ದೆಹಲಿ: ಕಳೆದ ವಾರ ಬಿಜೆಪಿಗೆ (BJP) ಸೇರ್ಪಡೆಗೊಂಡ ಕೇರಳದ ಮಾಜಿ ಕಾಂಗ್ರೆಸ್ ನಾಯಕ ಅನಿಲ್ ಆಂಟನಿ (Anil Antony) ಇಂದು ಟ್ವಿಟರ್‌ನಲ್ಲಿ (Twitter) ತನ್ನನ್ನು ಅನ್‌ಫಾಲೋ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕೇಳಿದ್ದಕ್ಕಾಗಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಕೇರಳ ಘಟಕದ ಅವನತಿಗೆ ಒಂದು ಕಾರಣವೆಂದರೆ ಅದು ವಾಸ್ತವಗಳಿಂದ ದೂರವಿದೆ ಎಂದಿದ್ದಾರೆ ಅನಿಲ್ ಆಂಟನಿ.ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜನರು ಯೋಜನೆ ಮತ್ತು ಮಾಹಿತಿಯ ಆಧಾರದ ಮೇಲೆ ತಿಳುವಳಿಕೆಯುಳ್ಳ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಜನರು ಟ್ವಿಟರ್‌ನಲ್ಲಿದ್ದಾರೆ ಎಂದು ಅನಿಲ್ ಆಂಟನಿ ಹೇಳಿದ್ದಾರೆ.
ಜನರು ಸಾಮಾನ್ಯವಾಗಿ ಟ್ವಿಟ್ಟರ್‌ನಲ್ಲಿ ನಿಲುವು ನೋಡುತ್ತಾರೆ, ವಿಭಿನ್ನ ಜನರು ಏನನ್ನು ಯೋಚಿಸುತ್ತಾರೆ ಎಂಬುದರ ಕುರಿತು ಕೆಲವು ಕಲ್ಪನೆ ಮತ್ತು ಮಾಹಿತಿಯನ್ನು ಪಡೆಯಲು ನೋಡುತ್ತಾರೆ. ಇದು ತಿಳುವಳಿಕೆಯುಳ್ಳ ಅಭಿಪ್ರಾಯಗಳನ್ನು ಮಾಡಲು ಸಹಾಯ ಮಾಡುತ್ತದೆ. ನೀವು ವಿಭಿನ್ನ ನಿಲುವು ಹೊಂದಿರುವ ವ್ಯಕ್ತಿಗಳನ್ನು ಫಾಲೋ ಮಾಡದಿದ್ದಾಗ ಮತ್ತು ಒಂದೇ ರೀತಿಯ ನಿಲುವು ಹೊಂದಿರುವವರನ್ನು ಮಾತ್ರ ಫಾಲೋ ಮಾಡುತ್ತಿದ್ದರೆ ವಾಸ್ತವ ಸ್ಥಿತಿಯಿಂದ ದೂರವಾಗಿರುವ ಪ್ರತಿಧ್ವನಿ ತುಂಬಿದ ಚೇಬಂರ್ನಂತೆ ಅದಾಗುತ್ತದೆ. ಕೇರಳದ ಕಾಂಗ್ರೆಸ್ ಈಗ ಏನಾಗಿದೆಯೇ ಎಂಬುದಕ್ಕೆ ಇದೂ ಮುಖ್ಯ ಕಾರಣಗಳಲ್ಲಿ ಒಂದು ಎಂದು ಅನಿಲ್ ಆಂಟನಿ ಹೇಳಿದ್ದಾರೆ. ಕೇರಳದ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಟಿ ಸಿದ್ದಿಕ್ ಅವರು ಅನಿಲ್ ಆಂಟನಿ ಅವರನ್ನು ಅನ್ ಫಾಲೋ ಮಾಡಿ ಎಂದು ಪಕ್ಷದ ಕಾರ್ಯಕರ್ತರಲ್ಲಿ ಹೇಳಿರುವ ಟ್ವೀಟ್‌ಗೆ ಪ್ರತಿಕ್ರಿಯಿಸುವಾಗ ಅನಿಲ್ ಈ ರೀತಿ ಉತ್ತರಿಸಿದ್ದಾರೆ.
ಕಾಂಗ್ರೆಸ್‌ನ ವಿವಿಧ ಸಾಮಾಜಿಕ ಉಪಕ್ರಮಗಳು ಮತ್ತು ಡಿಜಿಟಲ್ ಪ್ರಚಾರಗಳೊಂದಿಗೆ ಸಂಬಂಧ ಹೊಂದಿದ್ದ ಅನಿಲ್ ಆಂಟನಿ ಕಳೆದ ವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು ತಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು. 2002 ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯ ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ ವಿವಾದದ ನಂತರ ಅನಿಲ್ ಆಂಟನಿ ಜನವರಿಯಲ್ಲಿ ಕಾಂಗ್ರೆಸ್ ತೊರೆದಿದ್ದರು.
ಇದನ್ನೂ ಓದಿ: ಏಪ್ರಿಲ್ 14ರಂದು ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ತಾವು ಕುಟುಂಬಕ್ಕಾಗಿ ದುಡಿಯುತ್ತಿದ್ದೇವೆ ಎಂದು ನಂಬುತ್ತಾರೆ. ಆದರೆ ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ನಾನು ನಂಬುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ ಇರಿಸುವ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ಸುದ್ದಿಗಾರರಲ್ಲಿ ಮಾತನಾಡಿದ ಅನಿಲ್ ಹೇಳಿದ್ದಾರೆ. ಅನಿಲ್ ಆಂಟನಿ ಬಿಜೆಪಿ ಸೇರಿದಾಗ ಅವರ ತಂದೆ ಮತ್ತು ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಮಗನ ನಿರ್ಧಾರ ತಪ್ಪು, ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