ಥಿಗಳು ದೇಶಕ್ಕೆ ಸಮಾಜಕ್ಕೆ ಅನುಕೂಲವಾಗುವ ನಾನಾ ಬಗೆಯ ಮಷಿನ್ಗಳನ್ನ ತಯಾರಿ ಮಾಡಿದ್ದಾರೆ.
8 / 8
ಒಟ್ಟಿನಲ್ಲಿ ಭವಿಷ್ಯದ ಮುಂದಿನ ಪೀಳಿಗೆಗೆ ಅನುಕೂಲವಾಗಬಲ್ಲ ಸಾಕಷ್ಟು ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಾಗಿದ್ದು, ಎಲ್ಲವೂ ಅಂಗೈಯಲ್ಲೆ, ಎಲ್ಲರಿಗೂ ಸುಲಭವಾಗಿ ಎಟುಕಬಲ್ಲ ತಾಂತ್ರಿಕತೆ ಅಭಿವೃದ್ಧಿಗೆ ವಿದ್ಯಾರ್ಥಿಗಳ ಕೊಡುಗೆ ಸಾಕಷ್ಟಿದೆ ಅನ್ನೋದಕ್ಕೆ ಈ ವಿದ್ಯಾರ್ಥಿಗಳ ನೂತನ ಆವಿಷ್ಕಾರಗಳೆ ನಿದರ್ಶನ.