ಚಳಿಗಾಲದಲ್ಲಿ ಮೈಕೈ ನೋವು ಕಡಿಮೆ ಮಾಡುವುದು ಹೇಗೆ?
ಚಳಿಗಾಲವು ದೇಹದಲ್ಲಿ ನೋವುಗಳನ್ನು ಹೆಚ್ಚು ಮಾಡುತ್ತದೆ. ನಿಯಮಿತವಾದ ವ್ಯಾಯಾಮವು ನಿಮ್ಮ ಸ್ನಾಯುಗಳನ್ನು ಆ್ಯಕ್ಟಿವ್ ಆಗಿಡಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಸಕ್ರಿಯವಾಗಿಡಲು ಯೋಗ ಅಥವಾ ವಾಕಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಚಳಿಗಾಲದಲ್ಲಿ ದೇಹದ ನೋವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
1 / 9
ಚಳಿಗಾಲವು ದೇಹದಲ್ಲಿ ನೋವುಗಳನ್ನು ಹೆಚ್ಚು ಮಾಡುತ್ತದೆ. ಚಳಿಗಾಲದಲ್ಲಿ ದೇಹದ ನೋವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
2 / 9
ನಿಯಮಿತವಾದ ವ್ಯಾಯಾಮವು ನಿಮ್ಮ ಸ್ನಾಯುಗಳನ್ನು ಆ್ಯಕ್ಟಿವ್ ಆಗಿಡಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಸಕ್ರಿಯವಾಗಿಡಲು ಯೋಗ ಅಥವಾ ವಾಕಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
3 / 9
ಚಳಿಯಿಂದ ನಿಮ್ಮ ದೇಹವನ್ನು ರಕ್ಷಿಸಲು ಪದರಗಳಲ್ಲಿ ಉಡುಗೆ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಹೀಟಿಂಗ್ ಪ್ಯಾಡ್‌ಗಳು ಅಥವಾ ಬಿಸಿನೀರಿನ ಬಾಟಲಿಗಳನ್ನು ಬಳಸಿ ನೋವುಗಳಿಗೆ ಒಳಗಾಗುವ ದೇಹದ ಜಾಗಕ್ಕೆ ಉಷ್ಣತೆಯನ್ನು ನೀಡಿ.
4 / 9
ಸಾಕಷ್ಟು ನೀರು ಕುಡಿಯುವುದು ನಿಮ್ಮ ಕೀಲುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಸ್ನಾಯು ಸೆಳೆತದ ಅಪಾಯವನ್ನು ಕಡಿಮೆ ಮಾಡುತ್ತದೆ.
5 / 9
ಸಿಟ್ರಸ್ ಹಣ್ಣುಗಳು, ಹಸಿರು ಸೊಪ್ಪು, ತರಕಾರಿಗಳು ಮತ್ತು ನಟ್ಸ್ಗಳಂತಹ ಆಹಾರಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
6 / 9
ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನಿಮ್ಮ ಆಹಾರದಲ್ಲಿ ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ.
7 / 9
ಕುಳಿತುಕೊಳ್ಳುವಾಗ, ನಿಂತಿರುವಾಗ ಅಥವಾ ಮಲಗುವಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ದೇಹದ ನೋವನ್ನು ತಡೆಯಲು ಸಹಾಯ ಮಾಡುತ್ತದೆ.
8 / 9
ಬೆಚ್ಚಗಿನ ಸ್ನಾನ ನಿಮ್ಮ ದೇಹಕ್ಕೆ ಆರಾಮ ನೀಡುತ್ತದೆ. ನೀರಿಗೆ ಸ್ವಲ್ಪ ಎಣ್ಣೆ ಸೇರಿಸಿಕೊಂಡು ಸ್ನಾನ ಮಾಡಿದರೆ ಇನ್ನೂ ಹಿತವಾಗಿರುತ್ತದೆ.
9 / 9
ಗಿಡಮೂಲಿಕೆ ಚಹಾಗಳು ಮತ್ತು ಸೂಪ್‌ಗಳಂತಹ ಬೆಚ್ಚಗಿನ ಪಾನೀಯಗಳನ್ನು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್ ಮಾಡಿ.