- Kannada News Photo gallery Cricket photos Narendra Modi and his Australian counterpart Anthony Albanese attended IND vs AUS 4th Test in Ahmedabad
IND vs AUS 4th Test: ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್, ರೋಹಿತ್ ಶರ್ಮಾ ಕೈ ಮೇಲೆತ್ತಿ ಖುಷಿ ವ್ಯಕ್ತಪಡಿಸಿದ ನರೇಂದ್ರ ಮೋದಿ
India vs Australia 4th Test: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್- ಗವಾಸ್ಕರ್ ಟ್ರೋಫಿಯ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚಾಲನೆ ಸಿಕ್ಕಿದೆ. ಈ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಉಪಸ್ಥಿತರಿದ್ದಾರೆ.
Updated on: Mar 09, 2023 | 11:28 AM

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಾರ್ಡರ್- ಗವಾಸ್ಕರ್ ಟ್ರೋಫಿಯ (Border-Gavaskar Trophy) ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚಾಲನೆ ಸಿಕ್ಕಿದೆ.

ವಿಶೇಷ ಎಂದರೆ ಈ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಉಪಸ್ಥಿತರಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನವೇ ಪ್ರಧಾನಿಗಳು ಮೈದಾನಕ್ಕೆ ಪ್ರವೇಶಿಸಿ ಉಭಯ ತಂಡದ ನಾಯಕರಿಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಮೋದಿ ಅವರು ನಾಯಕ ರೋಹಿತ್ ಶರ್ಮಾರಿಗೆ ಕ್ಯಾಪ್ ನೀಡಿದರೆ, ಆಸೀಸ್ ನಾಯಕ ಸ್ಟೀವನ್ ಸ್ಮಿತ್ರಿಗೆ ಅಲ್ಬನೀಸ್ ಅವರು ಗ್ರೀನ್ ಕ್ಯಾಪ್ ನೀಡಿದರು.

ಇದೇವೇಳೇ ಇಬ್ಬರು ಪ್ರಧಾನಿಗಳು ಎರಡು ತಂಡಗಳ ಕ್ಯಾಪ್ಟನ್ಗಳಾದ ರೋಹಿತ್ ಶಾರ್ಮಾ ಹಾಗೂ ಸ್ಟಿವ್ ಸ್ಮಿತ್ ಅವರ ಕೈಗಳನ್ನ ಹಿಡಿದು ಮೇಲೆತ್ತಿ ಖುಷಿ ವ್ಯಕ್ತಪಡಿಸಿ ಶುಭಕೋರಿದರು.

ಸಾಲಿನಲ್ಲಿ ನಿಂತು ಆಟಗಾರರರು ರಾಷ್ಟ್ರಗೀತೆಯನ್ನು ಹಾಡುವಾಗ ಮೋದಿಯವರು ರೋಹಿತ್ ಶರ್ಮಾ ಪಕ್ಕದಲ್ಲೇ ನಿಂತು ರಾಷ್ಟ್ರಗೀತೆ ಹಾಡಿದರೆ, ಆಸೀಸ್ ಪ್ರಧಾನಿ ಆಂಟೋನಿ ಕೂಡ ತಮ್ಮ ಆಟಗಾರರ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡಿದರು.

ಭಾರತದ ಪ್ರಧಾನಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಮೈದಾನದಲ್ಲಿ ವಿಶೇಷವಾಗಿ ರ‍್ಯಾಲಿ ನಡೆಸಿದರು. ತೆರೆದ ವಾಹನದಲ್ಲಿ ಕ್ರೀಡಾಂಗಣವನ್ನ ಸುತ್ತು ಹಾಕಿ ಕ್ರಿಕೆಟ್ ಅಭಿಮಾನಿಗಳಿಗೆ ಕೈಬೀಸಿದರು.

ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ಗೆ ಶುಭಕೋರುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ರಾಷ್ಟ್ರಗೀತೆಗೂ ಮುನ್ನ ಸಾಲಿನಲ್ಲಿ ನಿಂತ ಭಾರತೀಯ ಆಟಗಾರರಿಗೆ ಶುಭಕೋರುತ್ತಿರುವ ನರೇಂದ್ರ ಮೋದಿ.

ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಸೆಲ್ಫೀ ಫೋಟೋ ಕ್ಲಿಕ್ಕಿಸುತ್ತಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್.

ಭಾರತ- ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ವೀಕ್ಷಿಸುತ್ತಿರುವ ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್.

ನರೇಂದ್ರ ಮೋದಿ ಹಾಗೂ ಆಂಥೋನಿ ಆಲ್ಬನೀಸ್.
