ನಜಾಫ್‌ಗಢದ ‘ರಾಜಕುಮಾರನ’ ಮುಂದೆ ತಲೆಬಾಗಿದ ಹೆಡ್; ವಿಡಿಯೋ ನೋಡಿ
IPL 2025: ಲಕ್ನೋ ಸೂಪರ್‌ಜೈಂಟ್ಸ್ ತಂಡದ ವೇಗಿ ಪ್ರಿನ್ಸ್ ಯಾದವ್ ಹೈದರಾಬಾದ್ನ ಅಪಾಯಕಾರಿ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿ ಲಕ್ನೋ ತಂಡ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಈ ಬಲಗೈ ವೇಗದ ಬೌಲರ್ ಟ್ರಾವಿಸ್ ಹೆಡ್ ಅವರನ್ನು 47 ರನ್‌ಗಳಿಗೆ ಕ್ಲೀನ್ ಬೌಲ್ಡ್ ಮಾಡಿದರು.
ಪ್ರಿನ್ಸ್ ಯಾದವ್… ಹೈದರಾಬಾದ್ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ಈ ಲಕ್ನೋ ಬೌಲರ್ ಹೆಸರು ಹೆಚ್ಚಾಗಿ ಯಾರಿಗು ತಿಳಿದರಲಿಲ್ಲ. ಆದರೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಪಾಯಕಾರಿ ಟ್ರಾವಿಸ್ ಹೆಡ್ರನ್ನು ಕ್ಲೀನ್ ಬೌಲ್ಡ್ ಮಾಡಿದ ಪ್ರಿನ್ಸ್ ಯಾದವ್ಗೆ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಈ ಪಂದ್ಯದಲ್ಲಿ 3 ಸಿಕ್ಸರ್, 5 ಬೌಂಡರಿಗಳ ಸಹಾಯದಿಂದ 47 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಹೆಡ್ರನ್ನು ಪ್ರಿನ್ಸ್ ಪೆವಿಲಿಯನ್ಗಟ್ಟಿದರು.
Published on: Mar 27, 2025 09:04 PM