
ಅದು ಕೇವಲ ಬಸ್ ಸ್ಟಾಪ್ ಅಲ್ಲ.. ಮಹಿಳೆಯರ ಸುರಕ್ಷತೆಗಾಗಿ ಹೇಳಿ ಮಾಡಿಸಿದಂಥಾ ಸ್ಮಾರ್ಟ್ ಬಸ್ ಸ್ಟಾಪ್! ಪ್ಯಾನಿಕ್ ಬಟನ್ ಒತ್ತಿದರೆ ಪೊಲೀಸ್ ಅಲ್ಲ ಬದಲಿಗೆ ಯೋಧರೇ ಬರುವಂಥಾ ವ್ಯವಸ್ಥೆ ಇಲ್ಲಿ ಮಾಡಲಾಗಿದ್ದು, ಇಡೀ ದೇಶದಲ್ಲಿ ಅತ್ಯಂತ ಉತ್ಕೃಷ್ಟ ಬಸ್ ಸ್ಟಾಪ್ ಅಂತ ಮೈಲಿಗಲ್ಲು ಸೃಷ್ಟಿಯಾಗಿದೆ. ಏನಿದರ ವಿಶೇಷತೆ? ಈ ಸ್ಟೋರಿ ನೋಡಿ...

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತದ ವ್ಯಾಪ್ತಿಯಲ್ಲಿ ಅಂದ್ರೆ ಐಟಿ ಬಿಟಿ ಮಂದಿ ಅತಿ ಹೆಚ್ಚಾಗಿ ನೆಚ್ಚಿಕೊಂಡಿರುವ ಪ್ರದೇಶದಲ್ಲಿ ಎಲ್ಸಿಟಾ ಅನ್ನೋ ಸಂಸ್ಥೆ ಅಡ್ವಾನ್ಸ್ಡ್ ಸಿಸ್ಟಮ್ ಆಪರೇಟಿಂಗ್ ಇರುವ ಸ್ಮಾರ್ಟ್ ಬಸ್ ಸ್ಟಾಪ್ ಒಂದನ್ನು ನಿರ್ಮಾಣ ಮಾಡಿದೆ.

ಮಹಿಳಾ ದಿನಾಚರಣೆ ಅಂಗವಾಗಿ ಇದು ಮಹಿಳೆಯರಿಗೆ ಸಹಕಾರಿ ಆಗಲಿ ಅನ್ನೋ ಕಾರಣಕ್ಕೆ ಎರಡು ವಾರಗಳ ಮುಂಚೆಯೇ ಇದನ್ನು ಸೇವೆಗಾಗಿ ನಿಯೋಜನೆ ಮಾಡಲಾಗಿದೆ... (ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್)

25 ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಿರುವ ಎಲೆಕ್ಟ್ರಾನಿಕ್ ಟೌನ್ ಶಿಪ್ ಪ್ರಾಧಿಕಾರ, ಮಹಿಳೆಯರ ಸುರಕ್ಷತೆ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಈ ಬಸ್ ಸ್ಟಾಪ್ ಸೇವೆ ಅನುಷ್ಠಾನಕ್ಕೆ ತಂದಿದೆ.

ಬಸ್ ಸ್ಟಾಪ್ ಬಲಭಾಗದಲ್ಲಿ ಪ್ಯಾನಿಕ್ ಬಟನ್ ಇಡುವ ಮೂಲಕ ಮಹಿಳೆಯರು ಯಾವುದಾದ್ರೂ ತೊಂದರೆಗೆ ಸಿಕ್ಕಿ ಹಾಕಿಕೊಂಡರೆ, ಏನೇ ಸಮಸ್ಯೆ ಆದ್ರೂ ಪ್ಯಾನಿಕ್ ಬಟನ್ ಉಪಯೋಗಿಸಬಹದು.

ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಇಡೀ ಬಸ್ ಸ್ಟಾಪ್ ಸುತ್ತಮುತ್ತಲಿನ ದೃಶ್ಯ ನೇರವಾಗಿ ಕಂಟ್ರೋಲ್ ರೂಮ್ ಗೆ ಹೋಗುತ್ತದೆ.

ಮಹಿಳೆಯರು ಡೇಂಜರ್ ಸನ್ನಿವೇಶನಲ್ಲಿ ಸಿಲುಕಿಕೊಂಡಿದ್ದರೆ ಸಿಐಎಸ್ಎಫ್ ಯೋಧರೇ ಬಸ್ ಸ್ಟಾಪ್ ಗೆ ಧಾವಿಸಿ ರಕ್ಷಣೆ ನೀಡಲಿದ್ದಾರೆ!

