AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vetrimaaran: ‘ರಾಜ ರಾಜ ಚೋಳ ಹಿಂದೂ ಅಲ್ಲ’; ಖ್ಯಾತ ಡೈರೆಕ್ಟರ್​ ಹೇಳಿಕೆಯಿಂದ ವಿವಾದ; ಕಮಲ್​ ಹಾಸನ್​ ಬೆಂಬಲ

Raja Raja Cholan: ವೆಟ್ರಿಮಾರನ್​ ಅವರು ಹೀಗೆ ಹೇಳಿಕೆ ನೀಡಿದ್ದು, ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ. ಅವರ​ ಮಾತಿಗೆ ಎಚ್​. ರಾಜಾ ಹಾಗೂ ಕಮಲ್​ ಹಾಸನ್​ ಪ್ರತಿಕ್ರಿಯೆ ನೀಡಿದ್ದಾರೆ.

Vetrimaaran: ‘ರಾಜ ರಾಜ ಚೋಳ ಹಿಂದೂ ಅಲ್ಲ’; ಖ್ಯಾತ ಡೈರೆಕ್ಟರ್​ ಹೇಳಿಕೆಯಿಂದ ವಿವಾದ; ಕಮಲ್​ ಹಾಸನ್​ ಬೆಂಬಲ
ವೆಟ್ರಿಮಾರನ್, ಕಮಲ್ ಹಾಸನ್
TV9 Web
| Updated By: ಮದನ್​ ಕುಮಾರ್​|

Updated on: Oct 06, 2022 | 1:59 PM

Share

ತಮಿಳುನಾಡಿನ ಮೂಲ ಜನರ ಧಾರ್ಮಿಕ ಅಸ್ಮಿತೆಯ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. Tamils Are Not Hindu ಎಂಬ ವಾಕ್ಯ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಿದೆ. ಈ ಸಮಯದಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್​ (Vetrimaaran) ಅವರು ನೀಡಿರುವ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೇ ವೆಟ್ರಿಮಾರನ್​ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮುಖಂಡ ಎಚ್​​. ರಾಜಾ (H Raja) ಅವರು ಇದನ್ನು ಖಂಡಿಸಿದ್ದಾರೆ. ಆದರೆ ಕಮಲ್​ ಹಾಸನ್​ (Kamal Haasan) ಅವರು ವೆಟ್ರಿಮಾರನ್​ ಹೇಳಿಕೆಗೆ ಬೆಂಬಲ ನೀಡಿದ್ದಾರೆ.

‘ವಿಸಾರಣೈ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ವೆಟ್ರಿಮಾರನ್​ ಅವರು ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ, ಫಿಲ್ಮ್​ ಫೇರ್​ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ತಮಿಳು ಚಿತ್ರರಂಗದಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ. ಪ್ರತಿ ಸಿನಿಮಾದಲ್ಲೂ ಅವರು ವಿಶೇಷವಾದ ಕಥಾವಸ್ತುವನ್ನು ತೆರೆಗೆ ತರುತ್ತಾರೆ. ಈಗ ಅವರು ತಮ್ಮ ಹೇಳಿಕೆಯ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ.

‘ನಿರಂತರವಾಗಿ ನಮ್ಮ ಗುರುತುಗಳನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ವಳ್ಳುವರ್​ ಅವರನ್ನು ಕೇಸರಿಕರಣ ಮಾಡುವುದು ಹಾಗೂ ರಾಜ ರಾಜ ಚೋಳನನ್ನು ಹಿಂದೂ ಅಂತ ಕರೆಯುವುದು ನಡೆದೇ ಇದೆ’ ಎಂದು ವೆಟ್ರಿಮಾರನ್​ ಹೇಳಿದ್ದಾರೆ.

