- Kannada News Photo gallery Cricket photos Joe Root holds the record for most Test centuries vs India
ಟೀಮ್ ಇಂಡಿಯಾ ವಿರುದ್ಧ ಹೊಸ ಇತಿಹಾಸ ಬರೆದ ಜೋಸೆಫ್ ಎಡ್ವರ್ಡ್ ರೂಟ್
India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ 248 ಎಸೆತಗಳಲ್ಲಿ 14 ಫೋರ್ಗಳೊಂದಿಗೆ 150 ರನ್ ಬಾರಿಸಿದ್ದಾರೆ. ಈ ಭರ್ಜರಿ ಶತಕದೊಂದಿಗೆ ಜೋ ರೂಟ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Updated on: Jul 26, 2025 | 12:04 PM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತದ ವಿರುದ್ಧ ಅತ್ಯಧಿಕ ಸೆಂಚುರಿ ಸಿಡಿಸಿದ್ದು ಯಾರು? ಈ ಪ್ರಶ್ನೆಗೆ ಸದ್ಯದ ಉತ್ತರ ಜೋಸೆಫ್ ಎಡ್ವರ್ಡ್ ರೂಟ್ ಅಲಿಯಾಸ್ ಜೋ ರೂಟ್. ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 150 ರನ್ಗಳ ಮ್ಯಾರಥಾನ್ ಇನಿಂಗ್ಸ್ ಆಡುವ ಮೂಲಕ ರೂಟ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತದ ವಿರುದ್ಧ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ವಿರುದ್ಧ 46 ಟೆಸ್ಟ್ ಇನಿಂಗ್ಸ್ ಆಡಿರುವ ಸ್ಮಿತ್ ಒಟ್ಟು 11 ಶತಕ ಬಾರಿಸಿ ಈ ವಿಶೇಷ ದಾಖಲೆ ನಿರ್ಮಿಸಿದ್ದರು.

ಆದರೀಗ ಸ್ಮಿತ್ ದಾಖಲೆಯನ್ನು ಮುರಿದು ಜೋ ರೂಟ್ ಅಗ್ರಸ್ಥಾನಕ್ಕೇರಿದ್ದಾರೆ. ಜೋ ರೂಟ್ ಭಾರತದ ವಿರುದ್ಧ ಈವರೆಗೆ 62 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಬರೋಬ್ಬರಿ 12 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ಜೋ ರೂಟ್ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ವಿರುದ್ಧ ಆಡಿದ 62 ಇನಿಂಗ್ಸ್ಗಳ ಮೂಲಕ ರೂಟ್ ಈವರೆಗೆ ಕಲೆಹಾಕಿರುವುದು ಬರೋಬ್ಬರಿ 3249 ರನ್ಗಳು. ರೂಟ್ ಅವರನ್ನು ಹೊರತುಪಡಿಸಿ ಭಾರತದ ಅಥವಾ ಇಂಗ್ಲೆಂಡ್ನ ಇನ್ಯಾವುದೇ ಬ್ಯಾಟರ್ 3000 ರನ್ಗಳ ಗಡಿದಾಟಿಲ್ಲ ಎಂಬುದು ವಿಶೇಷ.

ಸದ್ಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೋ ರೂಟ್ ದ್ವಿತೀಯ ಸ್ಥಾನದಲ್ಲಿದ್ದು, ಅಗ್ರಸ್ಥಾನಕ್ಕೇರಲು ಇನ್ನು ಕೇವಲ 2513 ರನ್ಗಳು ಮಾತ್ರ ಬೇಕಿದೆ. ಸದ್ಯ 15921 ರನ್ಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನ್ಕದಲ್ಲಿ ಜೋ ರೂಟ್ ಈ ವಿಶ್ವ ದಾಖಲೆಯನ್ನು ಮುರಿಯಲಿದ್ದಾರಾ ಕಾದು ನೋಡಬೇಕಿದೆ.
