Baarisu Kannada Dim Dimava Highlights: ಕರ್ನಾಟಕ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲ: ಪ್ರಧಾನಿ ಮೋದಿ

Rakesh Nayak Manchi
|

Updated on:Feb 25, 2023 | 8:02 PM

ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಹಬ್ಬವನ್ನು ದೆಹಲಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರ ಗಣ್ಯರು ಭಾಗಿಯಾಗಿದ್ದಾರೆ.

Baarisu Kannada Dim Dimava Highlights: ಕರ್ನಾಟಕ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲ: ಪ್ರಧಾನಿ ಮೋದಿ
ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ‘ಏಕ ಭಾರತ ಶ್ರೇಷ್ಠ ಭಾರತ’ದ (Ek Bharat Shret Bharat) ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಹಾಗೂ  ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಹಬ್ಬ (Baarisu Kannada Dim Dimava Cultural Festival)ವನ್ನು  ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀ ಸ್ಪಟಿಕಪುರ ನಂಜಾವಧೂತ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಭಾಗವಹಿಸಲಿದ್ದಾರೆ. ಈ ಉತ್ಸವದ ಎರಡು ದಿನಗಳ ಆಚರಣೆಯಲ್ಲಿ ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ಕವನ ವಾಚನದ ಮೂಲಕ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗುತ್ತದೆ.

LIVE NEWS & UPDATES

The liveblog has ended.
  • 25 Feb 2023 07:15 PM (IST)

    Baarisu Kannada Dim Dimava Live: ರಾಜ್ಯದ ಅಭಿವೃದ್ಧಿಗೆ ಮೂರು ವರ್ಷದ ಅಭಿವೃದ್ಧಿಯಲ್ಲಿ 30 ಸಾವಿರ ಕೋಟಿ ಸರಕಾರ ನೀಡಿದೆ: ಮೋದಿ

    ಕನ್ನಡ ಭಾಷೆ ಓದುವವರಿಂದ ಓದುವ ಹವ್ಯಾಸ ಚೆನ್ನಾಗಿರುತ್ತದೆ: ಮೋದಿ

    ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಹತ್ತು ವರ್ಷದ ಅವಧಿಯಲ್ಲಿ ಹನ್ನೊಂದು ಸಾವಿರ ಕೋಟಿ ನೀಡಿತ್ತು. ಆದರೆ ನಮ್ಮ ಸರ್ಕಾರ ಮೂರು ವರ್ಷದ ಅಭಿವೃದ್ಧಿಯಲ್ಲಿ 30 ಸಾವಿರ ಕೋಟಿ ನೀಡಿದೆ. ಪ್ರತಿ ವರ್ಷ ನಮ್ಮ ಸರ್ಕಾರ ರಸ್ತೆಗೆ ಐದು ಸಾವಿರ ಕೋಟಿ ನೀಡುತ್ತಿದೆ. ಕಾಂಗ್ರೆಸ್ ಐದು ವರ್ಷಕ್ಕೆ ಆರು ಸಾವಿರ ಕೋಟಿ ನೀಡುತ್ತಿತ್ತು ಎಂದರು. ಭದ್ರಾ ಮೇಲ್ದಂಡೆ ಮೂಲಕ ಮಧ್ಯ ಕರ್ನಾಟಕದ ಅಭಿವೃದ್ಧಿ ಮಾಡುತ್ತಿದೆ. ಇದರಿಂದ ಕರ್ನಾಟಕದ ವಿಕಾಸ ಬದಲಾಗಲಿದೆ. ಮುಂದಿನ 25 ವರ್ಷ ಮಹತ್ವದಾಗಿದೆ. ಮತ್ತಷ್ಟು ಮಹತ್ವದ ಕೆಲಸಗಳನ್ನು ಮಾಡಬಹುದು. ಕಲಿಕೆ ಮತ್ತು ಕಲೆ ಎರಡನ್ನು ಅಭಿವೃದ್ಧಿ ಮಾಡಬೇಕು. ಕನ್ನಡ ಭಾಷೆ ಓದುವವರಿಂದ ಓದುವ ಹವ್ಯಾಸ ಚೆನ್ನಾಗಿರುತ್ತದೆ. ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ ಎಂದರು.