ಇದನ್ನೂ ಓದಿ
Image
Ponniyin Selvan: ಘಟಾನುಘಟಿಗಳ ‘ಪೊನ್ನಿಯಿನ್​ ಸೆಲ್ವನ್​’ ರಿಲೀಸ್​; ಹೇಗಿದೆ ಪ್ರೇಕ್ಷಕರ ಟ್ವಿಟರ್​ ವಿಮರ್ಶೆ?
Image
Aishwarya Rai: ವೇದಿಕೆ ಮೇಲೆ ಗುರು ಮಣಿರತ್ನಂ ಕಾಲಿಗೆ ನಮಸ್ಕಾರ ಮಾಡಿದ ಐಶ್ವರ್ಯಾ ರೈ​; ವಿಡಿಯೋ ವೈರಲ್​
Image
Ponniyin Selvan: 125 ಕೋಟಿ ರೂಪಾಯಿಗೆ ‘ಪೊನ್ನಿಯಿನ್​ ಸೆಲ್ವನ್​’ ಒಟಿಟಿ ಹಕ್ಕು ಮಾರಾಟ; ಮಣಿರತ್ನಂ ಚಿತ್ರಕ್ಕೆ ಭಾರಿ ಬಿಸ್ನೆಸ್​
Image
Ponniyin Selvan: ಮಣಿರತ್ನಂ ಚಿತ್ರದ ಆಫರ್​ ರಿಜೆಕ್ಟ್​ ಮಾಡಿದ್ದೇಕೆ ‘ಹೆಬ್ಬುಲಿ’ ನಟಿ ಅಮಲಾ ಪೌಲ್​?

ಸೆಪ್ಟೆಂಬರ್​ 30ರಂದು ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಚಿಯಾನ್​ ವಿಕ್ರಮ್​, ಐಶ್ವರ್ಯಾ ರೈ ಬಚ್ಚನ್​, ಜಯಂ ರವಿ, ಕಾರ್ತಿ ಮುಂತಾದವರು ನಟಿಸಿದ್ದಾರೆ. ಚೋಳರ ಇತಿಹಾಸವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಆ ಚಿತ್ರ ಬಿಡುಗಡೆ ಆದ ಬಳಿಕ ವೆಟ್ರಿಮಾರನ್​ ಅವರು ಹೀಗೆ ಹೇಳಿಕೆ ನೀಡಿದ್ದು, ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ.

ವೆಟ್ರಿಮಾರನ್​ ಮಾತಿಗೆ ಬಿಜೆಪಿಯ ಎಚ್​. ರಾಜಾ ಪ್ರತಿಕ್ರಿಯೆ ನೀಡಿದ್ದಾರೆ ‘ವೆಟ್ರಿಮಾರನ್​ ರೀತಿ ನಾನು ಇತಿಹಾಸವನ್ನು ಚೆನ್ನಾಗಿ ಬಲ್ಲವನಲ್ಲ. ಆದರೆ ರಾಜ ರಾಜ ಚೋಳ ನಿರ್ಮಿಸಿದ ಎರಡು ಮಸೀದಿ ಅಥವಾ ಚರ್ಚ್​ಗಳನ್ನು ಅವರು ತೋರಿಸಲಿ’ ಎಂದು ಎಚ್​. ರಾಜಾ ಹೇಳಿದ್ದಾರೆ.

ಈ ಚರ್ಚೆಯಲ್ಲಿ ನಟ ಕಮಲ್​ ಹಾಸನ್​ ಅವರ ಎಂಟ್ರಿ ಕೂಡ ಆಗಿದೆ. ವೆಟ್ರಿಮಾರನ್​ ಹೇಳಿಕೆಯನ್ನು ಕಮಲ್​ ಬೆಂಬಲಿಸಿದ್ದಾರೆ. ‘ರಾಜ ರಾಜ ಚೋಳನ ಕಾಲದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ. ಹಿಂದೂ ಅಂತ ಕರೆದಿದ್ದು ಬ್ರಿಟಿಷರು’ ಎಂದಿರುವ ಕಮಲ್​ ಹಾಸನ್​ ಅವರು, ‘8ನೇ ಶತಮಾನದಲ್ಲಿ ಹಲವು ಧರ್ಮಗಳು ಇದ್ದವು’ ಎಂದು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.