Updated on: Aug 27, 2021 | 8:50 PM
ಆಗಸ್ಟ್ 27 ರಂದು ಟೋಕಿಯೊ ಪ್ಯಾರಾಲಿಂಪಿಕ್ಸ್ನಿಂದ ಭಾರತಕ್ಕೆ ಸಿಹಿ ಸುದ್ದಿ ಬಂದಿದೆ. ಭಾವಿನಾ ಪಟೇಲ್ ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್ ಕ್ಲಾಸ್ 4. ಸೆಮಿ ಫೈನಲ್ ತಲುಪುವ ಮೂಲಕ ದೇಶಕ್ಕೆ ಪದಕ ಖಾತ್ರಿ ಪಡಿಸಿದರು. 34 ವರ್ಷದ ಹಮದಾಬಾದ್‌ನ ಭಾವಿನಾ 2016 ರ ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸೆರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ಅವರನ್ನು 3-0 ನೇರ ಗೇಮ್‌ಗಳಲ್ಲಿ ಸೋಲಿಸಿದರು.
ಭಾವಿನಾ ಈ ಪಂದ್ಯಾವಳಿಯಲ್ಲಿ ಉತ್ತಮ ಆಟವನ್ನು ತೋರಿಸಿದ್ದಾರೆ. ಅವರು ಗುಂಪಿನ ಎರಡನೇ ಪಂದ್ಯದಲ್ಲಿ ವಿಶ್ವದ ನಂಬರ್ ಆಟಗಾರರ್ತಿನ್ನು ಸೋಲಿಸಿದರು. ಇದರ ನಂತರ, 16 ರ ಸುತ್ತಿನಲ್ಲಿ, ಅವರು ವಿಶ್ವದ ಎಂಟನೇ ಶ್ರೇಯಾಂಕಿತ ಆಟಗಾರ್ತಿಯನ್ನು ಸೋಲಿಸಿದರು. ಜೊತೆಗೆ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ವಿಶ್ವ ಎರಡನೇ ಶ್ರೇಯಾಂಕಿತ ಆಟಗಾರ್ತಿಯನ್ನು ಸೋಲಿಸಿದರು.
ಭಾವಿನಾ ಟೇಬಲ್ ಟೆನಿಸ್ ಅನ್ನು ಹವ್ಯಾಸವಾಗಿ ಆಡಲು ಪ್ರಾರಂಭಿಸಿದರು. 2011 ರಲ್ಲಿ, ಅವರು ಪಿಟಿಟಿ ಥೈಲ್ಯಾಂಡ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ವಿಶ್ವ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ತಲುಪಿದರು. ಎರಡು ವರ್ಷಗಳ ನಂತರ, ಅವರು ಏಷ್ಯನ್ ಟೆನಿಸ್ ಚಾಂಪಿಯನ್‌ಶಿಪ್ ಗೆದ್ದರು. ತರಬೇತುದಾರ ಲಾಲನ್ ದೋಶಿಯಲ್ಲದೆ, ತಂಡದ ಅಧಿಕೃತ ತೇಜಲ್ಬೆನ್ ಲಖಿಯಾ ಕೂಡ ಪಂದ್ಯದ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ನೀಡುತ್ತಾರೆ.
Bhavina