ಅವಮಾನಿಸಲೆಂದೇ ಕೊಡಗಿನ ಜನ ನಾಯಿಗೆ ಟಿಪ್ಪು ಹೆಸರಿಡುತ್ತಾರೆ, ಅಷ್ಟು ಕ್ರೋಧ, ಸಿಟ್ಟು, ಹತಾಶೆ ಜನರಿಗೆ ಇದೆ: ಅಡ್ಡಂಡ ಕಾರ್ಯಪ್ಪ

ಕೊಡಗಿನ ಜನ ನಾಯಿಗೆ ಟಿಪ್ಪು ಹೆಸರು ನಾಮಕರಣ ಮಾಡುತ್ತಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.

ಅವಮಾನಿಸಲೆಂದೇ ಕೊಡಗಿನ ಜನ ನಾಯಿಗೆ ಟಿಪ್ಪು ಹೆಸರಿಡುತ್ತಾರೆ, ಅಷ್ಟು ಕ್ರೋಧ, ಸಿಟ್ಟು, ಹತಾಶೆ ಜನರಿಗೆ ಇದೆ: ಅಡ್ಡಂಡ ಕಾರ್ಯಪ್ಪ
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪImage Credit source: vistaranews.com
Follow us
ಗಂಗಾಧರ​ ಬ. ಸಾಬೋಜಿ
|

Updated on: Feb 22, 2023 | 5:47 PM

ತುಮಕೂರು: ಕೊಡಗಿನ ಜನ ನಾಯಿಗೆ ಟಿಪ್ಪು (Tipu Sultan) ಹೆಸರು ನಾಮಕರಣ ಮಾಡುತ್ತಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಟಿಪ್ಪುವನ್ನು ಅವಮಾನಿಸಲೆಂದೇ ಮನೆ ಮನೆಯಲ್ಲಿ ನಾಯಿಗಳಿಗೆ ಟಿಪ್ಪು ಹೆಸರು ನಾಮಕರಣ ಮಾಡುತ್ತಾರೆ. ಅಷ್ಟು ಕ್ರೋಧ, ಸಿಟ್ಟು, ಹತಾಶೆ ಕೊಡಗಿನ ಜನರಿಗೆ ಇದೆ. ಇವತ್ತೂ ಕೂಡ ಟಿಪ್ಪು ಎತ್ತಿದ ಅಭ್ಯರ್ಥಿ ಕೊಡಗಿನಲ್ಲಿ ಸೋಲುತ್ತಾನೆ. ನಾನು ಟಿಪ್ಪು ಪರ ಎಂದವರೆಲ್ಲಾ ಸೋತಿದ್ದಾರೆ ಎಂದು ಹೇಳಿದರು.

ಖಳನಾಯಕನನ್ನ ಖಳನಾಯಕನಾಗಿ ತೋರಿಸಬೇಕು

ಟಿಪ್ಪು ನಿಜ ಕನಸುಗಳು ನಾಟಕ ಇದು ಬಿಜೆಪಿಯ ಕಥಾನಕ ಅಲ್ಲ, ಇದು ಟಿಪ್ಪು ಕಥಾನಕ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಖಳನಾಯಕನನ್ನ ಖಳನಾಯಕನಾಗಿ ತೋರಿಸಬೇಕು. ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು, 80 ದೇವಸ್ಥಾನಗಳನ್ನ ಒಡೆದುಹಾಕಿದ. ಹೀಗಾಗಿ 80 ದೇವಸ್ಥಾನಗಳನ್ನ ಒಡೆದಿದ್ದನ್ನು ಹೇಳಬೇಕಾಗುತ್ತೆ. ಸಾವಿರಾರು ಜನರನ್ನು ಕೊಂದಿರುವುದನ್ನು, ಮತಾಂತರ ಮಾಡಿದ್ದನ್ನೂ ಹೇಳಬೇಕಾಗುತ್ತೆ. ಆ ಸಮುದಾಯದ ಕೆಲವರ ಮನಸ್ಥಿತಿಯೇ ಹಾಗಿದೆ. ಅವರು ಶಿಶುನಾಳ ಶರೀಫರನ್ನು ಗೌರವಿಸಲಾರರು. ಅವರು ಮತಾಂಧ ಟಿಪ್ಪುವನ್ನೇ ಗೌರವಿಸ್ತಾರೆ ಎಂದರು.

