ಒಂದು ಕಪ್ ಕಾಫಿ ಬೆಲೆ ಬರೋಬ್ಬರಿ ಆರು ಸಾವಿರ ರೂಪಾಯಿಯಂತೆ, ಈ ಕಾಫಿ ಅಷ್ಟೊಂದು ದುಬಾರಿ ಯಾಕೆ?

Updated on: May 30, 2025 | 8:12 PM

ಕಾಫಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೌದು, ಹೆಚ್ಚಿನವರು ಈ ಟೀ ಕಾಫಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಕೆಲವರು ಕಾಫಿ ಕುಡಿಯುವುದನ್ನು ಮಾತ್ರ ಯಾವುದೇ ಕಾರಣಕ್ಕೂ ಮಿಸ್ ಮಾಡುವುದೇ ಇಲ್ಲ. ಆದ್ರೆ ವಿಶ್ವದ ದುಬಾರಿ ಬೆಲೆಯ ಕಾಫಿಯ ಬಗ್ಗೆ ನಿಮಗೆ ಗೊತ್ತಾ? ಹೌದು ದುಬಾರಿ ಬೆಲೆ ಬಾಳುವ ಈ ಕಾಫಿಯನ್ನು ತಯಾರಿಸುವ ರೀತಿ ತಿಳಿದ್ರೆ ಅಚ್ಚರಿ ಪಡ್ತೀರಾ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

1 / 6
ಕಾಫಿ ಪ್ರಿಯರು ಯಾರಿಲ್ಲ ಹೇಳಿ? ಹೌದು ಎಷ್ಟೇ  ಕೆಲಸದ ಒತ್ತಡವಿರಲಿ, ಒಂದು ಲೋಟ ಕಾಫಿ ಕುಡಿದ್ರೆ ಸಾಕು ಮೂಡ್ ಫ್ರೆಶ್ ಆಗುತ್ತದೆ. ಹೀಗಾಗಿ ಸ್ಟ್ರಾಂಗ್  ಡಿಕಾಶನ್ ಗೆ ಚೆನ್ನಾಗಿ ಕುದಿಸಿದ ಹಾಲನ್ನು ಬೆರೆಸಿ ಕುಡಿದರೆ ಅದರ ಖುಷಿನೇ ಬೇರೆ.

2 / 6
ನೀವು ಫಿಲ್ಟರ್ ಕಾಫಿ, ಬ್ಲ್ಯಾಕ್ ಕಾಫಿ, ಕೋಲ್ಡ್ ಕಾಫಿ ಹೀಗೆ ವಿವಿಧ ಕಾಫಿಯನ್ನು ಸವಿದಿರಬಹುದು.ಆದರೆ ಈ ವಿಶ್ವದ ಈ ದುಬಾರಿ ಕಾಫಿಯನ್ನು ಸವಿಯಲೇಬೇಕು. ವಿಭಿನ್ನ ರುಚಿಯನ್ನು ಹೊಂದಿರುವ ಈ ಕಾಫಿ ಅಷ್ಟೇ ದುಬಾರಿ ಕೂಡ.

3 / 6
ಬೆಲೆಯಷ್ಟೇ ಇದನ್ನು ತಯಾರಿಸುವ ರೀತಿಯೂ ವಿಭಿನ್ನವೆಂದೇ ಹೇಳಬಹುದು. ಇದರ ಕಾಫಿ ಹೆಸರು ಕೊಪಿ ಲುವಾಕ್. ಒಂದು ಕಪ್ ಕಾಫಿ ಖರೀದಿಸಬೇಕೆಂದರೆ ನಿಮ್ಮ ಬಳಿ 6000 ರೂಪಾಯಿ ಇರಲೇಬೇಕು.

4 / 6
ಅಷ್ಟೇ ಅಲ್ಲದೇ ಕೊಪಿ ಲುವಾಕ್ ತಯಾರಿಸುವುದು ಪ್ರಾಣಿಯ ಮಲದಿಂದ ಎನ್ನಲಾಗಿದೆ.ಬೆಕ್ಕಿನಂತೆ ಹೋಲುವ ಪ್ರಾಣಿ ಈ ಸಿವೆಟ್. ಇದು ತಿಂದು ಹೊರಹಾಕಿದ ಕಾಫಿ ಬೀಜಗಳಿಂದ ಈ ಕಾಫಿಯನ್ನು ತಯಾರಿಸಲಾಗುತ್ತದೆ. ಹೀಗಾಗಿ ಈ ಕಾಫಿಯಲ್ಲಿ ಸಿವೆಟ್ ಕಾಫಿ ಎಂದು ಕರೆಯಲಾಗುತ್ತದೆ.

5 / 6
ಇಂಡೋನೇಷ್ಯಾದಿಂದ ಜನಪ್ರಿಯತೆ ಪಡೆದುಕೊಂಡಿರುವ ಈ ಕಾಫಿ ಇಷ್ಟು ಬೆಲೆ ಬರಲು ಮುಖ್ಯ ಕಾರಣವೇ ಇದರ ಉತ್ಪಾದನಾ ವಿಧಾನ. ಹಣ್ಣಾದ ಕಾಫಿ ಬೀಜಗಳನ್ನು ಸೇವಿಸುತ್ತವೆ. ಕೊನೆಗೆ ಅರ್ಧ ಜೀರ್ಣವಾದ ಈ ಕಾಫಿ ಬೀಜಗಳನ್ನು ಈ ಪ್ರಾಣಿ ತನ್ನ ಮಲದ ಮೂಲಕ ಹೊರ ಹಾಕುತ್ತದೆ.

6 / 6
ಈ ಮಲದಿಂದ ಹೊರ ಬಂದ ಈ ಕಾಫಿಬೀಜಗಳಿಂದ ವಿಶ್ವದ ದುಬಾರಿ ಕೊಪಿ ಲುವಾಕ್ ಕಾಫಿಯನ್ನು ತಯಾರಿಸಲಾಗುತ್ತದೆ. ಈ ಕಾಫಿ ತನ್ನ ಪರಿಮಳ ಹಾಗೂ ರುಚಿಯಿಂದಲೇ ಜನಪ್ರಿಯವಾಗಿದೆ.

Published On - 8:10 pm, Fri, 30 May 25