ವಿಶ್ವದ ದುಬಾರಿ ವಿಮಾನ ನಿಲ್ದಾಣವಿದು, ಇಲ್ಲಿ ಒಂದು ಬಾಳೆ ಹಣ್ಣಿಗೆ ಬೆಲೆ ಎಷ್ಟು ಗೊತ್ತಾ?

Updated on: May 01, 2025 | 11:02 AM

ಜೀವನದಲ್ಲಿ ಒಮ್ಮೆಯಾದರೂ ಕೂಡ ವಿಮಾನದಲ್ಲಿ ಪ್ರಯಾಣಿಸಬೇಕೆನ್ನುವ ಕನಸು ಇರುತ್ತದೆ. ಆದರೆ ವಿಮಾನ ಪ್ರಯಾಣಕ್ಕೆ ದುಬಾರಿ ವೆಚ್ಚ ತಗಲುವ ಕಾರಣ ಮಧ್ಯಮ ವರ್ಗ ಹಾಗೂ ಬಡ ಜನರಿಗೆ ಇದು ಈ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ವಿಶ್ವದಲ್ಲೇ ದುಬಾರಿ ವಿಮಾನ ನಿಲ್ದಾಣವೊಂದಿದೆ. ಈ ನಿಲ್ದಾಣ ದಲ್ಲಿ ಆಹಾರ ಮಾತ್ರವಲ್ಲದೇ ಚಹಾ, ಕಾಫಿ ಸೇರಿದಂತೆ ನೀರಿನ ಬಾಟಲಿ ಕೂಡ ಅಷ್ಟೇ ದುಬಾರಿಯಂತೆ. ಹಾಗಾದ್ರೆ ವಿಶ್ವದ ದುಬಾರಿ ಬೆಲೆಯ ವಿಮಾನ ನಿಲ್ದಾಣ ಯಾವುದು? ಅದು ಎಲ್ಲಿದೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

1 / 7
ಆಕಾಶದಲ್ಲಿ ಎತ್ತರಕ್ಕೆ ಹಾರಾಡುವ ವಿಮಾನಗಳನ್ನು ನೋಡುವಾಗ ಖುಷಿಯಾಗುತ್ತದೆ. ಆದರೆ ಈ ಮಧ್ಯಮ ಹಾಗೂ ಬಡವರ್ಗದ ಜನರಿಗೆ ವಿಮಾನ ಪ್ರಯಾಣ ಮಾಡುವುದು ಕನಸಿನ ಮಾತೇ ಸರಿ. ನೀವೇನಾದ್ರೂ ಈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವಿರಿ ಅಥವಾ ಪ್ರಯಾಣಿಸ್ತೀರಿ ಅಂತಾದ್ರೆ ನಿಮ್ಮ ಕೈ ತುಂಬಾ ದುಡ್ಡು ಇರಲೇ ಬೇಕು.

2 / 7
ಈ ವಿಮಾನ ನಿಲ್ದಾಣ ಮಾತ್ರ ವಿಶ್ವದಲ್ಲೇ ದುಬಾರಿ ನಿಲ್ದಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಭವ್ಯವಾದ ವಾಸ್ತು ಶಿಲ್ಪ  ಹಾಗೂ ಐಷಾರಾಮಿ ಸೌಲಭ್ಯಗಳಿಗೆ ಎಲ್ಲರ ಕಣ್ಣು ಕುಕ್ಕುವಂತಿದೆ. ಐಷಾರಾಮಿ ಸೌಲಭ್ಯಗಳಿಂದಲೇ ದುಬಾರಿ ಎನಿಸಿಕೊಂಡಿರುವ ಈ ವಿಮಾನ ನಿಲ್ದಾಣದ ಹೆಸರು ಇಸ್ತಾನ್ ಬುಲ್.

