World Wildlife Day: ಇವೇ ನೋಡಿ ಭಾರತದಲ್ಲಿ ಭೇಟಿ ನೀಡಬಹುದಾದ 5 ವನ್ಯಜೀವಿ ಅಭಯಾರಣ್ಯಗಳು
TV9 Web | Updated By: Pavitra Bhat Jigalemane
Updated on:
Mar 03, 2022 | 12:04 PM
ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.
1 / 6
ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.
2 / 6
ರಣಥಂಬೋರ್ ನ್ಯಾಷನಲ್ ಪಾರ್ಕ್: ರಾಜಸ್ಥಾನದ ರಣಥಂಬೋರ್ನಲ್ಲಿರುವ ಈ ವನ್ಯ ಜೀವಿ ತಾಣ ಭಾರತದ ಪ್ರಮುಖ ವನ್ಯ ಜೀವಿ ತಾಣಗಳಲ್ಲೊಂದು. ಇಲ್ಲಿಗೆ ಭೇಟಿ ನೀಡದರೆ ಸುಂದರ ಸೂರ್ಯಾಸ್ತದೊಂದಿಗೆ ವಿವಿಧ ಬಗೆಯ ಪ್ರಾಣಿಗಳನ್ನು ಸಫಾರಿ ಮೂಲಕ ವೀಕ್ಷಣೆ ಮಾಡಬಹುದಾಗಿದೆ.
3 / 6
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ: ನೈನಿತಾಲದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನ ಅಪರೂಪದ ವನ್ಯ ಜೀವಿಗಳ ತಾಣವಾಗಿದೆ. ಇಲ್ಲಿಗೆ ನೀವು ಬೇಟಿ ನೀಡಿದರೆ ಅಪರೂಪದ ಬಿಳಿ ಹುಲಿ, ಆನೆ, ಜಿಂಕೆ ಎಲ್ಲವನ್ನೂ ನೋಡಬಹುದಾಗಿದೆ.
4 / 6
ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಭಾರತದ ಬಹು ಜನಪ್ರಿಯ ವನ್ಯ ಜೀವಿ ತಾಣವಾಗಿದೆ. ಪ್ರಪಂಚದ ಅತಿ ಹೆಚ್ಚು ಒಂದು ಕೊಂಬಿನ ಘೇಂಡಾಮೃಗದ ಜನಸಂಖ್ಯೆಯನ್ನು ಹೊಂದಿದ ಸ್ಥಳವಾಗಿದೆ. ಹೀಗಾಗಿ ಒಮ್ಮೆಯಾದರೂ ನೀವು ಇಲ್ಲಿ ಭೇಟಿ ನೀಡಲೇಬೇಕು.
5 / 6
ಕೊಯ್ನಾ ವನ್ಯಜೀವಿ ಅಭಯಾರಣ್ಯ: ಮಹಾರಾಷ್ಟ್ರದಲ್ಲಿರುವ ಭಾರತದ ಅತ್ಯಂತ ಸುಂದರ ವನ್ಯ ಜೀವಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹಾವು, ವಿವಿಧ ರೀತಿಯ ಪಕ್ಷಿಗಳು, ಹುಲಿ ಮುಖ್ಯವಾಗಿ ಕಾಣಸಿಗುತ್ತವೆ. ಹೀಗಾಗಿ ನಿಮ್ಮ ಪ್ರವಾಸ ಕೊಯ್ನಾದೆಡೆಗೆ ಹೋದರೆ ಸುಂದರ ಸ್ಥಳವನ್ನು ನೋಡಿದ ಅನುಭವ ಸಿಗಲಿದೆ.
6 / 6
ಕಾರಕೋರಂ ವನ್ಯಜೀವಿ ಅಭಯಾರಣ್ಯ:
ಜಮ್ಮು ಕಾಶ್ಮೀರದಲ್ಲಿರುವ ಕಾರಕೋರಂ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ಸ್ಥಳವಾಗಲಿದೆ. ಮಂಜಿನಿಂದ ತುಂಬಿದ ಜಾಗವನ್ನು ನೋಡುವುದು ಒಂದು ಅನುಭವವಾದರೆ ಅಲ್ಲಿ ಮಾತ್ರ ಕಾಣಸಿಗುವ ಯಾಕ, ಝೀಬ್ರಾದಂತಹ ಅಪರೂಪದ ಪ್ರಾಣಿಗಳು ಕಾಣಸಿಗುತ್ತವೆ.