ವಿದೇಶದಲ್ಲಿ ಧೂಳೆಬ್ಬಿಸುತ್ತಿರುವ ರೆಡ್ಮಿ K60 ಆಲ್ಟ್ರಾ ಭಾರತದಲ್ಲಿ ಯಾವಾಗ ಬಿಡುಗಡೆ?

|

Updated on: Aug 29, 2023 | 6:55 AM

Redmi K60 Ultra India Launch: ಬಲಿಷ್ಠ ಪ್ರೊಸೆಸರ್, ಬಿಗ್ ಬ್ಯಾಟರಿ, ಫಾಸ್ಟ್ ಚಾರ್ಜರ್ ಆಯ್ಕೆಯನ್ನು ಹೊಂದಿರುವ ರೆಡ್ಮಿ K60 ಆಲ್ಟ್ರಾ ಸ್ಮಾರ್ಟ್​ಫೋನ್ ಭಾರತದಲ್ಲಿ ಈ ವರ್ಷ ಬಿಡುಗಡೆ ಆಗುವುದು ಅನುಮಾನ. ಮೂಲಗಳ ಪ್ರಕಾರ ಈ ಫೋನ್ ಮುಂದಿನ ವರ್ಷದ ಆರಂಭದಂದು ಜನವರಿ 10ಕ್ಕೆ ಭಾರತದಲ್ಲಿ ಅನಾವರಣಗೊಳ್ಳಲಿದೆಯಂತೆ.

1 / 8
ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಮೊನ್ನೆಯಷ್ಟೆ ಹೊಸ ಸ್ಮಾರ್ಟ್​ಫೋನ್ ರೆಡ್ಮಿ K60 ಅಲ್ಟ್ರಾವನ್ನು ಪರಿಚಯಿಸಿತ್ತು. 6.67-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್​ಫೋನ್ ವಿದೇಶದಲ್ಲಿ ಧೂಳೆಬ್ಬಿಸುತ್ತಿದೆ. ಹಾಗಾದರೆ ಈ ಫೋನ್ ಭಾರತಕ್ಕೆ ಯಾವಾಗ ಬರಲಿದೆ?.

2 / 8
ಬಲಿಷ್ಠ ಪ್ರೊಸೆಸರ್, ಬಿಗ್ ಬ್ಯಾಟರಿ, ಫಾಸ್ಟ್ ಚಾರ್ಜರ್ ಆಯ್ಕೆಯನ್ನು ಹೊಂದಿರುವ ರೆಡ್ಮಿ K60 ಆಲ್ಟ್ರಾ ಸ್ಮಾರ್ಟ್​ಫೋನ್ ಭಾರತದಲ್ಲಿ ಈ ವರ್ಷ ಬಿಡುಗಡೆ ಆಗುವುದು ಅನುಮಾನ. ಮೂಲಗಳ ಪ್ರಕಾರ ಈ ಫೋನ್ ಮುಂದಿನ ವರ್ಷದ ಆರಂಭದಂದು ಜನವರಿ 10ಕ್ಕೆ ಭಾರತದಲ್ಲಿ ಅನಾವರಣಗೊಳ್ಳಲಿದೆಯಂತೆ.

3 / 8
ವಿದೇಶದಲ್ಲಿ ರೆಡ್ಮಿ K60 ಅಲ್ಟ್ರಾ ಸ್ಮಾರ್ಟ್​ಫೋನ್ ಒಟ್ಟು ಆರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 12GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕಾಗಿ CNY 2,599, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 30,000 ರೂ. ಇರಬಹುದು. ಅಂತೆಯೆ 12GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕಾಗಿ CNY 2,599, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 30,000 ರೂ. ಇರಬಹುದು.

4 / 8
16GB RAM + 256GB ಸ್ಟೋರೇಜ್ ಮಾದರಿಯ ಬೆಲೆ CNY 2,799 (ಸುಮಾರು ರೂ. 32,000). 16GB RAM + 512GB ಸ್ಟೋರೇಜ್ ರೂಪಾಂತರಕ್ಕೆ CNY 2,999 (ಸುಮಾರು ರೂ. 34,350). 16GB RAM + 1TB ಸಂಗ್ರಹಣೆಯನ್ನು CNY 3,299 (ಸುಮಾರು ರೂ. 38,000). 24GB RAM ನ ಉನ್ನತ ಮಾದರಿ + 1TB ಸ್ಟೋರೇಜ್ ಮಾದರಿಯ ಬೆಲೆ CNY 3,599 (ಸುಮಾರು ರೂ. 41,200).

5 / 8
ರೆಡ್ಮಿ K60 ಅಲ್ಟ್ರಾ ಸ್ಮಾರ್ಟ್‌ಫೋನ್ 6.67-ಇಂಚಿನ (2272 x 1220 ಪಿಕ್ಸೆಲ್‌ಗಳು) ಅಮೊಲೆಡ್ ಡಿಸ್ ಪ್ಲೇಯನ್ನು ಹೊಂದಿದ್ದು, 144Hz ರಿಫ್ರೆಶ್ ದರದೊಂದಿಗೆ ಕೂಡಿದೆ. ಇದು ಬಲಿಷ್ಠವಾದ ಮೀಡಿಯಾಟೆಕ್ ಡೈಮೆನ್ಸಿಟಿ 9200+ SoC, ಜೊತೆಗೆ 24GB LPDDR5X RAM ನಿಂದ ಚಾಲಿತವಾಗಿದೆ.

6 / 8
ಶವೋಮಿಯ ಈ ಸ್ಮಾರ್ಟ್​ಫೋನಗ ವೈಲ್ಡ್‌ಬೂಸ್ಟ್ 2.0 ತಂತ್ರಜ್ಞಾನದೊಂದಿಗೆ ಬರಲಿದೆ. ಇದು ಸ್ಮಾರ್ಟ್‌ಫೋನ್ ಅನ್ನು 3 ಡಿಗ್ರಿ ಸೆಲ್ಸಿಯಸ್‌ನಿಂದ ತಂಪಾಗಿರಿಸುತ್ತದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಸ್ಮಾರ್ಟ್​ಫೋನ್ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50-ಮೆಗಾಪಿಕ್ಸೆಲ್ IMX800 Sony ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ.

7 / 8
ಈ ಫೋನಿನ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಫೋನ್ ಡಿಸ್ ಪ್ಲೇಯ ಮೇಲ್ಭಾಗದಲ್ಲಿ ಪಂಚ್-ಹೋಲ್ ವಿನ್ಯಾಸದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

8 / 8
ರೆಡ್ಮಿ K60 ಅಲ್ಟ್ರಾ ಸ್ಮಾರ್ಟ್‌ಫೋನ್ ದೀರ್ಘ ಮಸಯ ಬಾಳಿಕೆ ಬರುವ 5,000mAh ಬ್ಯಾಟರಿಯಿಂದ ಕೂಡಿದೆ. ಇದಕ್ಕೆ 120W ವೇಗದ ಚಾರ್ಜಿಂಗ್‌ ಬೆಂಬಲವಿದೆ. ಇದು 5G, ವೈಫೈ, ಬ್ಲೂಟೂತ್ 5.3 ಮತ್ತು USB ಟೈಪ್-ಸಿ ಪೋರ್ಟ್‌ಗೆ ಸಂಪರ್ಕ ಬೆಂಬಲವನ್ನು ಪಡೆಯುತ್ತದೆ. ಆದತೆ, ಸ್ಮಾರ್ಟ್‌ಫೋನ್‌ಗೆ ಹೆಡ್‌ಫೋನ್ ಜ್ಯಾಕ್ ಇಲ್ಲ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ.