ಮಠಾಧೀಶರು ರಾಜಕೀಯ ಪ್ರವೇಶ ವಿಚಾರ: ಸಿಎಂ ಯೋಗಿ ಹಾಗೆ ಯಡಬಿಡಂಗಿ ಆಗಬಾರದೆಂದ ಮುಖ್ಯಮಂತ್ರಿ ಚಂದ್ರು ​

|

Updated on: Feb 25, 2023 | 5:38 PM

ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿಯಂತೆ ಯಡಬಿಡಂಗಿ ಥರ ಆಗಬಾರದು ಎಂದು ಹಿರಿಯ ನಟ, ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗದಗ: ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ರಂತೆ ಯಡಬಿಡಂಗಿ ಥರ ಆಗಬಾರದು ಎಂದು ಹಿರಿಯ ನಟ, ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು (Mukhyamantri Chandru) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಮಾತನಾಡಿ, ಮಠಾಧೀಶರು ರಾಜಕೀಯ ಪ್ರವೇಶ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಲಾಯರ್ ಕೋರ್ಟ್​ನಲ್ಲಿ ಮಾತ್ರ ಲಾಯರ್. ಹೊರಗೆ ಬಂದ್ರೆ ಏನು ಬೇಕಾದ್ರೂ ಮಾಡಬಹುದು. ಆ ಸ್ವಾತಂತ್ರ್ಯ ಭಾರತ ದೇಶದಲ್ಲಿದೆ. ಹಾಗೆಯೇ ಸ್ವಾಮೀಜಿಗಳು ಕೂಡ ಕಾವಿ ಬಟ್ಟೆ ಹಾಕದೇ ರಾಜಕೀಯಕ್ಕೆ ಬಂದ್ರೆ ಒಳ್ಳೆಯದು. ಕಾವಿ ಬಟ್ಟೆ ಹಾಕಿಕೊಂಡು ಬಂದ್ರೆ ಗೌರವ ಇರಲ್ಲ. ಎಲ್ಲವನ್ನೂ ಬಿಟ್ಟು ಬಂದ್ರೆ ಓಕೆ. ಇಲ್ಲವಾದರೆ ಉತ್ತರ ಪ್ರದೇಶದ ಸಿಎಂ ಯೋಗಿಯಂತೆ ಯಡಬಿಡಂಗಿ ಥರ ಆಗಬಾರದು ಎಂದು ಕಿಡಿಕಾರಿದರು.

ಸ್ವಾಮೀಜಿಗಳಿಗೆ ಕಾವಿ ಧಾರ್ಮಿಕ ಚಿಂತನೆ ಮಾಡತಕ್ಕಂತ ಭಾವನೆ ಇದೆ. ಅದನ್ನು ಇಟ್ಕೊಂಡು ರಾಜಕೀಯ ಮಾಡ್ತೀನಿ ಅಂದ್ರೆ ಮೂಲ ಸಿದ್ದಾಂತ ದುರುಪಯೋಗ ಆಗುತ್ತೆ ಅನ್ನೋ ಭಯವಿದೆ. ಮೂಲ ಸಿದ್ಧಾಂತ, ಇನ್ನೊಂದು ಸಿದ್ಧಾಂತ ದುರುಪಯೋಗ ಆಗಬಾರದು ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿವರ್ಷವೂ ಸೈಟ್​ ಹಂಚಿಕೆ: ಸಚಿವ ವಿ.ಸೋಮಣ್ಣ

ರಾಜ್ಯದಲ್ಲಿ ನಕಲಿ ಪಾರ್ಟಿಗಳು ಇವೆ

ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನಂತಹ ನಕಲಿ ಪಾರ್ಟಿಗಳು ಇವೆ. ನಮ್ಮ ಉದ್ದೇಶ ಏನಿತ್ತೋ ಸರ್ವರಿಗೂ ಸಮಪಾಲು. ಅದೆಲ್ಲವೂ‌ ಕಾಪಿ ಮಾಡ್ತಾಯಿವೆ. ಕರೆಂಟ್ ಕೊಡ್ತೀನಿ ಅವ್ರು ಹೇಳ್ತಿದ್ದಾರೆ. ನೀರು ಕೊಡ್ತೀನಿ ಅಂತ ಇವ್ರು ಹೇಳ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಕೊಡ್ತೀನಿ ಅಂತಿದ್ದಾರೆ. ಆಪ್ ಏಳು ವರ್ಷದಿಂದ ಪ್ರಣಾಳಿಕೆ ಕೊಟ್ಟಿಲ್ಲ. ಗ್ಯಾರಂಟಿ ಕೊಟ್ಟಿದ್ದು. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ ಅಂತ ಸುಳ್ಳು ಭರವಸೆ ನೀಡ್ತಾಯಿದ್ದಾರೆ. ನಕಲಿ ಪಾರ್ಟಿ ಬಿಟ್ಟು ಅಸಲಿ ಪಾರ್ಟಿ ಆಪ್ ಪಕ್ಷಕ್ಕೆ ಬೆಂಬಲಿಸಿ ಎಂದರು.

ಇದನ್ನೂ ಓದಿ: ಬೆಳಗಾವಿ ಶಿವಾಜಿ ಮೂರ್ತಿ ಉದ್ಘಾಟನೆ​​: ರಮೇಶ್​ ಜಾರಕಿಹೊಳಿ-ಹೆಬ್ಬಾಳ್ಕರ್​ ಮಧ್ಯೆ ರಾಜಕೀಯ ಜಿದ್ದಾಜಿದ್ದಿ

ಮಾರ್ಚ್ 4 ರಂದು ಆಪ್ ಸಮಾವೇಶ 

ಮಾರ್ಚ್ 4 ರಂದು ದೆಹಲಿ, ಪಂಜಾಬ್ ಸಿಎಂ ಆಗಮಿಸಲಿದ್ದು ಆಪ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮುಂದಿನ ಲೋಕಸಭಾ, ಬಿಬಿಎಂಪಿ ಜಿಲ್ಲಾ, ತಾಲೂಕ ಪಂಚಾಯತ ಚುನಾವಣಾ ತಯಾರಿ ನಡೆಯುತ್ತಿದೆ. ದೆಹಲಿ ಮಾದರಿ ಸರ್ಕಾರ ರಾಜ್ಯಕ್ಕೆ ಬೇಕಾಗಿರುವುದರಿಂದ ದೆಹಲಿಯಲ್ಲಿ ಸಾಧಿಸಿರೋದನ್ನು ಘೋಷಣೆ ಮಾಡಲು ಬರ್ತಾಯಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದೆ ಆಪ್ ಪಕ್ಷ. ಯಾವಾಗ ಕೆಂಡ ಏಳುತ್ತೋ ಗೋತ್ತಿಲ್ಲ. ಮೂರು ಪಕ್ಷಗಳ ಬೂದಿ ಸರಿಯುತ್ತೋ ಆವಾಗ ಕೆಂಡ ಎದ್ದು ಆಡಳಿತ ಮಾಡುತ್ತೆ. ಯೋಗ್ಯರು, ದಕ್ಷ, ಪ್ರಮಾಣಿಕರು ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.