Relationships: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2023 | 7:20 PM

ಪ್ರತಿಯೊಬ್ಬರಿಗೂ ಸ್ನೇಹಿತರು ಇದ್ದೇ ಇರುತ್ತಾರೆ. ಕೆಲವರಿಗೆ ಬೆರಳೆಣಿಕೆಯ ಸ್ನೆಹಿತರಿದ್ದರೆ, ಇನ್ನೂ ಕೆಲವರಿಗೆ ಸ್ನೇಹಿತರ ದಂಡೆ ಇರುತ್ತದೆ. ಆದರೆ ಹೆಚ್ಚಿನವರು ಮದುವೆಯಾದ ಬಳಿಕ ಸ್ನೇಹಿತರ ಜೊತೆಗಿನ ಒಡನಾಟವನ್ನು ಕಡಿಮೆಗೊಳಿಸುತ್ತಾರೆ. ನೀವು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕವೂ ನಿಮ್ಮ ಸ್ನೇಹಿತರ ಜೊತೆಗಿನ ಸ್ನೇಹವನ್ನು ಶಾಶ್ವತವಾಗಿರಿಸಲು ಬಯಸಿದರೆ ಈ ಕೆಲವು ಮಾರ್ಗಗಳನ್ನು ಪಾಲಿಸಿ.

1 / 6
ಸ್ನೇಹವು ನಮ್ಮ ಜೀವನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸಿಹಿ ಅಥವಾ ಕಹಿ ಘಟನೆಗಳು ನಮ್ಮ ಜೀವನದಲ್ಲಿ ಸಂಭವಿಸಿದಾಗ ಆ ವಿಷಯವನ್ನು ಮೊದಲು ನಮ್ಮ ಸ್ನೇಹಿತರಿಗೆ ತಿಳಿಸುತ್ತೇವೆ. ಕಷ್ಟ ಅಂತ ಬಂದಾಗ ನಮಗೆ ಸ್ನೇಹಿತ ಹೆಗಲಿಗೆ ಹೆಗಲಾಗಿ ನಿಲ್ಲುತ್ತಾರೆ. ಹಾಗೆಯೇ ನಮ್ಮ ಸಂತೋಷದಲ್ಲಿ ಅವರ ಸಂತೋಷವನ್ನು ಕಾಣುತ್ತಾರೆ. ಪ್ರತಿಯೊಬ್ಬ ಸ್ನೇಹಿತರೂ ಕೂಡಾ ನಮ್ಮ ಸ್ನೇಹವೂ ಶಾಶ್ವತವಾಗಿರಬೇಕು, ಜೀವನಪರ್ಯಂತ ನಮ್ಮ ಸಂಬಂಧ ಇಷ್ಟೇ ಪರಿಶುದ್ಧತೆಯಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲರ ಜೀವನದಲ್ಲೂ ಮೊದಲಿದ್ದ ಸ್ನೇಹ ಮಾದುವೆಯಾದ ನಂತರ ಇರುವುದಿಲ್ಲ.  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಹೆಚ್ಚಿನವರು ಕೆಲಸದ ಒತ್ತಡದ ಕಾರಣದಿಂದಲೋ, ಜವಾಬ್ದಾರಿಗಳು ಹೆಗಲೇರಿದೆ ಎಂಬ ಕಾರಣದಿಂದಲೋ ಎಲ್ಲರಿಂದ ದೂರವಿದ್ದು ತಮ್ಮ ಜೀವನವನ್ನು ನೋಡಿಕೊಳ್ಳುತ್ತಾರೆ. ಆದರೂ ಮನಸ್ಸಿನ ಮೂಲೆಯಲ್ಲಿ ಸ್ನೇಹಿತರ ಬಗ್ಗೆ ನೆನಪು ಇದ್ದೇ ಇರುತ್ತದೆ. ಈ ಸ್ನೇಹ ಸಂಬಂಧವನ್ನು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ಕಾಪಾಡಿಕೊಳ್ಳಲು ಈ ಮಾರ್ಗಗಳನ್ನು ಪಾಲಿಸಿ.

2 / 6
ಸಂವಹನವನ್ನು ಮುಕ್ತವಾಗಿರಿಸಿ ಮತ್ತು ಪ್ರಾಮಾಣಿಕವಾಗಿರಿಸಿ: ಪ್ರತಿಯೊಂದು ಆರೋಗ್ಯಕರ ಸಂಬಂಧಕ್ಕೆ ಸಂವಹನವು ಅಗತ್ಯವಾಗಿರುತ್ತದೆ. ಇದು ಸ್ನೇಹಕ್ಕೂ ಅನ್ವಯಿಸುತ್ತದೆ. ಹಾಗಾಗಿ ನೀವು ಮಾದುವೆಯಾದ ಬಳಿಕವೂ ನಿಮ್ಮ ಸ್ನೇಹಿತರೊಂದಿಗೆ ಫೋನ್ ಕರೆ ಮಾಡುವ ಮೂಲಕವೋ ಅಥವಾ ಮೆಸೆಜ್ ಮಾಡುವ ಮೂಲಕವೋ ನಿಯಮಿತವಾಗಿ ಸಂಪರ್ಕದಲ್ಲಿರಿ. ಮತ್ತು ಮುಕ್ತವಾಗಿ ಸ್ನೇಹಿರೊಂದಿಗೆ ಸಂವಹನವನ್ನು ನಡೆಸುತ್ತಾ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇದು ನಿಮ್ಮ ಸ್ನೆಹ ಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ.

