ಯಾದಗಿರಿಯಲ್ಲಿ ಬುಗಿಲೆದ್ದ ಟಿಪ್ಪು ಸರ್ಕಲ್ ವಿವಾದ: ವೃತ್ತದ ತೆರವಿಗೆ ಫೆ.27ರಂದು ಶಿವಾಜಿ ಸೇನೆಯಿಂದ ಪ್ರತಿಭಟನೆ, ಟಿಪ್ಪು ಸಂಘಟನೆಯಿಂದ ವಿರೋಧ

ಯಾದಗಿರಿ ನಗರದಲ್ಲಿರುವ ಟಿಪ್ಪು ಸುಲ್ತಾನ್‌ ಸರ್ಕಲ್ ವಿವಾದ ಬುಗಿಲೆದ್ದಿದ್ದು, ವೃತ್ತ ತೆರವುಗೊಳಿಸುವಂತೆ ಆಗ್ರಹಿಸಿ ಶಿವಾಜಿ ಸೇನೆಯಿಂದ ಫೆಬ್ರವರಿ 27ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಇನ್ನೊಂದೆಡೆ, ಪ್ರತಿಭಟನೆಗೆ ಅವಕಾಶ ನೀಡದಂತೆ ಟಿಪ್ಪು ಸುಲ್ತಾನ್ ಸಂಘಟನೆ ಆಗ್ರಹಿಸಿದೆ.

ಯಾದಗಿರಿಯಲ್ಲಿ ಬುಗಿಲೆದ್ದ ಟಿಪ್ಪು ಸರ್ಕಲ್ ವಿವಾದ: ವೃತ್ತದ ತೆರವಿಗೆ ಫೆ.27ರಂದು ಶಿವಾಜಿ ಸೇನೆಯಿಂದ ಪ್ರತಿಭಟನೆ, ಟಿಪ್ಪು ಸಂಘಟನೆಯಿಂದ ವಿರೋಧ
ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ಬಳಿ ಇರುವ ಟಿಪ್ಪು ಸುಲ್ತಾನ್‌ ಸರ್ಕಲ್
Follow us
Rakesh Nayak Manchi
|

Updated on:Feb 25, 2023 | 4:56 PM

ಯಾದಗಿರಿ: ನಗರದ ಹತ್ತಿಕುಣಿ ಕ್ರಾಸ್ ಬಳಿ ಇರುವ ಟಿಪ್ಪು ಸುಲ್ತಾನ್‌ ಸರ್ಕಲ್ (Tipu Sultan Circle) ವಿವಾದ ಬುಗಿಲೆದ್ದಿದೆ. ಈ ಅನಧಿಕೃತ ವೃತ್ತವನ್ನು ಕೂಡಲೇ ತೆರವುಗೊಳಿಸುವಂತೆ ಶಿವಾಜಿ ಸೇನೆ (Shivaji Sene) ಒತ್ತಾಯಿಸುತ್ತಿದ್ದು, ಫೆಬ್ರವರಿ 27ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಆದರೆ ಈ ವೃತ್ತ ಅಧಿಕೃತವಾಗಿದೆ ಎಂದು ಹೇಳುತ್ತಿರುವ ಟಿಪ್ಪು ಸುಲ್ತಾನ್ ಸಂಘಟನೆ (Tipu Sultan Organisation), ಯಾವುದೇ ಕಾರಣಕ್ಕೂ ಶಿವಾಜಿ ಸೇನೆಗೆ ಪ್ರತಿಭಟನೆ ನಡೆಸಲು ಅವಕಾಶ ನೀಡದಂತೆ ಆಗ್ರಹಿಸುತ್ತಿದೆ. 2010 ರಲ್ಲೇ‌ ಟಿಪ್ಪು ಸರ್ಕಲ್ ನಿರ್ಮಾಣಕ್ಕೆ ನಗರಸಭೆ ಅನುಮತಿ ನೀಡಿದೆ. ಆದರೆ ಈಗ ಸುಖಾಸುಮ್ಮನೆ ವಿವಾದ ಮಾಡುತ್ತಿದ್ದಾರೆ ಎಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಉತ್ತರ ಕರ್ನಾಟಕ ಅಧ್ಯಕ್ಷ ಅಬ್ದುಲ್ ಕರೀಂ ಆರೋಪಿಸಿದ್ದಾರೆ.

ಹತ್ತಿಕುಣಿ ಕ್ರಾಸ್ ಬಳಿ ಇರುವ ಟಿಪ್ಪು ಸುಲ್ತಾನ್‌ ಸರ್ಕಲ್ ಅನಧಿಕೃತವಾಗಿದೆ. ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಇದೆ 27 ರಂದು ಶಿವಾಜಿ ಸೇನೆಯಿಂದ ಟಿಪ್ಪು ಸರ್ಕಲ್​ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ತೆರವು ಮಾಡದಿದ್ದರೆ ನಾವೇ ತೆರವು ಮಾಡುತ್ತೇವೆ ಎಂದು ಶಿವಾಜಿ ಸೇನೆ ಅಧ್ಯಕ್ಷ ಪರಶುರಾಮ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅವಮಾನಿಸಲೆಂದೇ ಕೊಡಗಿನ ಜನ ನಾಯಿಗೆ ಟಿಪ್ಪು ಹೆಸರಿಡುತ್ತಾರೆ, ಅಷ್ಟು ಕ್ರೋಧ, ಸಿಟ್ಟು, ಹತಾಶೆ ಜನರಿಗೆ ಇದೆ: ಅಡ್ಡಂಡ ಕಾರ್ಯಪ್ಪ

ಟಿಪ್ಪು ಸರ್ಕಲ್ ಬಗ್ಗೆ ಮಾತನಾಡಿದ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಉತ್ತರ ಕರ್ನಾಟಕ ಅಧ್ಯಕ್ಷ ಅಬ್ದುಲ್ ಕರೀಂ, ಶಿವಾಜಿ ಸೇನೆಯ ಪ್ರತಿಭಟನೆಗೆ ಅವಕಾಶ ಕೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗ್ರಹಿಸಿದ್ದಾರೆ. ಟಿಪ್ಪು ಸುಲ್ತಾನ್ ಸರ್ಕಲ್ ಅಧಿಕೃತವಾಗಿದೆ. 2010 ರಲ್ಲೇ‌ ನಗರಸಭೆ ಅನುಮತಿ ನೀಡಿದೆ. ಆದರೆ ಈಗ ಸುಖಾಸುಮ್ಮನೆ ವಿವಾದ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಪ್ರಕರಣ ದಾಖಲಿಸಿ ಒಳಗೆ ಹಾಕಬೇಕೆಂದು ಆಗ್ರಹಿಸಿದರು.

ಶಾಂತಿಯುತವಾಗಿರುವ ಯಾದಗಿರಿಯಲ್ಲಿ ಅಶಾಂತಿ ಸೃಷ್ಟಿ ಮಾಡಲು ಶಿವಾಜಿ ಸೇನೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಅವಕಾಶ ಕೊಟ್ಟರೆ ನಾವು ಪ್ರತಿಭಟನೆಯನ್ನ ತಡೆಯುತ್ತೇವೆ. ನಾವು ಸ್ಥಳದಲ್ಲೇ ಕುಳಿತುಕೊಳ್ಳುತ್ತೇವೆ, ಏನಾದರು ಹೆಚ್ಚು ಕಮ್ಮಿ ಆದರೆ ನಾವು ಜವಾಬ್ದಾರರು ಅಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಅಬ್ದುಲ್ ಕರೀಂ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Sat, 25 February 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್