Ponniyin Selvan: ಘಟಾನುಘಟಿಗಳ ‘ಪೊನ್ನಿಯಿನ್ ಸೆಲ್ವನ್’ ರಿಲೀಸ್; ಹೇಗಿದೆ ಪ್ರೇಕ್ಷಕರ ಟ್ವಿಟರ್ ವಿಮರ್ಶೆ?
Ponniyin Selvan Twitter Review: ಕೆಲವರು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾವನ್ನು ‘ಬಾಹುಬಲಿ’ ಚಿತ್ರಕ್ಕೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಅದು ತಪ್ಪು ಎಂಬುದು ತಮಿಳು ಸಿನಿಪ್ರಿಯರ ಅಭಿಪ್ರಾಯ.
‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕಾಗಿ ಪ್ರೇಕ್ಷಕರು ಬಹುದಿನಗಳಿಂದ ಕಾಯುತ್ತಿದ್ದರು. ಮಣಿರತ್ನಂ (Mani Ratnam) ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಐತಿಹಾಸಿಕ ಕಥಾಹಂದರದ ಸಿನಿಮಾ ಎಂಬ ಕಾರಣಕ್ಕೆ ಸಿನಿಪ್ರಿಯರಿಗೆ ಈ ಚಿತ್ರದ ಮೇಲೆ ಹೆಚ್ಚು ಆಸಕ್ತಿ. ಅಷ್ಟೇ ಅಲ್ಲದೇ, ಇದು ಬಹುತಾರಾಗಣದ ಸಿನಿಮಾ ಕೂಡ ಹೌದು. ಹಾಗಾಗಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಷಾ ಕೃಷ್ಣನ್, ಕಾರ್ತಿ, ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan), ಪ್ರಕಾಶ್ ರಾಜ್ ಮುಂತಾದವರು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಸೆ.30) ಮೊದಲ ದಿನ ಮೊದಲ ಶೋ ನೋಡಿಬಂದ ಜನರು ಟ್ವಿಟರ್ ಮೂಲಕ ವಿಮರ್ಶೆ (Ponniyin Selvan Twitter Review) ತಿಳಿಸಿದ್ದಾರೆ. ಬಹುತೇಕ ಎಲ್ಲರಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಮೂಲಕ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ತಯಾರಾಗಿದೆ. ಕಲ್ಕಿ ಕೃಷ್ಣಮೂರ್ತಿ ಅವರು 1955ರಲ್ಲಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬಂದಿದೆ. ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಇದು ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
#PonniyinSelvan1 Extraordinary outcome of a magnificent mani !! . Purely class based which takes u back to the era of cholas. Certainly not for the “hero kicks d villan & he flies to Mars” fans club . No compromise in vfx & cinematography ? ARR #PS1review #PonniyinSelvanFDFS pic.twitter.com/r4GJm33CVl
— Navin (@India777Navin) September 30, 2022
WATCHED #PonniyinSelvan1 Magnum Opus of #ManiRatnam sir. couldn’t come out of the movie. Extremely good movie. CLIMAX TENSION BUILDS UP & SETS THE MOOD FOR PS2. SHIP UNDER STORM VFX IS FANTASTIC. ARR? Yes this is a hard core BLOCKBUSTER ??? 5/5 #PS1Review #MovieMeter? pic.twitter.com/YWlApzWE3M
— Movie Meter ? (@yourmoviemeter) September 30, 2022
Movie is awesome, very good screenplay all the actors done their role very mass.
Dear negativity spreading guys don’t spread your negativity bahubali is different and ps1 is different, ps1 it’s about our tamil kings.#PS1review movie gone rocks in history
— I love Trichy (@LoveTrichy) September 30, 2022
ತುಂಬ ಅದ್ದೂರಿಯಾಗಿ, ಹೈ ಬಜೆಟ್ನಲ್ಲಿ ‘ಪೊನ್ನಿಯಿನ್ ಸೆಲ್ವನ್’ ಚಿತ್ರವನ್ನು ಕಟ್ಟಿಕೊಡಲಾಗಿದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಗ್ರಾಫಿಕ್ಸ್, ಸಾಹಸ ಸನ್ನಿವೇಶ ಮುಂತಾದವುಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಎಲ್ಲ ಕಲಾವಿದರ ನಟನೆಯನ್ನೂ ಅಭಿಮಾನಿಗಳು ಹೊಗಳುತ್ತಿದ್ದಾರೆ.
ಇನ್ನೂ ಕೆಲವರು ಈ ಸಿನಿಮಾವನ್ನು ‘ಬಾಹುಬಲಿ’ ಚಿತ್ರಕ್ಕೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಅದು ತಪ್ಪು ಎಂಬುದು ತಮಿಳು ಸಿನಿಪ್ರಿಯರ ಅಭಿಪ್ರಾಯ. ಎರಡೂ ಸಿನಿಮಾಗಳು ಬೇರೆ ಬೇರೆ ರೀತಿ ಇವೆ. ಒಂದಕ್ಕೆ ಇನ್ನೊಂದನ್ನು ಹೋಲಿಸಬಾರದು ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.
#PonniyinSelvan Review:
For me, #Trisha, #Karthi & #ChiyaanVikram steal the show ?
Especially #Karthi, his one liners are so good ?#TrishaKrishnan with her beauty & performance shines ?#ChiyaanVikram was ???#PonniyinSelvan1 #PonniyinSelvanReview #PS1review #PS1 pic.twitter.com/a4ZIxICTXF
— Kumar Swayam (@KumarSwayam3) September 30, 2022
History created by legends with a big bunch of great talents! It’s inevitably a Mega blockbuster?
Tamil audience around the globe should feel proud & experience this epic in theatres?
Standing ovation & take a bow to each & everyone involved in making this historical event? pic.twitter.com/2uYJyk34BO
— Vignesh Shivan (@VigneshShivN) September 29, 2022
ಬಿಡುಗಡೆಗೂ ಮುನ್ನವೇ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಲಾಭದಲ್ಲಿತ್ತು. ಯಾಕೆಂದರೆ ಈ ಚಿತ್ರದ ಒಟಿಟಿ ಹಕ್ಕುಗಳು ಬಹುಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂಬ ಮಾತು ಕೇಳಿಬಂದಿದೆ. ಮಣಿರತ್ನಂ ಅವರ ನಿರ್ದೇಶನಕ್ಕೆ ಫ್ಯಾನ್ಸ್ ಭೇಷ್ ಎನ್ನುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.