Viral News: 2 ವರ್ಷದಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದ ನಾಯಿ
ಈ ಶ್ವಾನ ವಿಟಲಿಗೋ ರೋಗಕ್ಕೆ ತುತ್ತಾಗಿ ಕೇವಲ ಎರಡು ವರ್ಷಗಳಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, 2021 ರಲ್ಲಿ ಈ ಶ್ವಾನಕ್ಕೆ ವಿಟಲಿಗೋ ರೋಗವಿರುವುದು ಪತ್ತೆ ಮಾಡಲಾಯಿತು.
1 / 6
ಕೆಲವು ರೋಗಗಳು ಮನುಷ್ಯರಲ್ಲಿ ಮಾತ್ರವಲ್ಲದೆ ವಿವಿಧ ರೀತಿಯ ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ಪ್ರಸ್ತುತ ಅಂತಹ ಒಂದು ಪ್ರಾಣಿ ಸುದ್ದಿಯಲ್ಲಿದೆ. ಹೌದು ಎರಡು ವರ್ಷದ ಹಿಂದೆ ಕಪ್ಪು ಬಣ್ಣದಲ್ಲಿದ್ದ ಶ್ವಾನವೊಂದು ಇದೀಗ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ.
2 / 6
ಈ ಶ್ವಾನ ವಿಟಲಿಗೋ ರೋಗಕ್ಕೆ ತುತ್ತಾಗಿ ಕೇವಲ ಎರಡು ವರ್ಷಗಳಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, 2021 ರಲ್ಲಿ ಈ ನಾಯಿಗೆ ವಿಟಲಿಗೋ ರೋಗವಿರುವುದು ಪತ್ತೆ ಮಾಡಲಾಯಿತು.
3 / 6
ವಿಟಲಿಗೋ ಚರ್ಮದ ಕಾಯಿಲೆಯಾಗಿದ್ದು , ಮೆಲನಿನ್ ಉತ್ಪಾದಿಸಲು ಕಾರಣವಾಗುವ ಮೆಲನೋಸೈಟ್ಗಳು ನಾಶವಾದಾಗ ಚರ್ಮದಲ್ಲಿ ಈ ಬದಲಾವಣೆಗಳು ಸಂಭವಿಸುತ್ತದೆ. ಮೆಲನಿನ್ ಎಂಬುದು ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣವನ್ನು ನೀಡುವ ಪ್ರಮುಖ ಕೆಲಸವನ್ನು ನಿರ್ವಹಿಸುತ್ತದೆ.
4 / 6
ಮೆಲನೋಸೈಟ್ ನಷ್ಟದ ಪರಿಣಾಮವಾಗಿ, ಮುಖ, ಕೈಗಳು, ಪಾದಗಳು ಮತ್ತು ಜನನಾಂಗಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ತೆಳು ಅಥವಾ ಬಿಳಿ ತೇಪೆಗಳು ಕಾಣಿಸಿಕೊಳ್ಳುತ್ತವೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದರೂ ಸಹ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ.
5 / 6
ನಾಯಿಯ ಮಾಲೀಕರಾದ ಮ್ಯಾಟ್ ಸ್ಮಿತ್ ಅವರು ತಮ್ಮ ನಾಯಿಯ ಕಾಯಿಲೆಯ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ನಾಯಿ ಸಂಪೂರ್ಣವಾಗಿ ಬಣ್ಣ ಬದಲಾಯಿಸಿಕೊಂಡಿರುವ ಫೋಟೋಗಳನ್ನು ಕಾಣಬಹುದು.
6 / 6
ಪ್ರಾರಂಭದಲ್ಲಿ ಕಪ್ಪು ಬಣ್ಣದ ಶ್ವಾನದ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದಂತೆ ವರ್ಷಗಳ ಕಳೆದಂತೆ ಕೇವಲ ಎರಡು ವರ್ಷಗಳಲ್ಲಿ ನಾಯಿ ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ.