ರಾಜ ರಾಜೇಂದ್ರ ಚೋಳನ ಕಾಲದಲ್ಲಿ ತಮಿಳುನಾಡು ಕೂಡ ಇರಲಿಲ್ಲ: ಬಿ.ಎಲ್.ಸಂತೋಷ್

| Updated By: Rakesh Nayak Manchi

Updated on: Oct 10, 2022 | 7:13 AM

ರಾಜ ರಾಜೇಂದ್ರ ಚೋಳನ ಕಾಲದಲ್ಲಿ ತಮಿಳುನಾಡು ಕೂಡ ಇರಲಿಲ್ಲ. ಚೋಳ, ಪಾಂಡ್ಯ, ಪಲ್ಲವರ ಸಾಮ್ರಾಜ್ಯ ಇತ್ತು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಮಲ್ ಹಾಸನ್ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜ ರಾಜೇಂದ್ರ ಚೋಳನ ಕಾಲದಲ್ಲಿ ತಮಿಳುನಾಡು ಕೂಡ ಇರಲಿಲ್ಲ: ಬಿ.ಎಲ್.ಸಂತೋಷ್
ಬಿ.ಎಲ್.ಸಂತೋಷ್ ಮತ್ತು ಕಮಲ್ ಹಾಸನ್
Follow us on

ಗದಗ: ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಎಂಬ ಕಮಲ್ ಹಾಸನ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಕೇಸರಿ ಪಕ್ಷ ಕೆರಳಿ ಕೆಂಡವಾಗಿದೆ. ರಾಜ ರಾಜೇಂದ್ರ ಚೋಳನ ಕಾಲದಲ್ಲಿ ತಮಿಳುನಾಡು ಕೂಡ ಇರಲಿಲ್ಲ. ಚೋಳ, ಪಾಂಡ್ಯ, ಪಲ್ಲವರ ಸಾಮ್ರಾಜ್ಯ ಇತ್ತು ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B.L.Santhosh) ಅವರು ಕಮಲ್ ಹಾಸನ್ (Kamal Haaasan) ಅವರಿಗೆ ತಿರುಗೇಟು ನೀಡಿದ್ದಾರೆ. ಗದಗದಲ್ಲಿರುವ ಸಾಹಿತ್ಯ ಭವನದಲ್ಲಿ ನಡೆದ ಜಯೋಸ್ತುತೇ ಸಾವಿರದ ಸಾವರ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಹೀಗೆ ಹೇಳತ್ತಾ ಪಾಪಿಗಳು ಆಗುತ್ತಾ ಹೋಗಿ. ಕಮಲ್ ಹಾಸನ್, ಸಿದ್ದರಾಮಯ್ಯರಿಂದ ದೇಶಕ್ಕೆ ಆಗುವ ಲಾಭವೇನಂದೆರೆ ಮಹಾನ್ ನಾಯಕರ ಬಗ್ಗೆ ಜನರು ಓದಿ ತಿಳಿದುಕೊಳ್ಳುವುದು ಎಂದರು.

ಬೃಹದೀಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದ ರಾಜ ರಾಜೇಂದ್ರ ಚೋಳ ಬಗ್ಗೆ ತಮಿಳುನಾಡಿನಲ್ಲಿ ಮೂರ್ಖರು ಚರ್ಚೆ ಎಬಿಸಿದ್ದಾರೆ. ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಆವಾಗ ಹಿಂದೂಗಳೇ ಇರಲಿಲ್ಲ ಅಂತಾ ಹೇಳುತ್ತಾರೆ. ರಾಜ ರಾಜೇಂದ್ರ ಚೋಳ ಕಾಲದಲ್ಲಿ ತಮಿಳುನಾಡಿನ ಕೂಡಾ ಇರಲಿಲ್ಲ. ಚೋಳ, ಪಾಂಡ್ಯ ಹಾಗೂ ಪಲವರ ಸಾಮ್ರಾಜ್ಯ ಇತ್ತು. ರಾಜ ರಾಜೇಂದ್ರಚೋಳ ಹೇಗೆ ದ್ರಾವಿಡರು ಆಗುತ್ತಾರೆ, ರಾಜ ರಾಜೇಂದ್ರ ಚೋಳ ದ್ರಾವಿಡ ಚಳುವಳಿ ಅಂತಾರೆ. ಆದರೆ ಅವರು ಬೃಹದೀಶ್ವರ ದೇವಾಲಯ, ವೇದಗಳ ಸಂಸ್ಕೃತಿ, ಸಂಗಮ ಕೃತಿಗಳ ಬಗ್ಗೆ ಬರಿಸಿದ್ದಾನೆ ಎಂದರು.