3 / 6
ನಿಮ್ಮ ಸ್ನೇಹಿತರಿಗೆ ಸಮಯವನ್ನು ಮೀಸಲಿಡಿ: ಮದುವೆ ಬಳಿಕ ಜವಾಬ್ದಾರಿಯ ಕಾರಣದಿಂದ ಪ್ರತಿಯೊಬ್ಬರೂ ತಮ್ಮ ಕಾರ್ಯದಲ್ಲಿ ಕಾರ್ಯನಿರತರಾಗಿರುತ್ತಾರೆ. ಹಾಗಿದ್ದರೂ ನಿಮ್ಮ ಸ್ನೇಹ ಸಂಬಂಧವನ್ನು ಕಡೆಗಣಿಸಬೇಡಿ. ನೀವು ಸ್ವಲ್ಪ ಸಮಯವನ್ನು ಸ್ನೆಹಿತರಿಗಾಗಿ ಮೀಸಲಿಟ್ಟು ತಿಂಗಳಿಗೊಮ್ಮೆಯಾದರೂ ಅವರನ್ನು ಭೇಟಿಯಾಗುವ ಮೂಲಕ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

4 / 6
ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳಿ: ನಿಮ್ಮ ಸ್ನೇಹಿತರೊಂದಿಗೆ ಬಲವಾದ ಬಂಧವನ್ನು ನಿರ್ಮಿಸಲು ಪರಸ್ಪರ ಆಸಕ್ತಿಗಳನ್ನು ಹಂಚಿಕೊಳ್ಳಿ. ಜೊತೆಯಾಗಿ ಟ್ರೆಕ್ಕಿಂಗ್ ಹೋಗುವ ಮೂಲಕ, ಟೂರ್ ಹೋಗುವ ಮೂಲಕ ಇಬ್ಬರು ಜೊತೆಯಾಗಿ ನಿಮ್ಮ ಆಸಕ್ತಿಗಳನ್ನು ಹಂಚಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಹೆಚ್ಚು ಸಮಯ ಸ್ನೇಹಿರ ಜೊತೆ ಕಳೆದಂತಾಗುತ್ತದೆ.

5 / 6
ಸಹಾನುಭೂತಿ ಮತ್ತು ಬೆಂಬಲವನ್ನು ನೀಡಿ: ಬೆಂಬಲ ಮತ್ತು ಸಹಾನೂಭೂತಿ ಯಾವುದೇ ಆರೋಗ್ಯಕರ ಸಂಬಂಧದ ಎರಡು ಪ್ರಮುಖ ಅಂಶವಾಗಿದೆ. ಸ್ನೇಹಿರು ನಿಮ್ಮ ಅಗತ್ಯವನ್ನು ಬಯಸಿದಾಗ ಅವರೊಂದಿಗೆ ನೀವು ಇದ್ದು, ಬೆಂಬಲವನ್ನು ನೀಡಿ. ಅವರ ಗುರಿ ಮತ್ತು ಕನಸುಗಳಿಗೆ ಪ್ರೋತ್ಸಾಹವನ್ನು ನೀಡಿ. ಇದರ ಮೂಲಕ ನಿಮ್ಮ ಸ್ನೇಹವನ್ನು ಮತ್ತಷ್ಟು ಬಲಪಡಿಸಬಹುದು.

6 / 6
ಪರಸ್ಪರ ವಿಚಾರಗಳನ್ನು ಗೌರವಿಸಿ: ಪ್ರತಿಯೊಂದು ಸಂಬಂಧದಲ್ಲೂ ಕೆಲವೊಂದು ವಿಚಾರಗಳು ನಿರ್ಣಾಯಕವಾಗಿರುತ್ತದೆ. ಮತ್ತು ನಿಮ್ಮ ಸ್ನೇಹಿತರ ವಿಚಾರಗಳನ್ನು  ಗೌರವಿಸಿ. ಮತ್ತು ಅವರಿಗೆ ನಿಮ್ಮ ಅಗತ್ಯವಿದ್ದಾಗ ಅವರಿಗಾಗಿ ಸಮಯವನ್ನು ನೀಡಿ.

Published On - 7:20 pm, Thu, 27 April 23