Afghanistan Natural Resources: ಅಫ್ಘಾನಿಸ್ತಾನದಲ್ಲಿ ಅಗಾಧ ಖನಿಜ ಸಂಪತ್ತು ಲೆಕ್ಕಕ್ಕೆ ಸಿಕ್ಕಲ್ಲ, ಕೈಗೆ ದಕ್ಕಲ್ಲ ಏಕೆ ಗೊತ್ತಾ?

| Updated By: Srinivas Mata

Updated on: Aug 28, 2021 | 5:58 PM

ಅಫ್ಘಾನಿಸ್ತಾನದಲ್ಲಿನ ಖನಿಜ ಸಂಪತ್ತಿನ ಲೆಕ್ಕಾಚಾರ ಹಾಕುವುದು ಬಹಳ ಕಷ್ಟ ಆಗುತ್ತಿರುವುದು ಏಕೆ ಮತ್ತು ಎಲ್ಲಿ? ಇಲ್ಲಿದೆ ವಿಸ್ತೃತವಾದ ಲೇಖನ.

1 / 8
ಹಲವರ ಪಾಲಿಗೆ ಅದು ಸ್ಮಶಾನಗಳ ಮೇಲೆ ಕಟ್ಟಿದ ಸಾಮ್ರಾಜ್ಯ ಅಫ್ಘಾನಿಸ್ತಾನ. ಆದರೆ ಅಲ್ಲಿನ ಖನಿಜ ಸಂಪತ್ತಿನ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಬೆರಗಾಗುವ ಮಟ್ಟಿಗೆ ಬೆಳೆಯುತ್ತಾ ಹೋಗುತ್ತದೆ. ಈಗ ಹೇಳ ಹೊರಟಿರುವುದು ರಕ್ತಪಿಪಾಸುಗಳ ಕೈಲಿ ಸಿಕ್ಕು ನರಳುತ್ತಿರುವ ಅದೇ ಅಫ್ಘಾನಿಸ್ತಾನದ ಬಗ್ಗೆ. ಭೂಮಿ ಆಳದ ಅಲ್ಲಿನ ಖನಿಜಗಳು ಮತ್ತು ಲಿಥಿಯಂನಿಂದಾಗಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ದೇಶಗಳ ಗಮನ ಅತ್ತ ಸೆಳೆಯುವಂತೆ ಮಾಡುತ್ತಿದೆ ಅನ್ನೋದು ಸದ್ಯದ ಮಾತು. ಆದರೆ ಹಲವರು ಹೇಳುತ್ತಿರುವಂತೆ ಖನಿಜ ಭಾಂಡಾರದ ಆರ್ಥಿಕತೆ ಸುತ್ತಲೂ ಹಬ್ಬಿ ನಿಂತಿರುವ ಅಫ್ಘಾನಿಸ್ತಾನದ ಇಂದಿನ ಸನ್ನಿವೇಶವು ಅಂದುಕೊಂಡಷ್ಟು ಸರಳವಾಗಿಲ್ಲ ಹಾಗೂ ಅರ್ಥ ಮಾಡಿಕೊಳ್ಳುವಷ್ಟು ಸುಲಭವಾಗಿಯೂ ಇಲ್ಲ. ಅದನ್ನೇ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ವಿವರಿಸಲು ಇಲ್ಲಿ ಪ್ರಯತ್ನಿಸಲಾಗುತ್ತಿದೆ.