ಎಲೆಕ್ಟ್ರಾನಿಕ್ ಸಿಟಿ ಸ್ಮಾರ್ಟ್ ಬಸ್ ಸ್ಟಾಪ್ ನಿಂದ ಏರ್ಪೊಟ್ ಕಡೆಗೆ ಹೋಗುವ ವಜ್ರ ಬಸ್ ಇಲ್ಲಿ ಸೇವೆ ಕೊಡುತ್ತಿದ್ದ ಬಸ್ ಬರುವ ಸಮಯ ಹಾಗೂ ರಾಜ್ಯದ ನಾಡು ನುಡಿ, ಭಾಷೆ ಕವಿಗಳ ಬಗ್ಗೆ ಮಾಹಿತಿ ನೀಡುವ ಡಿಸ್‌ಪ್ಲೇ ಹಾಕಲಾಗಿದೆ.

ಇದ್ರಲ್ಲಿ ಖಾಸಗೀ ಕಂಪನಿಗಳ ವಾಹನಗಳ ಬರುವ ಹೋಗುವ ಸಮಯ ಕೂಡ ಅಳವಡಿಸಲಾಗಿದೆ. ಕುಳಿತುಕೊಳ್ಳಲು ಸುಸಜ್ಜಿತ ಆಸನ, ಹಸಿವಾದ್ರೆ ಬಿಸ್ಕತ್ ಜ್ಯೂಸ್ ಗಾಗಿ ಕ್ಯಾಶ್ ಲೆಸ್ ವ್ಯವಹಾರ ಮಾಡಿ ಆಹಾರ ಪದಾರ್ಥ ಪಡೆಯೋ ವ್ಯವಸ್ಥೆ ಮಾಡಲಾಗಿದೆ.

ದೂರದ ಊರಿಗೆ ಪಯಣ ಬೆಳಸುವ ನಿಟ್ಟಿನಲ್ಲಿ ಬಸ್ ಹತ್ತುವ ಪ್ರಯಾಣಿಕರು ಇದೇ ಬಸ್ ಸ್ಟಾಪ್ ನಿಂದ ಸ್ಕ್ಯಾನ್ ಮಾಡಿ ಆಹಾರ ಪದಾರ್ಥ ತೆಗೆದುಕೊಳ್ಳಬಹುದು.

ಅದರ ಜೊತೆ ಚಾರ್ಜರ್ ಹಾಗೂ ಬಸ್ ಹೋಗುವ ದಾರಿ, ಮತ್ತು ಸಾರ್ವಜನಿಕ ಸೇವೆ ಪಡೆದುಕೊಳ್ಳುವ ಮಹತ್ವವನ್ನೂ ಸಾರಲಾಗಿದೆ. ಅದ್ರಲ್ಲೂ ವಿಶೇಷ ಏನು ಅಂದ್ರೆ ಮಹಿಳೆಯರ ನ್ಯಾಪ್ ಕಿನ್ ಕೂಡ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ.

ಕೇವಲ ಮಹಿಳೆಯರ ಸುರಕ್ಷತೆ ಮಾತ್ರವಲ್ಲದೇ ಮಳೆ ನೀರು ಉಳಿಸಿ ಸಸಿಗಳಿಗೆ ಹೋಗಲು ಬಸ್ ಸ್ಟಾಪ್ ಮೇಲೆ ಪೈಪಿನ ವ್ಯವಸ್ಥೆ ಕೂಡ ಮಾಡಲಾಗಿದ್ದು ಪರಿಸರ ಪ್ರಿಯರು ಇದಕ್ಕಾಗಿ ಫುಲ್ ಖುಷ್ ಆಗಿದ್ದಾರೆ.

ಸದ್ಯ ಎಲೆಕ್ಟ್ರಾನಿಕ್ ಸಿಟಿಯ ಒಂದೇ ಭಾಗದಲ್ಲಿ ಈ ಸ್ಮಾರ್ಟ್ ಬಸ್ ಸ್ಟಾಪ್ ನಿರ್ಮಾಣ ಆಗಿದೆ.

ಕೆಲವು ದಿನಗಳ ಬಳಿಕ ಇನ್ನಷ್ಟು ಸ್ಮಾರ್ಟ್ ಬಸ್ ಸ್ಟಾಪ್ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಅನಿರುದ್ಧ್ , ELCITA ಅಧಿಕಾರಿ
Published On - 9:46 am, Thu, 9 March 23