  • 25 Feb 2023 07:04 PM (IST)

    Baarisu Kannada Dim Dimava Live: ಪ್ರತಿ ಕನ್ನಡ ಕುಟುಂಬದ ಜೊತೆ ಕನ್ನಡೇತರ ಕುಟುಂಬಗಳು ಭಾಗಿಯಾಗಲಿ: ಮೋದಿ

    ಮುಂದಿನ ಕಾರ್ಯಕ್ರಮಗಳಲ್ಲಿ ಪ್ರತಿ ಕನ್ನಡ ಕುಟುಂಬದ ಜೊತೆ ಕನ್ನಡೇತರ ಕುಟುಂಬಗಳು ಭಾಗಿಯಾಗಲಿ. ಈ ಮೂಲಕ ಕನ್ನಡ ಭಾಷೆ ಮತ್ತಷ್ಟು ಬೆಳೆವಣಿಗೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕರ್ನಾಟಕದ ಸಿರಿಧಾನ್ಯಗಳ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಮೋದಿ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿರಿಧಾನ್ಯಗಳ ವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕ. ರಾಗಿ ಕರ್ನಾಟಕ ಸಂಸ್ಕೃತಿಯ ಭಾಗವಾಗಿದೆ. ಯಡಿಯೂರಪ್ಪ ಕಾಲದಿಂದಲೂ ಸಿರಿಧಾನ್ಯ ಪ್ರಚಾರ ಮಾಡಲು ಆರಂಭಿಸಿತ್ತು. ಇದೀಗ ವಿಶ್ವದಲ್ಲಿ ಇದರ ಬೇಡಿಕೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ರೈತರಿಗೆ ಲಾಭ ಸಿಗಲಿದೆ ಎಂದರು.

  • 25 Feb 2023 07:01 PM (IST)

    Baarisu Kannada Dim Dimava Live: ದೆಹಲಿಯಲ್ಲಿರುವ ಕನ್ನಡ ಕುಟುಂಬಗಳಿಗೆ ಕನ್ನಡ ಕಲಿಕೆಗೆ ಅವಕಾಶ: ಮೋದಿ

    ಬಸವಣ್ಣನವರ ವಚನಗಳು, ಕುವೆಂಪು ಬರೆದ ರಾಮಾಯಣ ದರ್ಶನಂ, ಕರ್ನಾಟಕದ ಕಂಸಾಳೆ, ಯಕ್ಷಗಾನದ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ಮೋದಿ, ದೆಹಲಿಯಲ್ಲಿರುವ ಕನ್ನಡ ಕುಟುಂಬಗಳಿಗೆ ಕನ್ನಡ ಕಲಿಕೆಗೆ ಅವಕಾಶ ಇದೆ. ನನಗೆ ಇಲ್ಲಿ ಇಡೀ ಕರ್ನಾಟಕದ ಯಾತ್ರೆ ಮಾಡುವ ಅವಕಾಶ ಸಿಕ್ಕಿದೆ ಎಂದರು. ಮುಂದಿನ ಕಾರ್ಯಕ್ರಮಗಳಲ್ಲಿ ಕನ್ನಡೇತರ ಕುಟುಂಬಗಳು ಕೂಡ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಎಂದರು.

  • 25 Feb 2023 06:59 PM (IST)

    Baarisu Kannada Dim Dimava Live: ಸಂಗೊಳ್ಳಿ ರಾಯಣ್ಣನಂತಹ ವೀರರು ವಿರೋಧಿಗಳ ಮುಂದೆ ಗೋಡೆಯಂತೆ‌ ನಿಲ್ಲುತ್ತಾರೆ: ಮೋದಿ

    ಕೆಲವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಾರೆ. ಆದರೆ ದೇವರ ದಾಸಿಮಯ್ಯ ಸಂತರು ದೇಶವನ್ನು ಇಷ್ಟ ಲಿಂಗದ ಮೂಲಕ ಜೋಡಿಸುತ್ತಾರೆ ಜೋಡಿಸುತ್ತಾರೆ. ರಾಣಿ ಅಬ್ಬಕ್ಕ, ಓಬವ್ವ, ಸಂಗೊಳ್ಳಿ ರಾಯಣ್ಣನಂತಹ ವೀರರು ವಿರೋಧಿಗಳ ಮುಂದೆ ಗೋಡೆಯಂತೆ‌ ನಿಲ್ಲುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  • 25 Feb 2023 06:56 PM (IST)