3 / 7
ಟರ್ಕಿಯಲ್ಲಿರುವ ಈ ವಿಮಾನ ನಿಲ್ದಾಣದಲ್ಲಿ ರೆಸ್ಟೋರೆಂಟ್ ಹಿಡಿದು ಕೆಫೆಗಳನ್ನು ಕಾಣಬಹುದು. ಆದರೆ ಈ ಕೆಫೆ ಹಾಗೂ ರೆಸ್ಟೋರೆಂಟ್ ನಲ್ಲಿ ಆಹಾರ ಸೇವನೆ ಮಾಡುವುದು ಮಧ್ಯಮವರ್ಗದ ಜನರಿಗೆ ಅಸಾಧ್ಯದ ಮಾತು.ತನ್ನ ಐಷಾರಾಮಿ ಸೌಲಭ್ಯದಿಂದ ಹಿಡಿದು ಇಲ್ಲಿ ಸಿಗುವ ಪ್ರತಿಯೊಂದು ಆಹಾರಗಳು ಕೂಡ ಅಷ್ಟೇ ದುಬಾರಿ ಎನ್ನಬಹುದು.

4 / 7
ನೀವೇನಾದ್ರೂ ಇಲ್ಲಿ ಒಂದು ಬಾಳೆಹಣ್ಣು ಖರೀದಿಸುತ್ತೀರಿಯಾದರೆ ಬರೋಬ್ಬರಿ 500 ರೂ ನೀಡಲೇ ಬೇಕು. ಅದಲ್ಲದೇ ಒಂದು ಬಿಯರ್ ಬಾಟಲ್ ಬೆಲೆ ಬರೋಬ್ಬರಿ 1500 ರೂಪಾಯಿ, ಇಟಲಿಯನ್ ಚಿಕನ್ ಸಲಾಡ್ ಬೆಲೆ 1700 ರೂಪಾಯಿ ಆಗಿದೆ. ಇಲ್ಲಿರುವ ಪ್ರತಿಯೊಂದು ತಿನಿಸುಗಳು ದುಬಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

5 / 7
ಹೀಗಾಗಿ ಇದನ್ನು ವಿಶ್ವದಲ್ಲೇ ದುಬಾರಿ ವಿಮಾನ ನಿಲ್ದಾಣ ಎಂದು ಕರೆಯಲಾಗಿದೆ. ಇಲ್ಲಿ ಪ್ರತಿಯೊಂದು ವಸ್ತುವಿಗೂ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಜನ ಸಾಮಾನ್ಯರು ಈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲು ಹಾಗೂ ಇಲ್ಲಿನ ದುಬಾರಿ ವಸ್ತುಗಳನ್ನು ಖರೀದಿಸಬೇಕೆಂದರೆ ತಮ್ಮ ದುಡಿಮೆಯ ಅಷ್ಟು ಹಣವನ್ನು ಇಲ್ಲಿ ವಿನಿಯೋಗಿಸಬೇಕಾಗುತ್ತದೆ.

6 / 7
ಅಷ್ಟೇ ಅಲ್ಲದೇ ಇಲ್ಲಿಗೆ ಬರುವ ಪ್ರಯಾಣಿಕರು ಬೇರೆ ವಿಧಿಯಿಲ್ಲದೆ ಕೇಳುವಷ್ಟು ಹಣ ನೀಡಿ ದುಬಾರಿ ಬೆಲೆಯ ಆಹಾರಗಳನ್ನು ಖರೀದಿಸಿ ತಿನ್ನಲೇಬೇಕಾಗುತ್ತದೆ. ಟರ್ಕಿಯ ಪ್ರಸಿದ್ಧ  ವಿಮಾನ ನಿಲ್ದಾಣವೆಂದೇ ಪ್ರಸಿದ್ಧವಾಗಿರುವ ಈ ನಿಲ್ದಾಣದಲ್ಲಿ ಪ್ರತಿನಿತ್ಯ ಇಲ್ಲಿಗೆ 2,20,000 ಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ.

7 / 7
ಅತೀ ಹೆಚ್ಚು ಪ್ರಯಾಣಿಕರು ಬರುವ ಕಾರಣ ಒಂದೆಡೆಯಾದರೆ, ಎಲ್ಲಾ ರೀತಿ ಐಷಾರಾಮಿ ಸೌಲಭ್ಯಗಳು ಇಲ್ಲಿರುವ ಕಾರಣ ಈ ನಿಲ್ದಾಣ ದುಬಾರಿಯಾಗಿದೆ ಎನ್ನಲಾಗಿದೆ. ಅದಲ್ಲದೇ ಯುರೋಪಿನಲ್ಲಿ ಅತ್ಯಂತ ದುಬಾರಿ ವಿಮಾನ ನಿಲ್ದಾಣ ಎಂದು ಕರೆಯಲಾಗಿದೆ.

Published On - 11:00 am, Thu, 1 May 25