ಮುಂಗಾರು ಮಳೆಗೆ ಕೊಡಗಿನ ಯಾವ ಜಲಪಾತಗಳು ಮೈದುಂಬಿ ಹರಿಯುತ್ತಿವೆ? ಇಲ್ಲಿದೆ ವಿವರ
ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಅತಿ ಬೇಗ ಆರಂಭವಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಪ್ರವಾಸಿಗರು ಈ ಅದ್ಭುತ ನೈಸರ್ಗಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದಾರೆ. ಆದರೆ, ದುಬಾರೆಯಲ್ಲಿ ನದಿ ದಾಟಲು ನಿರ್ಬಂಧ ಹೇರಲಾಗಿದೆ. ಮಳೆಯಿಂದಾಗಿ ಕೆಲವು ಅನಾನುಕೂಲಗಳೂ ಇವೆ. ಆದರೂ, ಪ್ರವಾಸಿಗರು ಸಂತೋಷದಿಂದ ಕೊಡಗಿನ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ 15-20 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿತ್ತು. ಇದರಿಂದ ಅವಾಂತರಗಳು ಸೃಷ್ಟಿಯಾಗಿದ್ದವು. ಈ ನಡುವೆಯೇ ನಿರಂತರ ಮಳೆಯಿಂದ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಮೈದುಂಬಿ ಹರಿಯುತ್ತಿರು ಜಲಪಾತಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹಾಗಿದ್ದರೆ ಯಾವೆಲ್ಲ ಜಲಪಾತಗಳು ಧುಮ್ಮುಕ್ಕುತ್ತಿವೆ? ಇಲ್ಲಿದೆ ವಿವರ. ಇನ್ನು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಮುನ್ನ ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ.
1 / 6
ರಾಜ್ಯಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಈ ಮಳೆ ಬಹಳಷ್ಟು ಜನರಿಗೆ ಸಂಕಷ್ಟಗಳನ್ನು ತಂದೊಡ್ಡಿದೆ. ಹಾಗೇ, ಮಳೆಯಿಂದ ಸಾಕಷ್ಟು ಅನುಕೂಲವೂ ಆಗಿದೆ. ಮಳೆಗಾಲ ಆರಂಭವಾಗಿದ್ದರಿಂದ ಪ್ರವಾಸಿ ಜಿಲ್ಲೆ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುತ್ತಿದ್ದಾರೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
2 / 6
ಕೊಡಗು ಜಿಲ್ಲೆಯ ಪ್ರಸಿದ್ಧ ಅಬ್ಬಿ ಜಲಪಾತ ಧುಮ್ಮುಕ್ಕುತ್ತಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕೊಡಗಿನ ಯಾವುದೇ ಜಲಪಾತಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಇರಲ್ಲ. ಆದರೆ, ಈ ವರ್ಷ ಮುಂಗಾರು ಬೇಗನೆ ಆರಂಭವಾಗಿರುವುದರಿಂದ ಅಬ್ಬಿ ಜಲಪಾತ ಮೈದುಂಬಿ ಹರಿಯುತ್ತಿದೆ.
3 / 6
ಇದು ಪ್ರವಾಸಿಗರಿಗೆ ಇನ್ನಿಲ್ಲದ ಖುಷಿ ನೀಡಿದೆ. ಮಡಿಕೇರಿ ನಗರದ ವೀವ್ ಪಾಯಿಂಟ್ ರಾಜಸೀಟ್ನಲ್ಲೂ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಜಿಜಟಿಪಿಟಿ ಮಳೆಯ ಮಧ್ಯೆಯೂ ಪ್ರವಾಸಿಗರು ರಾಜಾಸೀಟ್ನತ್ತ ಆಗಮಿಸುತ್ತಿದ್ದಾರೆ.
4 / 6
ಆಗ್ಗಾಗೆ ಮಳೆ-ಬಿಸಿಲು ಬರುತ್ತಿರುವುದರಿಂದ ಜನರು ಕೊಡೆ, ರೈನ್ ಕೋಟ್ ಧರಿಸಿಕೊಂಡು ಆಗಮಿಸುತ್ತಿದ್ದಾರೆ. ಇನ್ನು, ದುಬಾರೆಯಲ್ಲಿ ನದಿ ದಾಟಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ನದಿ ದಾಟಿ ಆನೆಗಳನ್ನು ನೋಡುವ ಆಸೆ ಕಮರಿ ಹೋಗಿದೆ.
5 / 6
ಮಳೆಯ ಅಬ್ಬರದಿಂದ ಜಿಲ್ಲೆಯ ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಜಲಪಾತಗಳು ಧುಮ್ಮುಕ್ಕುತ್ತಿವೆ. ಸಾಮಾನ್ಯವಾಗಿ ಜುಲೈ ಆಗಸ್ಟ್ ತಿಂಗಳಲ್ಲಿ ಸಿಗುವ ಮಳೆಗಾಲದ ಅನುಭವ ಈ ಬಾರಿ ಪ್ರವಾಸಿಗರಿಗೆ ಮೇ ತಿಂಗಳಲ್ಲೇ ಸಿಗುತ್ತಿದೆ. ಹೀಗಾಗಿ ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರು ಖುಷಿಯಿಂದಲೇ ಒಳ್ಳೆಯ ಅನುಭವ ಪಡೆದು ಹಿಂದಿರುಗುತ್ತಿದ್ದಾರೆ.