2 / 8
ಆರಂಭದಲ್ಲೇ ಪ್ರಸ್ತಾವ ಮಾಡಿದಂತೆ ಅಫ್ಘಾನಿಸ್ತಾನವು ಗಮನ ಸೆಳೆಯುತ್ತಿರುವುದು ಅಗಾಧ ಖನಿಜ ಸಂಪತ್ತಿನ ಕಾರಣಕ್ಕೆ. ಈ ದೇಶವು ಇರುವುದೇ ಟೆಥ್ಯಾನ್ ಮೆಟಲರ್ಜಿಕ್ ಬೆಲ್ಟ್ (TMB) ಮೇಲೆ. ಅದು ಯುರೋಪ್​ನಿಂದ ಶುರುವಾಗಿ ಟರ್ಕಿ, ಅಫ್ಘಾನಿಸ್ತಾನ ಮತ್ತು ಇರಾನ್​ ತನಕ ವ್ಯಾಪಿಸಿದೆ. ತಜ್ಞರು ಹೇಳುವಂತೆ, ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಲೋಹಗಳು ಮತ್ತು ಖನಿಜಗಳು ಇರುವಂಥ ಪ್ರದೇಶಗಳಿವು. ಲಿಥಿಯಂ, ಚಿನ್ನ, ಕಬ್ಬಿಣ, ತಾಮ್ರ ಮತ್ತು ರತ್ನಗಳಿಂದ ಕೂಡಿವೆ. ಅದರಲ್ಲೂ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳು, ಅತ್ಯುತ್ತಮ ಬ್ಯಾಟರಿ, ಆಧುನಿಕ ಮಿಲಿಟರಿ ಹಾರ್ಡ್​ವೇರ್ ಹಾಗೂ ಅತ್ಯಾಧುನಿಕ ಕಂಪ್ಯೂಟರ್ ಚಿಪ್​ಸೆಟ್​​ಗಳನ್ನು ತಯಾರಿಸಲು ಬೇಕಾದ ಅತಿ ವಿರಳ ಲೋಹವು ಅಫ್ಘಾನಿಸ್ತಾನದ ಭೂಮಿಯೊಳಗಿರುವುದರಿಂದ ಜಾಗತಿಕ ಆರ್ಥಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ, ಇದರ ಜತೆಗೆ ತೈಲ, ನೈಸರ್ಗಿಕ ಅನಿಲ, ಯುರೇನಿಯಂ, ಬಾಕ್ಸೈಟ್, ಕಲ್ಲಿದ್ದಲು, ವಿರಳ ಧಾತುಗಳು, ಕ್ರೋಮಿಯಂ, ಲೀಡ್, ಝಿಂಕ್, ಟಾಲ್ಕ್, ಸಲ್ಫರ್, ಟ್ರಾವಂಟೈನ್, ಜಿಪ್ಸಂ, ಮಾರ್ಬಲ್ ಇವೆಲ್ಲವೂ ದೊರೆಯುತ್ತವೆ.

3 / 8
ಅಫ್ಘಾನಿಸ್ತಾನದ ಬಜೆಟ್ ಗಾತ್ರವೇ 45 ಸಾವಿರ ಕೋಟಿ ರೂ.

4 / 8
2010ರ ಅಂದಾಜಿನಂತೆ ಖನಿಜ ಸಂಪತ್ತಿನ ಮೌಲ್ಯ 3 ಲಕ್ಷ ಕೋಟಿ ಯುಎಸ್​ಡಿ

5 / 8
ಸಿಕ್ಕಾಪಟ್ಟೆ ಭದ್ರತಾ ಸಮಸ್ಯೆ

ಸಿಕ್ಕಾಪಟ್ಟೆ ಭದ್ರತಾ ಸಮಸ್ಯೆ

6 / 8
ಸವರನ್ ಗೋಲ್ಡ್ ಬಾಂಡ್ (Sovereign Gold Bond) ಸ್ಕೀಮ್ ಆಗಸ್ಟ್ 30, 2021ರಿಂದ ಐದು ದಿನಗಳವರೆಗೆ ಸಬ್​ಸ್ಕ್ರಿಪ್ಷನ್​ಗಾಗಿ ಮುಕ್ತವಾಗಿ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಘೋಷಿಸಿದೆ. ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021-2022, ಸರಣಿ 6ರ ವಿತರಣಾ ಬೆಲೆಯನ್ನು ಪ್ರತಿ ಗ್ರಾಂ ಚಿನ್ನಕ್ಕೆ 4,732 ರೂಪಾಯಿಯಂತೆ ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ, "ಚಿನ್ನದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದೀರಾ? ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು 6 ಚಿನ್ನದಂಥ ಕಾರಣಗಳು ಇಲ್ಲಿವೆ. ಎಸ್‌ಬಿಐ ಗ್ರಾಹಕರು ಈ ಬಾಂಡ್‌ಗಳಲ್ಲಿ http://onlinesbi.comನ ಇ-ಸೇವೆಗಳ ಅಡಿಯಲ್ಲಿ ಹೂಡಿಕೆ ಮಾಡಬಹುದು".

7 / 8
ಅಸ್ಪಷ್ಟ ವರದಿಗಳು

ಅಸ್ಪಷ್ಟ ವರದಿಗಳು

8 / 8
ಅಫ್ಘಾನಿಸ್ತಾನದತ್ತ ಇತರ ದೇಶಗಳ ಚಿತ್ತ

ಅಫ್ಘಾನಿಸ್ತಾನದತ್ತ ಇತರ ದೇಶಗಳ ಚಿತ್ತ

Published On - 5:56 pm, Sat, 28 August 21