ಬ್ಯಾಂಕಾಕ್‌ನಲ್ಲಿ ವಿಶ್ವ ಮಲಯಾಳಿ ಮಂಡಳಿಯ ಜಾಗತಿಕ ಸಮ್ಮೇಳನ 2025 ಆರಂಭ

Updated on: Jul 26, 2025 | 2:20 PM

ಬ್ಯಾಂಕಾಕ್‌ನಲ್ಲಿ ಜು. 25 ರಂದು ವಿಶ್ವ ಮಲಯಾಳಿ ಮಂಡಳಿಯ (World Malayalee Council) 14ನೇ ದ್ವೈವಾರ್ಷಿಕ ಸಮ್ಮೇಳನ ಶೆರಾಟನ್ ಹೋಟೆಲ್‌ನಲ್ಲಿ ಆರಂಭವಾಗಿದ್ದು, ಈ ಸಮ್ಮೇಳನವು ಮಂಡಳಿಯ ಪ್ರಮುಖ ಸಭೆಗಳು ಹಾಗೂ ಹೊಸ ಜಾಗತಿಕ ಪದಾಧಿಕಾರಿಗಳ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಒಳಗೊಂಡಿದೆ. ಮಾತ್ರವಲ್ಲ ಈ ಸಮ್ಮೇಳನವು ಡಬ್ಲ್ಯೂಎಂಸಿ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಇದು ಬಹುತೇಕ ಎಲ್ಲಾ ದೇಶಗಳ ಉಪಸ್ಥಿತಿಯನ್ನು ಹೊಂದಿರುವ ಮಲಯಾಳಿಗಳ ಅತಿದೊಡ್ಡ ಜಾಗತಿಕ ಸಮಾರಂಭವಾಗಲಿದೆ.

1 / 4
ವಿಶ್ವ ಮಲಯಾಳಿ ಮಂಡಳಿಯ (World Malayalee Council) 14ನೇ ದ್ವೈವಾರ್ಷಿಕ ಸಮ್ಮೇಳನವು ಜುಲೈ 25 ರಂದು ರಾಯಲ್ ಆರ್ಕಿಡ್ ಶೆರಾಟನ್ ಹೋಟೆಲ್‌ನಲ್ಲಿ ಆರಂಭವಾಗಿದೆ. ಈ ಸಮ್ಮೇಳನದಲ್ಲಿ ಪ್ರಪಂಚದಾದ್ಯಂತ ಆರು ಪ್ರದೇಶಗಳ 70 ಪ್ರಾಂತ್ಯಗಳಿಂದ ದಾಖಲೆಯ 565 ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಮಲಯಾಳಿ ಸಂಸ್ಕೃತಿ ಮತ್ತು ಜಾಗತಿಕ ಮನೋಭಾವದ ಆಚರಣೆಯಾಗಲಿದೆ.

2 / 4
ಈ ಸಮ್ಮೇಳನವು, ಜಾಗತಿಕ ಕಾರ್ಯಕಾರಿ ಮಂಡಳಿ ಮತ್ತು ಜಾಗತಿಕ ಸಾಮಾನ್ಯ ಮಂಡಳಿಯ ಪ್ರಮುಖ ಸಭೆಗಳು ಹಾಗೂ ಹೊಸ ಜಾಗತಿಕ ಪದಾಧಿಕಾರಿಗಳ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಒಳಗೊಂಡಿದೆ. ಈ ಸಮ್ಮೇಳನದ ಕುರಿತು ಜಾಗತಿಕ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿದ್ದು, ಅವರು ಹೇಳಿರುವ ಪ್ರಕಾರ, ಈ ಸಮ್ಮೇಳನವು ಡಬ್ಲ್ಯೂಎಂಸಿ (WMC) ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಇದು ಬಹುತೇಕ ಎಲ್ಲಾ ದೇಶಗಳ ಉಪಸ್ಥಿತಿಯನ್ನು ಹೊಂದಿರುವ ಮಲಯಾಳಿಗಳ ಅತಿದೊಡ್ಡ ಜಾಗತಿಕ ಜಾಲವಾಗಿದೆ.

3 / 4
ಅಧ್ಯಕ್ಷ ಥಾಮಸ್ ಮೊಟ್ಟಕಲ್ ಅವರು ಮಾತನಾಡಿ, ವಿಶ್ವಾದ್ಯಂತ ಮಲಯಾಳಿಗಳ ಏಕತೆ, ಸಂಸ್ಕೃತಿ ಮತ್ತು ಕಲ್ಯಾಣವನ್ನು ಉತ್ತೇಜಿಸುವಲ್ಲಿ ಡಬ್ಲ್ಯೂಎಂಸಿ (WMC) ಜಾಗತಿಕವಾಗಿ ಮಲಯಾಳಿ ಸಮುದಾಯವನ್ನು ಒಟ್ಟುಗೂಡಿಸುವಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.

4 / 4
ಖಜಾಂಚಿ ಶಾಜಿ ಮ್ಯಾಥ್ಯೂ ಅವರು ಈ ಸಮ್ಮೇಳನದ ಕುರಿತು ಮಾತನಾಡಿ, ಇದು ಮಲಯಾಳಿ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ ಮತ್ತು ಪ್ರತಿನಿಧಿಗಳ ವಿಚಾರಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಬೌದ್ಧಿಕ ಚರ್ಚೆಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳೊಂದಿಗೆ, ಡಬ್ಲ್ಯೂಎಂಸಿ ಜಾಗತಿಕ ಸಮ್ಮೇಳನ 2025, ಭಾಗವಹಿಸುವವರಿಗೆ ಮರೆಯಲಾಗದ ಅನುಭವವ ನೀಡಲಿದೆ.