    Baarisu Kannada Dim Dimava Live: ಕರ್ನಾಟಕದ ಅಭಿವೃದ್ಧಿಗೊಳಿಸುವುದು ಕೇಂದ್ರದ ಮೊದಲ ಆದ್ಯತೆ: ಮೋದಿ

    ಕರ್ನಾಟಕದ ಅಭಿವೃದ್ಧಿಗೊಳಿಸುವುದು ಕೇಂದ್ರದ ಮೊದಲ ಆದ್ಯತೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಒಂದು ಕಾಲದಲ್ಲಿ ಇಲ್ಲಿನ ಹಣ ವಿದೇಶದಲ್ಲಿ ವಿಯೋಗಿಸಲಾಗುತ್ತಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಲಾಗುತ್ತಿದೆ. ಕರ್ನಾಟದಲ್ಲಿ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. 2023ರಲ್ಲಿ ಒಂದೇ ವರ್ಷದಲ್ಲಿ 7 ಸಾವಿರ ಕೋಟಿ ನೀಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯೂ ನಾವು ಆರಂಭಿಸಿದ್ದೇವೆ ಎಂದರು. ದೆಹಲಿಯಲ್ಲಿರುವ ಅನೇಕ ಕನ್ನಡಿಗರು ನೀವು ಕರ್ನಾಟಕಕ್ಕೆ ಭೇಟಿ ನೀಡಿಲ್ಲ. ಈಗ ನೀವು ಕರ್ನಾಟಕಕ್ಕೆ ಹೋದಾಗ ಆಶ್ಚರ್ಯ ಆಗುತ್ತೀರಿ. ಕನ್ನಡ ಭಾಷೆಯ ಸಾಹಿತ್ಯ ಸಮೃದ್ಧದಿಂದ ಕೂಡಿದೆ. ಕನ್ನಡ ಭಾಷೆಯ ಓದುಗರ ಸಂಖ್ಯೆ ಬಹಳ ಹೆಚ್ಚಿದೆ ಎಂದರು.

  • 25 Feb 2023 06:53 PM (IST)

    Baarisu Kannada Dim Dimava Live: ಕರ್ನಾಟಕ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲ: ಮೋದಿ

    ಕರ್ನಾಟಕಟ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ದೇಶವು 75 ವರ್ಷದ ಅಮೃತ ಮಹೊತ್ಸವದಲ್ಲಿದೆ. ದೆಹಲಿ ಕರ್ನಾಟಕ ಸಂಘವೂ ಅಮೃತ ಮಹೋತ್ಸವ ಸಂದರ್ಭದಲ್ಲಿದೆ. ಹೀಗಾಗಿ ಸಂಘದ ಭವಿಷ್ಯಕಂಡ ಎಲ್ಲಾ ಮಹನಿಯರಿಗೂ ನನ್ನ ನಮನ. 75 ವರ್ಷ ಸಂಘ ನಡೆಸುವುದು ಅಷ್ಟು ಸುಲಭವಲ್ಲ. ಎಲ್ಲಾ ಸದಸ್ಯರಿಗೂ ನಾನು ಅಭಿನಂದಿಸುತ್ತೆನೆ ಎಂದರು.

  • 25 Feb 2023 06:50 PM (IST)

    Baarisu Kannada Dim Dimava Live: ಕರ್ನಾಟಕ ರಾಜ್ಯ ಐತಿಹಾಸಿಕ ಚರಿತ್ರೆ ಹೊಂದಿದೆ: ಪ್ರಧಾನಿ ಮೋದಿ