ಇದನ್ನೂ ಓದಿ: ಟಿಪ್ಪು ನಿಜ ಕನಸುಗಳು: ಈ ನಾಟಕ ಪ್ರದರ್ಶನದಿಂದ ಬಿಜೆಪಿಗೆ ಲಾಭವೂ ಇಲ್ಲ, ಕಾಂಗ್ರೆಸ್​ಗೆ ನಷ್ಟವೂ ಇಲ್ಲ: ಅಡ್ಡಂಡ ಕಾರ್ಯಪ್ಪ

ತಡೆ ಕೋರಿ ಅರ್ಜಿ ಹಾಕಿದವರು ಪಲಾಯನ ಮಾಡಿದರು 

ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಹಾಕಿದವರು ಸೂಕ್ತ ದಾಖಲೆ ಒದಗಿಸಲಾಗಿದೆ ಪಲಾಯನ ಮಾಡಿದರು. ಹಿಂದಿನ ಸರ್ಕಾರಗಳು ಟಿಪ್ಪುವನ್ನು ಹೀರೋ ಎಂದು ಬಿಂಬಿಸಿವೆ. ಟಿಪ್ಪು ನಿಜವಾದ ಖಳನಾಯಕ. ಆತನ ನಿಜ ಕನಸುಗಳನ್ನು ನಾಟಕದಲ್ಲಿ ಅನಾವರಣ ಮಾಡಲಾಗಿದೆ. ಸತ್ಯದ ಅನಾವರಣವೇ ಈ ನಾಟಕದ ಉದ್ದೇಶವಾಗಿದೆ. ಪೊಲೀಸರ ಸಲಹೆಯಂತೆ ಒಳಾಂಗಣ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

ನಾನು ಶಾಂತಿ ಪ್ರಿಯ. ಶಾಂತಿಯುತವಾಗಿ ಪ್ರದರ್ಶನ ಆಗಲಿ ಎನ್ನುವುದು ನನ್ನ ಆಶಯ. ಇದರಿಂದ ಬಿಜೆಪಿಗೆ ಲಾಭ ಆಗುತ್ತದೆ, ಕಾಂಗ್ರೆಸ್​ಗೆ ನಷ್ಟ ಆಗುತ್ತದೆ ಎಂದು ಲೆಕ್ಕ ಹಾಕಿ ಕೂರುವ ವ್ಯಾಪಾರಿ ನಾನಲ್ಲ. ನಾನೊಬ್ಬ ರಂಗಭೂಮಿ ಕಲಾವಿದ. ನಾಟಕ ಮಾಡೋದಷ್ಟೇ ನನ್ನ ಕೆಲಸ ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವಬೆದರಿಕೆ; ಪೊಲೀಸ್​ ಠಾಣೆಗೆ ದೂರು

ಸಾರ್ವಜನಿಕರಲ್ಲಿ ಅಡ್ಡಂಡ ಮನವಿ

ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಮಾರ್ಚ್ 2ರಂದು ಸಂಜೆ 6 ಗಂಟೆಗೆ ಟಿಪ್ಪು ನಿಜ ಕನಸುಗಳು ನಾಟಕ ನಾಟಕ ಪ್ರದರ್ಶನವಾಗುತ್ತಿದೆ. ಪ್ರತಿ ಟಿಕೆಟ್​ಗೆ 100ರೂ ನಿಗದಿ ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಅಡ್ಡಂಡ ಮನವಿ ಮಾಡಿದರು. ಇನ್ನು ಪುಸ್ತಕ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸುಮಾರು 12 ಆವ್ರತ್ತಿಗಳು ಮುದ್ರಣ ಆಗಿದೆ. 40 ಸಾವಿರ ಪ್ರತಿಗಳು ಮಾರಾಟ ಆಗಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಪ್ರತಿಗಳು ಮಾರಾಟವಾಗಿರುವುದು ಚಾರಿತ್ರಿಕ ದಾಖಲೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