ಖಾತೆ ಬಗ್ಗೆ ಮುಂದುವರಿದ ಆನಂದ್ ಸಿಂಗ್ ಅಸಮಾಧಾನ; ದೆಹಲಿಗೆ ತೆರಳಿರುವ ಸಾಧ್ಯತೆ

ಆಗಸ್ಟ್ 15ರ ಬಳಿಕ ಆನಂದ್ ಸಿಂಗ್ ದೆಹಲಿಗೆ ತೆರಳುತ್ತಾರೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದರಂತೆ ಇದೀಗ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಖಾತೆ ಬಗ್ಗೆ ಮುಂದುವರಿದ ಆನಂದ್ ಸಿಂಗ್ ಅಸಮಾಧಾನ; ದೆಹಲಿಗೆ ತೆರಳಿರುವ ಸಾಧ್ಯತೆ
ಆನಂದ್ ಸಿಂಗ್
Updated By: sandhya thejappa

Updated on: Aug 18, 2021 | 8:55 AM

ಬಳ್ಳಾರಿ: ಖಾತೆ ಬದಲಾವಣೆಗೆ ಬಿಗಿ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್​ಗೆ (Anand Singh) ಖಾತೆ ಬಗ್ಗೆ ಅಸಮಾಧಾನ ಮುಂದುವರಿದಿದೆ. ಬೆಂಗಳೂರಿಗೂ ಬಾರದ ಪ್ರವಾಸೋದ್ಯಮ ಸಚಿವ, ಖಾತೆ ಹಂಚಿಕೆ ಬಳಿಕ ವಿಧಾನಸೌಧಕ್ಕೂ ಬಂದಿಲ್ಲ. ವಿಕಾಸಸೌಧದ ಸಚಿವರ ಕೊಠಡಿಗೆ ನಿನ್ನೆ (ಆಗಸ್ಟ್ 17) ಸಿಬ್ಬಂದಿ ನಾಮಫಲಕ ಅಳವಡಿಸಿದ್ದರು. ನಿನ್ನೆ ಯಲ್ಲಾಪುರಕ್ಕೆ ತೆರಳಿದ್ದ ಸಚಿವರು ಯಲ್ಲಾಪುರದಿಂದ ಗೋವಾಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಗೋವಾದಿಂದ ದೆಹಲಿಗೆ ತೆರಳಿರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಆಗಸ್ಟ್ 15ರ ಬಳಿಕ ಆನಂದ್ ಸಿಂಗ್ ದೆಹಲಿಗೆ ತೆರಳುತ್ತಾರೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದರಂತೆ ಇದೀಗ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸಚಿವರು ದೆಹಲಿಗೆ ಭೇಟಿ ನೀಡಿದ್ದರೆ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಸರ್ಕಾರಿ ಕಾರು ಬಳಸದ ಆನಂದ್ ಸಿಂಗ್
ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿರುವ ಸಚಿವ ಆನಂದ್ ಸಿಂಗ್(Anand Singh) ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆನಂದ್ ಸಿಂಗ್ ತಮ್ಮ ಮುಂದಿನ ನಡೆ ಏನೂ ಅನ್ನೋ ಬಗ್ಗೆ ಇದುವರೆಗೆ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಇನ್ನೂ ಕೇಳಿದ ಖಾತೆ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಆನಂದ್ ಸಿಂಗ್, ಆಗಸ್ 16ರಿಂದ ಸರ್ಕಾರಿ ಕಾರು ಬಳಸುತ್ತಿಲ್ಲ. ಸ್ವಂತ ಕಾರಿನಲ್ಲಿ ಓಡಾಡುತ್ತಿದ್ದಾರೆ. ಪೊಲೀಸ್ ಎಸ್ಕಾರ್ಟ್ ಕೂಡ ಇಲ್ಲದೆ ಪ್ರಯಾಣ ಬೆಳೆಸಿದ್ದಾರೆ.

ಖಾತೆ ಬದಲಾಗದಿದ್ರೆ ರಾಜೀನಾಮೆ ಗ್ಯಾರಂಟಿನಾ?
ಸಿಎಂ ಸೂಚನೆಗಾಗಿ, ಶುಭ ಸಂದೇಶಕ್ಕಾಗಿ ಆನಂದ್ ಸಿಂಗ್ ಕಾಯುತ್ತಿದ್ದಾರೆ. ಇವತ್ತು ಬರುತ್ತೇ ನಾಳೆ ಬರುತ್ತೆ ಅಂತಾ ತುದಿಗಾಲಲ್ಲಿ ನಿಂತಿದ್ದಾರೆ. ಸಿಎಂ ಕೊಟ್ಟ ಭರವಸೆ ಈಡೇರಿಸ್ತಾರೆ ಅನ್ನೋ ವಿಶ್ವಾಸದಲ್ಲಿರೋ ಆನಂದ್ ಸಿಂಗ್ ನಿನ್ನೆ ಒಂದು ದಿನ ಕಾದು ನೋಡೋ ತಂತ್ರಕ್ಕೆ ಮೊರೆ ಹೋಗಿದ್ರು. ಹೀಗಿದ್ರೂ ಸೈಲೆಂಟ್ ಆಗಿಯೇ ತಮ್ಮ ಮುಂದಿನ ನಿರ್ಧಾರ ಪ್ರಕಟಿಸೋಕೆ ಪ್ಲ್ಯಾನ್ ಮಾಡ್ತಿದ್ದಾರಂತೆ. ಆಪ್ತರಿಗೆ ಹೇಳಿರೋ ಪ್ರಕಾರ ಖಾತೆ ಬದಲಾವಣೆ ಆಗದಿದ್ರೆ, ರಾಜೀನಾಮೆ ನೀಡೋದು ಪಕ್ಕಾ ಎನ್ನಲಾಗುತ್ತಿದೆ.

ಇದನ್ನೂ ಓದಿ

ರಾಹುಲ್ ಗಾಂಧಿ ನನ್ನ ಮಗ: ಹೆಮ್ಮೆಯಿಂದ ಸಿಹಿ ಕೊಟ್ಟು ಕೈ ಕುಲುಕಿದ ವಯನಾಡ್​ ಮಹಿಳೆ

ಅಪರಾಧ ಸುದ್ದಿಗಳು: ಚಿತ್ರದುರ್ಗದಲ್ಲಿ ಗುಂಡು ಹಾರಿಸಿ ಬಟ್ಟೆ ವ್ಯಾಪಾರಿಯ ಹತ್ಯೆ; ದರೋಡೆಗೆ ಹೊಂಚುಹಾಕಿ ಕುಳಿತಿದ್ದ ಆರೋಪದಡಿ ಕೋಲಾರದಲ್ಲಿ ಇಬ್ಬರ ಬಂಧನ

(Anand Singh is upset about the minister post and more likely that he moved to Delhi)