    12ನೇ ಶತಮಾನದ ಅನುಭವ ಮಂಟಪ ಬಗ್ಗೆ ಪ್ರಸ್ತಾಪ ಮಾಡಿದ ನರೇಂದ್ರ ಮೋದಿ, ಲಂಡನ್​ ಥೇಮ್ಸ್ ನದಿ ದಡದಲ್ಲಿ ಬಸವಣ್ಣ ಪುತ್ಥಳಿ ಅನಾವರಣ ಮಾಡಲಾಯಿತು. ಬಸವಣ್ಣ ಪುತ್ಥಳಿ ಉದ್ಘಾಟಿಸಿರುವು ನನ್ನ ಸೌಭಾಗ್ಯವಾಗಿತ್ತು ಎಂದರು. ಕರ್ನಾಟಕ ರಾಜ್ಯ ಐತಿಹಾಸಿಕ ಚರಿತ್ರೆ ಹೊಂದಿದೆ. ನಾನು ಯಾವುದೇ ರಾಷ್ಟ್ರದ ಅಧ್ಯಕ್ಷರನ್ನು ಭೇಟಿಯಾಗುವಾಗ ಆ ದೇಶದ ಜೊತೆಗಿನ ಆಧುನಿಕ ಮತ್ತು ಪ್ರಾಚೀನತೆ ಬಾಂಧವ್ಯ ನೋಡುತ್ತೇನೆ ಎಂದರು.

  • 25 Feb 2023 06:46 PM (IST)

    Baarisu Kannada Dim Dimava Live: ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು

    ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕನ್ನಡದಲ್ಲೇ ಹೇಳುವ ಮೂಲು ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಜನರ ಕೊಡುಗೆ ಸಾಕಷ್ಟಿದೆ. ಹನುಮಂತ ಇಲ್ಲದೇ ರಾಮ ಇಲ್ಲ, ರಾಮಾಯಣವೂ ಇಲ್ಲ. ಮಧ್ಯ ಕಾಲದಲ್ಲಿ ವಿದೇಶಿಗರು ಸೋಮನಾಥ ದೇವಸ್ಥಾನದ ಶಿವಲಿಂಗದ ಮೇಲೆ ದಾಳಿ ಮಾಡಿದರು ಎಂದರು. ಕನ್ನಡಿಗರು ಏಕ್​ ಭಾರತ್ ಶ್ರೇಷ್ಠ ಭಾರತದ ಮಂತ್ರವನ್ನು ಗೆದ್ದಿದ್ದಾರೆ. ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ನಾವು ಕೇಳಿದೆವು. ಜಯ ಭಾರತೀಯ ತನುಜಾತೆಮ ಜಯಹೇ ಕರ್ನಾಟಕ ಮಾತೆ ಎಂತಹ ಅದ್ಭುತವಾದುದು. ಈ ಗೀತೆಯಲ್ಲಿನ ಇಡೀ ಭಾರತ ಹಾಗೂ ಕರ್ನಾಟಕದ ವಿವರಣೆಯನ್ನು ಒಳಗೊಂಡಿದೆ ಎಂದರು.

  • 25 Feb 2023 06:27 PM (IST)

    Baarisu Kannada Dim Dimava Live: ಕೇಂದ್ರದ ಐದು ಟ್ರಿಲಿಯನ್ ಎಕಾನಮಿಗೆ ಒಂದು ಟ್ರಿಲಿಯನ್ ಎಕಾನಮಿ ನೀಡುವ ಜವಾಬ್ದಾರಿ ಕನ್ನಡಿಗರದ್ದು: ನಿರ್ಮಲಾನಂದನಾಥ ಶ್ರೀ

    ಇದೊಂದು ಅಭೂತಪೂರ್ವಾಗಿರುವ ಕಾರ್ಯಕ್ರಮ. ನಾಡಪ್ರಭು ಕೆಂಪೇಗೌಡರ ಅತಿ ಎತ್ತರದ ಪ್ರತಿಮೆ ಉದ್ಘಾಟನೆಯನ್ನು ಪ್ರಧಾನಿಯವರು ಮಾಡಿದ್ದರು. ಈ ನೆನಪು ಹಸಿರಾಗಿರುವಾಗಲೇ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಉದ್ಘಾಟಿಸುತ್ತಿರುವುದು ಸಂತೋಷವಾಗಿದೆ. ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ದೆಹಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರದ ಐದು ಟ್ರಿಲಿಯನ್ ಎಕಾನಮಿಗೆ ಒಂದು ಟ್ರಿಲಿಯನ್ ಎಕಾನಮಿ ನೀಡುವ ಜವಾಬ್ದಾರಿ ಕನ್ನಡಿಗರದ್ದಾಗಿದೆ ಎಂದರು.

