ಆಟೋ ಚಾಲಕನ ಮನೆಗೆ ಆಟೋದಲ್ಲಿ ಹೊರಟ ದೆಹಲಿ ಸಿಎಂನ್ನು ತಡೆದ ಪೊಲೀಸ್; ನನಗೆ ನಿಮ್ಮ ಭದ್ರತೆ ಬೇಡ ಎಂದ ಕೇಜ್ರಿವಾಲ್

| Updated By: ರಶ್ಮಿ ಕಲ್ಲಕಟ್ಟ

Updated on: Sep 12, 2022 | 9:34 PM

Arvind Kejriwal ಮುಂಬರುವ ವಿಧಾನಸಭಾ ಚುನಾವಣೆಯ ಎಎಪಿಯ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

ಆಟೋ ಚಾಲಕನ ಮನೆಗೆ ಆಟೋದಲ್ಲಿ ಹೊರಟ ದೆಹಲಿ ಸಿಎಂನ್ನು ತಡೆದ ಪೊಲೀಸ್; ನನಗೆ ನಿಮ್ಮ ಭದ್ರತೆ ಬೇಡ ಎಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ಅಹಮದಾಬಾದ್: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಇಂದು ಅಹಮದಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕನ ಮನೆಗೆ ಭೇಟಿ ನೀಡುವುದನ್ನು ಪೊಲೀಸರು ತಡೆದಿದ್ದಾರೆ. ಭದ್ರತೆಯ ಕಾರಣಗಳನ್ನು ಉಲ್ಲೇಖಿಸಿ, ಗುಜರಾತ್ ಪೊಲೀಸರು ಭೋಜನಕ್ಕೆ ಚಾಲಕನ ಮನೆಗೆ ಭೇಟಿ ನೀಡದಂತೆ ಕೇಜ್ರಿವಾಲ್ ಅವರಲ್ಲಿ ಕೇಳಿಕೊಂಡರು.  ಇಂದು ಎಎಪಿ ನಾಯಕ ಕೇಜ್ರಿವಾಲ್ ಔತಣಕೂಟಕ್ಕೆ ಮನೆಗೆ ಬರಬೇಕು ಎಂದು ಆಮಂತ್ರಿಸಿದ ಆಟೋರಿಕ್ಷಾ ಚಾಲಕನ ಆಹ್ವಾನವನ್ನು ಸ್ವೀಕರಿಸಿದ್ದರು. ಇದರಂತೆ ಇಂದು (ಸೋಮವಾರ) ರಾತ್ರಿ 7.30ರ ಸುಮಾರಿಗೆ ಹೊಟೇಲ್‌ನಿಂದ ಹೊರಟು ಮತ್ತೊಂದು ಆಟೋದಲ್ಲಿ ರಿಕ್ಷಾ ಚಾಲಕನ ಮನೆ ತಲುಪಲು ಯೋಜಿಸಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯ ಎಎಪಿಯ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಈ ಸಂವಾದದ ನಂತರ ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಮ್ ದಾಂತನಿ ಎಂಬ ಆಟೋರಿಕ್ಷಾ ಚಾಲಕ ಕೇಜ್ರಿವಾಲ್ ಅವರಲ್ಲಿ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದರು.

ದಾಂತನಿ ಆಮಂತ್ರಣ ಸ್ವೀಕರಿಸಿ ಅವರ ಮನೆಗೆ ಆಟೋದಲ್ಲಿ ಹೊರಟ ಕೇಜ್ರಿವಾಲ್  ಅವರನ್ನು ಗುಜರಾತ್ ಪೊಲೀಸರು ತಡೆದಿದ್ದಾರೆ. ಈ  ವೇಳೆ ಪೊಲೀಸ್ ಜತೆ ವಾಗ್ವಾದ ಮಾಡಿದ ಕೇಜ್ರಿವಾಲ್, ನನಗೆ ನಿಮ್ಮ ಭದ್ರತೆ ಬೇಡ, ನಾನು ಜನ ಸಾಮಾನ್ಯ ಎಂದಿದ್ದಾರೆ. ಆದರೂ ಪೊಲೀಸರು ರಾಜ್ಯ ಸರ್ಕಾರದ ಆದೇಶ ಇದೆ ಸರ್ ,ನಿಮಗೆ ಭದ್ರತೆ ನೀಡಬೇಕು ಎಂಬುದು ಎಂದಾಗ, ನಾನು ನಿಮಗೆ ಬರೆದುಕೊಟ್ಟಿದ್ದೆ ನನಗೆ ಭದ್ರತೆ ಬೇಡ ಎಂದು. ಈ ಭದ್ರತೆಯನ್ನು ನಿಮ್ಮ ಸಚಿವರಿಗೆ ನೀಡಿ. ನಾನು ಜನರ ಬಳಿ  ಹೋಗುತ್ತಿದ್ದೇನೆ. ನನ್ನನ್ನು ತಡೆಯಬೇಡಿ. ನನಗೆ ಭದ್ರತೆ ನೀಡಬೇಕೆಂದು ನೀವೇಕೆ ಬಲವಂತ ಮಾಡುತ್ತಿದ್ದೀರಿ? ನೀವು ನನ್ನನ್ನು ಬಂಧಿಸುವಂತಿಲ್ಲ ಎಂದಿದ್ದಾರೆ.


“ನಾನು ನಿಮ್ಮ ಅಭಿಮಾನಿ. ಸೋಶಿಯಲ್ ಮೀಡಿಯಾದಲ್ಲಿ ನಾನು ನೋಡಿದ ವಿಡಿಯೊದಲ್ಲಿ, ನೀವು ಪಂಜಾಬ್‌ನ ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ಹೋಗಿದ್ದೀರಿ. ಹಾಗಾದರೆ, ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ?” ಎಂದು ದಾಂತನಿ ಕೇಳಿದ್ದು, ಆಮಂತ್ರಣಕ್ಕೆ ದಿಲ್ಲಿ ಮುಖ್ಯಮಂತ್ರಿ ತಕ್ಷಣವೇ ಸಕಾರಾತ್ಮಕವಾಗಿ ಉತ್ತರಿಸಿದರು.
“ಪಂಜಾಬ್ ಮತ್ತು ಗುಜರಾತ್‌ನ ಆಟೋವಾಲಾಗಳು ನನ್ನನ್ನು ಪ್ರೀತಿಸುತ್ತಾರೆ. ನಾನು ಇಂದು ಸಂಜೆ ಬರಬೇಕೇ? ರಾತ್ರಿ 8 ಗಂಟೆಗೆ ಎಂದು ಕೇಜ್ರಿವಾಲ್ ಹೇಳಿದಾಗ ದಾಂತನಿ ಹೂಂ ಅಂದಿದ್ದರು.

Published On - 9:26 pm, Mon, 12 September 22