- TV9 Kannada Kannada News Photos Vijay Deverakonda and Rashmika Mandanna Share Romantic Glimpses from Japan Vacation
ಜಪಾನ್ ಪ್ರವಾಸದ ಸುಂದರ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್
ಟಾಲಿವುಡ್‌ನ ಸ್ಟಾರ್ ನಟರಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಜಪಾನ್‌ನಲ್ಲಿ ಕುಟುಂಬದೊಂದಿಗೆ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರವಾಸದ ಸುಂದರ ಕ್ಷಣಗಳ ರೋಮ್ಯಾಂಟಿಕ್ ಹಾಗೂ ಕ್ಯೂಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇವರ ಈ ಹೊಸ ಚಿತ್ರಗಳು ಅಭಿಮಾನಿಗಳ ಮನಗೆದ್ದು ಭಾರೀ ವೈರಲ್ ಆಗುತ್ತಿವೆ.
Updated on: Nov 16, 2026 | 10:31 AM

ಟಾಲಿವುಡ್‌ನ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಜಪಾನ್ ಪ್ರವಾಸ ತೆರಳಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಜಪಾನ್ ಪ್ರವಾಸಕ್ಕೆ ತೆರಳಿರುವ ಈ ಜೋಡಿ, ಅಲ್ಲಿನ ಸುಂದರ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಪಾತ್ರರ ಜೊತೆ ಕಾಲ ಕಳೆದ ಮಧುರ ಕ್ಷಣಗಳ ಕೆಲವು ಕ್ಯೂಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಜಪಾನ್ ಪ್ರವಾಸದ ಖುಷಿಯನ್ನು ಹಂಚಿಕೊಂಡಿರುವ ವಿಜಯ್ ದೇವರಕೊಂಡ, ನನ್ನ ನೆಚ್ಚಿನ ವ್ಯಕ್ತಿ ಜೊತೆ ಜೀವನವನ್ನು ಸಂಭ್ರಮಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕುಟುಂಬದ ಜೊತೆ ಸುತ್ತಾಡಿದ ಕ್ಷಣಗಳನ್ನು ಅವರು ಫೋಟೋಗಳಲ್ಲಿ ವಿವರಿಸಿದ್ದಾರೆ.

ಈ ಪ್ರವಾಸದಲ್ಲಿ ಅವರು ರಶ್ಮಿಕಾ ಮಂದಣ್ಣ ಅವರ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳನ್ನು ಕೂಡ ಹಂಚಿಕೊಂಡಿದ್ದಾರೆ. ರಶ್ಮಿಕಾ ಹೆಗಲ ಮೇಲೆ ವಿಜಯ್ ತಲೆ ಇಟ್ಟು ಮಲಗಿದ್ದು ಇದಕ್ಕೆ ‘ಹೋಮ್’ ಎಂದು ಮುದ್ದಾಗಿ ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಮತ್ತೊಂದು ಅಫೆಕ್ಷನೇಟ್ ಫೋಟೋಗೆ ‘ಲವ್’ ಎಂದು ಬರೆದುಕೊಂಡಿದ್ದು, ಈ ಕ್ಯೂಟ್ ಚಿತ್ರಗಳು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸುಂದರವಾಗಿ ಬಿಂಬಿಸುತ್ತಿವೆ.

ವಿಜಯ್ ಹಾಗೂ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸದಾ ತಮ್ಮ ಪ್ರವಾಸದ ಒಂದಲ್ಲ ಒಂದು ವಿಶೇಷ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲೂ ಜಪಾನ್‌ನಲ್ಲೇ ವಿಶೇಷ ಪೂಜೆ ಹಾಗೂ ಹೋಮ ನೆರವೇರಿಸಿದ್ದರು. ದೇವರಕೊಂಡ ಕುಟುಂಬದ ಜೊತೆ ದೀಪಾವಳಿ ಆಚರಿಸಿದ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದರು.

ಸಿನಿಮಾ ಲೋಕದಲ್ಲಿ ಸದಾ ಬ್ಯುಸಿಯಾಗಿರುವ ಈ ಸ್ಟಾರ್ ಜೋಡಿ, ತಮ್ಮ ಬಿಡುವಿನ ವೇಳೆಯಲ್ಲಿ ಈ ರೀತಿ ಫ್ಯಾಮಿಲಿ ಜೊತೆ ವೇಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಜಪಾನ್ ಪ್ರವಾಸದ ಈ ಸುಂದರ ಚಿತ್ರಗಳು ವೈರಲ್ ಆಗಿ ಗಮನಸೆಳೆದಿವೆ. ಅಭಿಮಾನಿಗಳು ಈ ಜೋಡಿಯ ಕ್ಯೂಟ್ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