  • 25 Feb 2023 06:20 PM (IST)

    Baarisu Kannada Dim Dimava Live: ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯ ಸಾಕ್ಷಿಚಿತ್ರ ಪ್ರದರ್ಶನ

    ದೆಹಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಕರ್ನಾಟಕದ ಸಾಂಸ್ಕೃತಿ ಶ್ರೀಮಂತಿಕೆ ಹಾಗೂ ಡಬಲ್ ಇಂಜಿನ್ ಸರ್ಕಾರದ ಪ್ರೋತ್ಸಾಹದ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

  • 25 Feb 2023 06:15 PM (IST)

    Baarisu Kannada Dim Dimava Live: ದೆಹಲಿಯಲ್ಲೂ ಕನ್ನಡ ಕಂಪು ನನಗೆ ಕಾಣಿಸುತ್ತಿದೆ: ಸಿಎಂ ಬೊಮ್ಮಾಯಿ

    ವಿಶ್ವಕನ್ನಡ ಸಮ್ಮೇಳನಕ್ಕೆ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ

    ದೆಹಲಿಯಲ್ಲೂ ಕನ್ನಡ ಕಂಪು ನನಗೆ ಕಾಣಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದೆಹಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಹುಟ್ಟುವುದೇ ಒಂದು ಸೌಭಾಗ್ಯ, ಕನ್ನಡ ನಾಡು ಇವತ್ತು ನೈಸರ್ಗಿಕ, ಸಾಂಸ್ಕೃತಿ, ಕಾಯಕ, ಆಧ್ಯಾತ್ಮಿಕ, ನೀತಿ, ಜ್ಞಾನ, ತಂತ್ರಜ್ಞಾನದಿಂದ ಶ್ರೀಮಂತವಾಗಿರುವ ನಾಡಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಐದು ಟ್ರಿಲಿಯನ್ ಕನಸಿಗೆ ಬರುವಂತಹ ವರ್ಷಗಳಲ್ಲಿ ಒಂದು ಟ್ರಿಲಿಯನ್ ಕರ್ನಾಟಕದಿಂದ ಕೊಡುಗೆ ನೀಡಲಾಗುವುದು ಎಂದರು. ಇತ್ತೀಚೆಗೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ದಾವಣಗೆರೆಯಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನಕ್ಕೆ 7 ಕೋಟಿ ಕನ್ನಡಿಗರ ಪರವಾಗಿ ಮೋದಿಗೆ ಆಹ್ವಾನ ನೀಡುತ್ತೇನೆ ಎಂದರು.

  • 25 Feb 2023 05:16 PM (IST)

    Baarisu Kannada Dim Dimava Live: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಮೋದಿ

    ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದು ಅವರು ಉದ್ಘಾಟಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಇಂಧನ ಇಲಾಖೆಯ ಸಚಿವ ಸುನೀಲ್ ಕುಮಾರ್, ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥಶ್ರೀ, ನಂಜಾವಧೂತಶ್ರೀ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ, ಮೈಸೂರು ಅರಮನೆಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​, ಧರ್ಮಸ್ಥಳದ ಧರ್ಮಾಧಿಕಾರಿ, ಸಂಸದ ಡಾ.‌ವೀರೇಂದ್ರ ಹೆಗಡೆ ಭಾಗಿಯಾಗಿದ್ದು, ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಹೊರನಾಡು ಕನ್ನಡಿಗರು ಭಾಗಿಯಾಗಿದ್ದಾರೆ.

  • 25 Feb 2023 05:07 PM (IST)

    Baarisu Kannada Dim Dimava Live: ಪ್ರಧಾನಿ ಮೋದಿಯವರಿಗೆ ಪೂರ್ಣಕುಂಭ ಸ್ವಾಗತ

    ದೆಹಲಿಯ ತಾಲ್ಕಟೋರಾ ಒಳಾಂಗಣ ಮೈದಾನಲ್ಲಿ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಆರಂಭಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ನೀಡಲಿದ್ದಾರೆ. ಇನ್ನು, ಪ್ರಧಾನಿ ಸ್ವಾಗತಕ್ಕೆ ದೆಹಲಿ ಕನ್ನಡಿಗರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದು, ಪೂರ್ಣಕುಂಭ ಸ್ವಾಗತ ನೀಡಲು ಮಹಿಳೆಯರು ಸಜ್ಜಾಗಿ ನಿಂತಿದ್ದಾರೆ.

