Most Searched Smartphones: 2021 ರಲ್ಲಿ ಜನರು ಅತಿ ಹೆಚ್ಚು ಹುಡುಕಿದ ಸ್ಮಾರ್ಟ್ಫೋನ್ ಯಾವುದು ಗೊತ್ತಾ?
TV9 Web | Updated By: Vinay Bhat
Updated on:
Dec 24, 2021 | 12:33 PM
Year Ender 2021: ಈ ವರ್ಷ ಸ್ಯಾಮ್ಸಂಗ್ ಕಂಪನಿ ವಿವಿಧ ರೂಪದಲ್ಲಿ ಎಲ್ಲಾ ಬೆಲೆಗಳ ವಿಭಾಗಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿತ್ತು. ಹಾಗಾದ್ರೆ 2021 ರಲ್ಲಿ ಜನರು ಅತಿ ಹೆಚ್ಚು ಹುಡುಕಿದ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟಟ್ಫೋನ್ ಯಾವುದು ಎಂಬುದನ್ನು ನೋಡೋಣ.
1 / 8
2022 ರ ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2021ನೇ ವರ್ಷದ ಸ್ಮಾರ್ಟ್ಫೋನ್ ಜಗತ್ತನ್ನು ಮೆಲುಕಿ ಹಾಕಿ ನೋಡಿದಾಗ ಈ ವರ್ಷ ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ಐದು ಫೋನುಗಳು ಮಾರುಕಟ್ಟೆಗೆ ಆಗಮಿಸಿವೆ. ಬಜೆಟ್ ಫೋನಿನಿಂದ ಹಿಡಿದು ಹೈ ರೇಂಜ್ ಫೋನುವರೆಗೂ ಅನೇಕ ಸ್ಮಾರ್ಟ್ಫೋನ್ಗಳು ಮೋಡಿ ಮಾಡಿವೆ.
2 / 8
ಅಂತೆಯೆ ಈ ವರ್ಷ ಸ್ಯಾಮ್ಸಂಗ್ ಕಂಪನಿ ವಿವಿಧ ರೂಪದಲ್ಲಿ ಎಲ್ಲಾ ಬೆಲೆಗಳ ವಿಭಾಗಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿತ್ತು. ಹಾಗಾದ್ರೆ 2021 ರಲ್ಲಿ ಜನರು ಅತಿ ಹೆಚ್ಚು ಹುಡುಕಿದ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ ಯಾವುದು ಎಂಬುದನ್ನು ನೋಡೋಣ.
3 / 8
ಗೂಗಲ್ ಟ್ರೆಂಡ್ಗಳು ಹೆಚ್ಚು ಹುಡುಕಲ್ಪಟ್ಟ ಕೆಲವು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳನ್ನು ಬಹಿರಂಗಪಡಿಸಿದೆ. ಇವುಗಳು ದಕ್ಷಿಣ ಕೊರಿಯಾದ ಬ್ರ್ಯಾಂಡ್ನ ಎಲ್ಲಾ ಜನಪ್ರಿಯ ಮಾದರಿಗಳನ್ನು ಒಳಗೊಂಡಿವೆ.
4 / 8
ಸ್ಯಾಮ್ಸಂಗ್ ಗ್ಯಾಲಕ್ಸಿ F62: ಈ ಸ್ಮಾರ್ಟ್ಫೋನ್ನ ಬೆಲೆ 20,499 ರೂ. ಇದು 6.7-ಇಂಚಿನ (2400 x 1080 ಪಿಕ್ಸೆಲ್ಗಳು) ಪೂರ್ಣ HD+ ಇನ್ಫಿನಿಟಿ-O ಸೂಪರ್ AMOLED ಪ್ಲಸ್ 20:9 ಡಿಸ್ಪ್ಲೇ ಹೊಂದಿದೆ. ಆಕ್ಟಾ-ಕೋರ್ Samsung Exynos 9 ಸರಣಿ 9825 7nm ಪ್ರೊಸೆಸರ್, ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ), 64MP + 12MP + 5MP + 5MP ಹಿಂಬದಿಯ ಕ್ಯಾಮೆರಾ, 32MP ಮುಂಭಾಗದ ಕ್ಯಾಮರಾ, ಡ್ಯುಯಲ್ 4G VoLTE, 7,000 mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿದೆ.
