ಬ್ಯಾಕ್ ಟು ಬ್ಯಾಕ್ ವಿಕೆಟ್; ಎಸ್‌ಆರ್‌ಹೆಚ್ ದಾಂಡಿಗರ ಅಬ್ಬರಕ್ಕೆ ಬ್ರೇಕ್ ಹಾಕಿದ ಲಾರ್ಡ್ ಶಾರ್ದೂಲ್
IPL 2025: ಲಕ್ನೋ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರನ್ನು ಶಾರ್ದೂಲ್ ಠಾಕೂರ್ ಅವರು ತ್ವರಿತವಾಗಿ ಔಟ್ ಮಾಡಿದರು. ಅಭಿಷೇಕ್ ಕೇವಲ 8 ರನ್‌ಗಳಿಗೆ ಔಟ್ ಆದರೆ, ಇಶಾನ್ ಕಿಶನ್ ಮೊದಲ ಎಸೆತದಲ್ಲೇ ಪೆವಿಲಿಯನ್ ಸೇರಿದರು. ಈ ವಿಕೆಟ್‌ಗಳಿಂದ ಹೈದರಾಬಾದ್‌ನ ಪವರ್‌ಪ್ಲೇ ಸ್ಕೋರ್ ನಿಧಾನಗೊಂಡಿತು. ಠಾಕೂರ್ ಅವರ ಅದ್ಭುತ ಬೌಲಿಂಗ್ ಹೈದರಾಬಾದ್ ತಂಡದ ಬ್ಯಾಟಿಂಗ್‌ಗೆ ದೊಡ್ಡ ಹೊಡೆತ ನೀಡಿತು.

ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ರನ್ ಶಿಖರ ಕಟ್ಟುವ ಉದ್ದೇಶದೊಂದಿಗೆ ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದ ಸನ್‌ರೈಸರ್ಸ್ ಹೈದರಾಬಾದ್ ಲೆಕ್ಕಾಚಾರವನ್ನು ವೇಗಿ ಶಾರ್ದೂಲ್ ಠಾಕೂರ್ (Shardul Thakur) ಬುಡಮೇಲು ಮಾಡಿದ್ದಾರೆ. ಐಪಿಎಲ್‌ನಲ್ಲಿ (IPL) ಸಿಕ್ಸರ್ ಬಾರಿಸುವುದಕ್ಕೆ ಹೆಸರುವಾಸಿಯಾಗಿರುವ ಅಭಿಷೇಕ್ ಶರ್ಮಾ (Abhishek Sharma) ಕೇವಲ 8 ಎಸೆತಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಆ ನಂತರ ಬಂದ ಇಶಾನ್ ಕಿಶನ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಠಾಕೂರ್ ಹೇಗೆ ಪೆವಿಲಿಯನ್‌ಗೆ ದಾರಿ ತೋರಿಸಿದರು ಎಂಬುದನ್ನು ನಾವು ನಿಮಗೆ ಹೇಳೋಣ.
ಶಾರ್ದೂಲ್ ಠಾಕೂರ್ ಅದ್ಭುತ ಪ್ರದರ್ಶನ
ಶಾರ್ದೂಲ್ ಠಾಕೂರ್ ಅವರ ಎಸೆದ ಮೂರನೇ ಓವರ್ನ ಮೊದಲ ಎಸೆತದಲ್ಲಿ ಅಭಿಷೇಕ್ ಶರ್ಮಾ, ನಿಕೋಲಸ್ ಪೂರನ್ಗೆ ಕ್ಯಾಚಿತ್ತು ಔಟ್ ಆದರು. ಶಾರ್ದೂಲ್ ಎಸೆದ ಶಾರ್ಟ್ ಬಾಲ್ ಅನ್ನು ಅಭಿಷೇಕ್ ಶರ್ಮಾ ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಆಡಿದರು. ಆದರೆ ಅಲ್ಲೆ ನಿಂತಿದ್ದ ಪೂರನ್ ಸುಲಭವಾದ ಕ್ಯಾಚ್ ಪಡೆದರು.
SHARDUL STRIKES! 🔥
The dangerous #AbhishekSharma falls into the trap as he gets caught at fine leg off #ShardulThakur’s clever delivery!
Watch LIVE action: https://t.co/f9h0ie1eiG #IPLonJioStar 👉 #SRHvLSG | LIVE NOW on Star Sports 1, Star Sports 1 Hindi & JioHotstar! pic.twitter.com/hx4H3wO2EN
— Star Sports (@StarSportsIndia) March 27, 2025
ಶೂನ್ಯಕ್ಕೆ ಇಶಾನ್ ಕಿಶನ್ ಔಟ್
ಅಭಿಷೇಕ್ ನಂತರ ಬಂದ ಇಶಾನ್ ಕಿಶನ್ಗೂ ಶಾರ್ದೂಲ್ ಠಾಕೂರ್ ಪೆವಿಲಿಯನ್ ಹಾದಿ ತೋರಿಸಿದರು. ಶಾರ್ದೂಲ್ ಎಸೆದ ಮೊದಲ ಎಸೆತದಲ್ಲೇ ಕಿಶನ್ ಔಟಾದರು. ಇಶಾನ್ ಕಿಶನ್ ಶಾರ್ದೂಲ್ ಠಾಕೂರ್ ಅವರ ಚೆಂಡನ್ನು ಲೆಗ್ ಸೈಡ್ ಹೊರಗೆ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಕಿಶನ್ ಬ್ಯಾಟ್ನ ಅಂಚಿಗೆ ತಾಗಿ ನೇರವಾಗಿ ವಿಕೆಟ್ ಕೀಪರ್ ಪಂತ್ ಅವರ ಕೈಗೆ ಹೋಯಿತು. ಪರಿಣಾಮವಾಗಿ, ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಇಶಾನ್ ಕಿಶನ್ ಮೊದಲ ಎಸೆತದಲ್ಲೇ ಔಟಾದರು.
SRH vs LSG Live Score, IPL 2025: ಅಪಾಯಕಾರಿ ಹೆಡ್ ಔಟ್
ಪವರ್‌ಪ್ಲೇನಲ್ಲಿ ಪವರ್ ಕಾಣಲಿಲ್ಲ
ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್ನಿಂದಾಗಿ ಹೈದರಾಬಾದ್ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಬಿದ್ದಿದೆ. ಪವರ್ ಪ್ಲೇನಲ್ಲಿ ಹೈದರಾಬಾದ್ ತಂಡ ಕೇವಲ 62 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ರನ್‌ಗಳು ಕೂಡ ಸಾಕಷ್ಟು ಉತ್ತಮವಾಗಿದ್ದರೂ, ಹೈದರಾಬಾದ್ ತಂಡದ ಅಬ್ಬರಕ್ಕೆ ಇದು ಸರಿಸಾಟಿಯಾಗಿಲ್ಲ. ಹೈದರಾಬಾದ್ ತಂಡದ 62 ರನ್ ಗಳ ಪವರ್ ಪ್ಲೇನಲ್ಲಿ ಟ್ರಾವಿಸ್ ಹೆಡ್ ಒಬ್ಬರೇ 42 ರನ್ ಗಳಿಸಿದರು. ಒಟ್ಟಾರೆಯಾಗಿ, ಲಕ್ನೋ ತಂಡವು ಹೈದರಾಬಾದ್ ತಂಡದ ಬಿರುಗಾಳಿಯ ಬ್ಯಾಟಿಂಗ್ ಅನ್ನು ಸ್ವಲ್ಪ ಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Thu, 27 March 25