  • 25 Feb 2023 05:04 PM (IST)

    Baarisu Kannada Dim Dimava Live: ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ಮೋದಿಗೆ ಹಾರ್ದಿಕ ಸುಸ್ವಾಗತ: ಸಿಎಂ ಬೊಮ್ಮಾಯಿ

    ದೆಹಲಿ ಕರ್ನಾಟಕ ಸಂಘ ಆಯೋಜಿಸಿರುವ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸುತ್ತಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹಾರ್ದಿಕ ಸುಸ್ವಾಗತವನ್ನು ಕೋರುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

  • 25 Feb 2023 05:00 PM (IST)

    Baarisu Kannada Dim Dimava Live: ನಮ್ಮ ನೆಲದ ಸಂಸ್ಕೃತಿ ಕಲೆಗಳನ್ನು ಬಿಂಬಿಸುವ ಕಾರ್ಯಕ್ರಮ: ಪ್ರಲ್ಹಾದ್ ಜೋಶಿ

    ಪ್ರಧಾನಿ ಮೋದಿ ಟ್ವೀಟ್​ಗೆ ರೀಟ್ವೀಟ್ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ದೆಹಲಿಯಲ್ಲಿ ಇಂದು ಸಂಜೆ 5:00 ಗಂಟೆಗೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಜೊತೆ “ಬಾರಿಸು ಕನ್ನಡ ಡಿಂಡಿಮವ” ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದು, ನಮ್ಮ ನೆಲದ ಸಂಸ್ಕೃತಿ ಕಲೆಗಳನ್ನು ಬಿಂಬಿಸುವ ಕಾರ್ಯಕ್ರಮ ಇದಾಗಿದೆ” ಎಂದರು.

  • 25 Feb 2023 04:49 PM (IST)

    Baarisu Kannada Dim Dimava Live: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಸಿಎಂ ಬೊಮ್ಮಾಯಿ ಆಗಮನ

    ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯಲಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇಂಧನ ಸಚಿವ ಸುನೀಲ್ ಕುಮಾರ್ ಆಗಮಿಸಿದ್ದಾರೆ.

  • 25 Feb 2023 04:27 PM (IST)

    Baarisu Kannada Dim Dimava Live: ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ

    ಕರ್ನಾಟಕದ ಅದ್ಭುತ ಸಂಸ್ಕೃತಿಯ ಆಚರಣೆ ಎಂದ ನರೇಂದ್ರ ಮೋದಿ

    ದೆಹಲಿಯಲ್ಲಿ ನಡೆಯಲಿರುವ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಉತ್ಸವದ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ಅಮೃತ ಮಹೋತ್ಸವದ ಅಂಗವಾಗಿ ದೆಹಲಿ ಕರ್ನಾಟಕ ಸಂಘ ದೆಹಲಿಯಲ್ಲಿ ಆಯೋಜಿಸಿರುವ ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವದಲ್ಲಿ ಇಂದು ಸಂಜೆ 5 ಗಂಟೆಗೆ ಪಾಲ್ಗೊಳ್ಳಲಿದ್ದೇನೆ. ಈ ಕಾರ್ಯಕ್ರಮವು ಕರ್ನಾಟಕದ ಅದ್ಭುತ ಸಂಸ್ಕೃತಿಯ ಆಚರಣೆಯಾಗಿದೆ ಮತ್ತು ರಾಜ್ಯದ ನೃತ್ಯ, ಸಂಗೀತ ಮತ್ತು ನಾಟಕದಂತಹ ಪ್ರಾಕಾರಗಳನ್ನು ಪ್ರದರ್ಶಿಸುತ್ತದೆ” ಎಂದರು.

  • 25 Feb 2023 04:21 PM (IST)

    Baarisu Kannada Dim Dimava Live: ಕೆಲವೇ ಕ್ಷಣದಲ್ಲಿ ಬಾರಿಸು ಕನ್ನಡ ಡಿಂಡಿಮವಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ

    ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ‘ಏಕ ಭಾರತ ಶ್ರೇಷ್ಠ ಭಾರತ’ದ ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಹಬ್ಬ (Baarisu Kannada Dim Dimava Cultural Festival)ವನ್ನು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ.

  • Published On - Feb 25,2023 4:16 PM

    Follow us
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