5 / 8
ಸ್ಯಾಮ್ಸಂಗ್ ಗ್ಯಾಲಕ್ಸಿ M02s: ಇದರ ಬೆಲೆ: ರೂ. 8,999. 6.5-ಇಂಚಿನ (1560 × 720 ಪಿಕ್ಸೆಲ್ಗಳು) HD+ LCD ಇನ್ಫಿನಿಟಿ-ವಿ ಡಿಸ್ಪ್ಲೇ. 1.8GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 450 14nm ಮೊಬೈಲ್ ಪ್ಲಾಟ್ಫಾರ್ಮ್ ಜೊತೆಗೆ Adreno 506 GPU. 13MP + 2MP ಆಳ ಮತ್ತು 2MP ಹಿಂಬದಿಯ ಕ್ಯಾಮೆರಾ, 5MP ಮುಂಭಾಗದ ಕ್ಯಾಮೆರಾ. ಡ್ಯುಯಲ್ 4G VoLTE ಮತ್ತು 5,000mAh ಬ್ಯಾಟರಿ.
6 / 8
ಸ್ಯಾಮ್ಸಂಗ್ ಗ್ಯಾಲಕ್ಸಿ F12: ಬೆಲೆ: ರೂ. 10,999. 6.5-ಇಂಚಿನ (720×1600 ಪಿಕ್ಸೆಲ್ಗಳು) HD+ ಇನ್ಫಿನಿಟಿ-V ಡಿಸ್ಪ್ಲೇ, 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ. Exynos 850 Octa-Core (2GHz Quad + 2GHz Quad) 8nm ಪ್ರೊಸೆಸರ್ ಜೊತೆಗೆ Mali-G52. 48MP + 5MP + 2MP + 2MP ಹಿಂಬದಿಯ ಕ್ಯಾಮೆರಾ. 8MP ಮುಂಭಾಗದ ಕ್ಯಾಮೆರಾ. 6,000mAh (ವಿಶಿಷ್ಟ) ಬ್ಯಾಟರಿ.
7 / 8
ಸ್ಯಾಮ್ಸಂಗ್ ಗ್ಯಾಲಕ್ಸಿ A12: ಬೆಲೆ: ರೂ. 12,999. 6.5 ಇಂಚಿನ HD+ ಡಿಸ್ಪ್ಲೇ. 2.3GHz ಆಕ್ಟಾ-ಕೋರ್ ಹೆಲಿಯೊ P35 ಪ್ರೊಸೆಸರ್. 3/4/6GB RAM ಜೊತೆಗೆ 32/64/128GB ROM. 48MP + 5MP + 2MP + 2MP ಕ್ವಾಡ್ ರಿಯರ್ ಕ್ಯಾಮೆರಾಗಳು. 8MP ಮುಂಭಾಗದ ಕ್ಯಾಮೆರಾ. 5,000mAh ಬ್ಯಾಟರಿ.
8 / 8
ಸ್ಯಾಮ್ಸಂಗ್ ಗ್ಯಾಲಕ್ಸಿ M42: ಬೆಲೆ: ರೂ. 21,999. 6.6-ಇಂಚಿನ HD+ ಇನ್ಫಿನಿಟಿ-U ಸೂಪರ್ AMOLED ಡಿಸ್ಪ್ಲೇ. ಆಕ್ಟಾ ಕೋರ್ ಜೊತೆಗೆ ಸ್ನಾಪ್ಡ್ರಾಗನ್ 750G 8nm ಮೊಬೈಲ್ ಪ್ಲಾಟ್ಫಾರ್ಮ್ ಜೊತೆಗೆ Adreno 619 GPU.4 8MP + 8MP + 5MP + 5MP ಹಿಂದಿನ ಕ್ಯಾಮೆರಾ. 20MP ಮುಂಭಾಗದ ಕ್ಯಾಮೆರಾ. 5,000 mAh ಬ್ಯಾಟರಿ.
Published On - 12:30 pm, Fri, 24 December 21