Yadgir News: ಎರಡು ನಾಯಿಗಳ ಮಧ್ಯೆ ನಾಗರಹಾವು ಸೆಣಸಾಟ; ನನ್ನ ಮಾಲೀಕನ ಮನೆಗೆ ಬರ್ತಿಯಾ ಎಂದು ಯುದ್ಧಕ್ಕಿಳಿದಿದ್ದ ಶ್ವಾನಗಳು

|

Updated on: Jun 08, 2023 | 3:03 PM

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯರಕಿಹಾಳ ಗ್ರಾಮದ ತೋಟವೊಂದರಲ್ಲಿ ತನ್ನ ಮಾಲೀಕನ ಮನೆಗೆ ನುಗ್ಗುತ್ತಿದ್ದ ನಾಗರಹಾವನ್ನು ಎರಡು ನಾಯಿಗಳು ತಡೆದು ನಿಲ್ಲಿಸಿವೆ. ಹಾವಿನ ಜೊತೆ ಸೆಣಸಾಡಿವೆ.

1 / 6
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯರಕಿಹಾಳ ಗ್ರಾಮದ ತೋಟವೊಂದರಲ್ಲಿ ಎರಡು ಶ್ವಾನಗಳು ಮತ್ತು ನಾಗರ ಹಾವಿನ ನಡುವೆ ಸೆಣಸಾಟ ನಡೆದಿದೆ.

2 / 6
ಮನೆಯೊಳಗೆ ಹೋಗುತ್ತಿದ್ದ ನಾಗರ ಹಾವನ್ನು ತಡೆದು ಎರಡು ಸಾಕು ನಾಯಿಗಳು ಹಾವಿನ ಜೊತೆ ಕಾದಾಡಿವೆ.

3 / 6
ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ನಗಾರೆಪ್ಪ ಭಜಂತ್ರಿ ಮನೆಯೊಳಕ್ಕೆ ನುಗ್ಗಲೆತ್ನಿಸಿದ್ದ ನಾಗರಹಾವನ್ನು ಕಂಡ ಸಾಕು ನಾಯಿಗಳು ತನ್ನ ಮಾಲೀಕನ ಮನೆಗೆ ಹೋಗದಂತೆ ಹಾವನ್ನು ತಡೆದಿವೆ.

4 / 6
ಎರಡು ನಾಯಿಗಳು ಹಾವಿನ ಸುತ್ತ ಸುತ್ತುತ್ತ, ಬೊಗಳುತ್ತ ಸಾವಿಗೆ ಭಯ ಹುಟ್ಟಿಸಿವೆ. ತನ್ನ ಮಾಲೀಕನ ಮನೆಗೆ ಬಂದಿದ್ದೇಕೆ ಎಂದು ನರಳಾಡಿಸಿವೆ.

5 / 6
ತನ್ನ ಸುತ್ತ ಸುತ್ತಿದ್ದ ನಾಯಿಗಳನ್ನು ಕಂಡು ನಾಗರ ಹಾವು ಆತ್ಮ ರಕ್ಷಣೆಗಾಗಿ ಅವುಗಳ ವಿರುದ್ಧ ಹೋರಾಡಿದ ದೃಶ್ಯ ಭಯ ಹುಟ್ಟಿಸುವಂತಿತ್ತು.

6 / 6
ವಿಚಿತ್ರ ಧ್ವನಿಯಲ್ಲಿ ಕೂಗುತ್ತಿದ್ದ ನಾಯಿಗಳನ್ನು ನೋಡಲು ಬಂದ ನಗಾರೆಪ್ಪ ಕುಟುಂಬಸ್ಥರು ದೃಶ್ಯ ನೋಡಿ ಶಾಕ್ ಆಗಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಹಾವು-ಶ್ವಾನದ ಕಾಳಗ ನಡೆದಿದ್ದು ನಂತರ ಸ್ಥಳದಿಂದ ಬೇರೆ ಕಡೆ ನಾಗರಹಾವು ಕಾಲ್ಕಿತ್ತಿದೆ.