ಕಮಲ್ ಹಾಸನ್ ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಅಂತಾ ಹೇಳದೇ ಇದ್ದರೆ ಉತ್ತರ ಭಾರತದ ಜನರು ರಾಜ ರಾಜಚೋಳ ಯಾರು ಅಂತಾ ಓದುತ್ತಿರಲಿಲ್ಲ. ಕಮಲ್ ಹಾಸನ್ ಹಾಗೂ ಸಿದ್ದರಾಮಯ್ಯ ಅವರಿಂದ ದೇಶಕ್ಕೆ ಆಗುವ ದೊಡ್ಡ ಲಾಭ ಏನು ಅಂದರೆ ನಮ್ಮ ಕಾರ್ಯಕರ್ತರು ಗಣಪತಿ ಕೂರಿಸುವ ಪೆಂಡಾಲ್​ನಲ್ಲಿ ಸಾವರ್ಕರ್ ಪೋಟೋ ಕೂರಿಸುವುದು, ಫ್ಯಾನ್ಸಿ ಡ್ರೇಸ್ ಹಾಕುವ ತಾಯಿಯಂದಿರಿಗೆ ಬೇರೆ ಬೇರೆ ಡ್ರೇಸ್ ಹಾಕುವುದರ ಜೊತೆಗೆ ಸಾವರ್ಕರ್ ವೇಷನು ಹಾಕಬೇಕು ಅನಿಸುತ್ತದೆ. ಬಯಲು ವೇದಿಕೆಯವರಿಗೆ ಸಾವರ್ಕರ್ ಬಗ್ಗೆ ಕಾರ್ಯಕ್ರಮ ಮಾಡಬೇಕು ಅಂತಾ ಅನಿಸುತ್ತದೆ. ಹೀಗಾಗಿ ಕಮಲ್ ಹಾಸನ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳ ಸಹ ಹೇಳುತ್ತೇವೆ ಎಂದರು.

ನಿಮ್ಮ ಇಂತಹ ಹೇಳಿಕೆಯಿಂದ ನಮ್ಮ ಸಮಾಜ ಅನೇಕ ನಾಯಕರ ಬಗ್ಗೆ ಜನರು ತಿಳಿದುಕೊಳ್ಳಲು ಮುಂದಾಗುತ್ತಾರೆ. ಸಾವರ್ಕರ್ ರೀತಿ ಬದುಕಲು ಆಗಲ್ಲ ಎಂಬ ಕಾರಣಕ್ಕೆ ಅವರನ್ನು ವಿರೋಧಿಸಲಾಗುತ್ತದೆ. ಸಾವರ್ಕರ್ ನಡೆಸಿರುವ ಜೀವನ ಅಂತಹದ್ದಾಗಿದೆ. ಸಾವರ್ಕರ್ ಜೀವನದ ಬಗ್ಗೆ ಹೋಲಿಸಲು ಇವರ ಹತ್ತಿರ ಯಾವುದೇ ಗುಂಡಿಗೆ ಇಲ್ಲ. ಹಾಗಾಗಿ ಅವರ ಬಗ್ಗೆ ಸುಳ್ಳುಗಳನ್ನು ಹೇಳುತ್ತಾರೆ ಎಂದರು.
ಸಾವರ್ಕರ್ ಕ್ಷಮಾಪಣೆ ಕೇಳಿದರು ಎಂದು ಕರ್ನಾಟಕದಲ್ಲಿ ಹೇಳುತ್ತಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಬಂದು ಕ್ಷಮಾಪಣೆ ಕೇಳಿದರು ಎಂಬ ರೀತಿಯಲ್ಲಿ ಹೇಳುತ್ತಿದ್ದಾರೆ. ಏಕವಚನದ ಬ್ರಹ್ಮ, ಬಂಡತನ ಸರದಾರ, ದೇಶ ಭಕ್ತರ ಬಗ್ಗೆ ನಯಾ ಪೈ ಗೊತ್ತಿಲ್ಲದ ವ್ಯಕ್ತಿ ಇವತ್ತು ರಾಜ್ಯದಲ್ಲಿ ಸಾವರ್ಕರ್ ಬಗ್ಗೆ ಮಾತಾಡುತ್ತಾರೆ. ಸಾವರ್ಕರ್ ಬಗ್ಗೆ ಮಾತಾಡೋದು ಬಿಡಿ ಅವರ ಕಾಲು ಬುಡದ ಕೆಳಗೆ ಕೂರಲು ಯೋಗ್ಯತೆ ಇಲ್ಲ. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 am, Mon, 10 October 22