Wimbledon 2024: ಸತತ 2ನೇ ಬಾರಿಗೆ ಜೊಕೊವಿಚ್​ರನ್ನು ಮಣಿಸಿ ವಿಂಬಲ್ಡನ್ ಕಿರೀಟ ತೊಟ್ಟ ಅಲ್ಕರಾಝ್..!

|

Updated on: Jul 14, 2024 | 9:42 PM

Wimbledon 2024 Men's Singles Final: ಸ್ಪೇನ್‌ನ ಯುವ ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಝ್ ಸತತ ಎರಡನೇ ವರ್ಷ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. 21 ವರ್ಷದ ಅಲ್ಕರಾಝ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 6-2, 6-2, 7-6 (7-4) ನೇರ ಸೆಟ್‌ಗಳಿಂದ 7 ಬಾರಿಯ ಚಾಂಪಿಯನ್ ಸರ್ಬಿಯಾದ ಅನುಭವಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

1 / 7
ಲಂಡನ್​ನ ಸೆಂಟರ್ ಕೋರ್ಟ್​ ಅಂಗಳದಲ್ಲಿ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್​ ಪಂದ್ಯದಲ್ಲಿ ಸರ್ಬಿಯಾದ ಟೆನಿಸ್ ದೈತ್ಯ ಜೊಕೊವಿಚ್​ರನ್ನು ಮಣಿಸಿದ ಸ್ಪೇನ್ ದೇಶದ ಯುವ ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಝ್ ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

2 / 7
ಕಳೆದ ಬಾರಿಯೂ ಇದೇ ಜೋಡಿ ವಿಂಬಲ್ಡನ್ ಫೈನಲ್​ಗೆ ಲಗ್ಗೆ ಇಟ್ಟಿದ್ದವು. ಆ ಪಂದ್ಯದಲ್ಲಿ ಸರ್ಬಿಯಾದ ಸೂಪರ್​ ಸ್ಟಾರ್ ಜೊಕೊವಿಚ್ ಅವರನ್ನು ಇದೇ ಅಲ್ಕರಾಝ್ 1-6, 7-6, 6-1, 3-6, 6-4 ಸೆಟ್‌ಗಳಿಂದ ಮಣಿಸಿ ಚೊಚ್ಚಲ ವಿಂಬಲ್ಡನ್ ಗೆದ್ದು ಬೀಗಿದ್ದರು.

3 / 7
ಇದೀಗ ಈ ಬಾರಿಯೂ ಅಲ್ಕರಾಝ್, 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು 6-2, 6-2, 7-6 (7-4) ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

4 / 7
ಪಂದ್ಯದ ಮೊದಲ ಎರಡು ಸೆಟ್‌ಗಳಲ್ಲಿ ಅಲ್ಕರಾಝ್ ಪ್ರಾಬಲ್ಯ ಮೆರೆದರು. ಮೊದಲ ಸೆಟ್‌ ಅನ್ನು 6-2 ರಿಂದ ಗೆದ್ದುಕೊಂಡಿದ್ದ ಅಲ್ಕರಾಝ್, ಎರಡನೇ ಸೆಟ್ ಅನ್ನು 6-2 ರಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇತ್ತ ಜೊಕೊವಿಕ್ ಮೂರನೇ ಸೆಟ್‌ನಲ್ಲಿ ಪುನರಾಗಮನ ಮಾಡಿದರಾದರೂ ಆ ಹೊತ್ತಿಗೆ ಅದು ತುಂಬಾ ತಡವಾಗಿತ್ತು.

5 / 7
ಪಂದ್ಯದ ಮೂರನೇ ಸೆಟ್‌ನಲ್ಲಿ, ಮೊದಲಿಗೆ ನೊವಾಕ್ ಜೊಕೊವಿಚ್, ಕಾರ್ಲೋಸ್ ವಿರುದ್ಧ ಪ್ರಾಬಲ್ಯ ತೋರಿದರು. ಹೀಗಾಗಿ ಒಂದು ಹಂತದಲ್ಲಿ ಸ್ಕೋರ್ 4-2 ಆಗಿತ್ತು. ಆದರೆ ನಂತರ ಕಾರ್ಲೋಸ್ ಅಲ್ಕರಾಝ್ ಪುನರಾಗಮನ ಮಾಡಿ ಸ್ಕೋರ್ ಅನ್ನು 6-6ಕ್ಕೆ ಕೊಂಡೊಯ್ದರು.

6 / 7
ಹೀಗಾಗಿ ಮೂರನೇ ಸೆಟ್ ಅನ್ನು ಟೈಬ್ರೇಕ್ ಮೂಲಕ ನಿರ್ಧರಿಸಬೇಕಾಯಿತು. ಅಂತಿಮವಾಗಿ ಕಾರ್ಲೋಸ್ ಅಲ್ಕರಾಝ್ 7-4 ರಿಂದ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

7 / 7
ಇತ್ತ 8 ನೇ ಬಾರಿಗೆ ವಿಂಬಲ್ಡನ್ ಗೆಲ್ಲುವ ಗುರಿಯೊಂದಿಗೆ ಅಂಗಳಕ್ಕಿಳಿದಿದ್ದ ನೊವಾಕ್ ಜೊಕೊವಿಚ್, ಕಳೆದ ಬಾರಿಯಂತೆ ಈ ಬಾರಿಯೂ ಸೋಲಿನ ನಿರಾಸೆ ಅನುಭವಿಸಬೇಕಾಯಿತು.

Published On - 9:18 pm, Sun, 14 July 24