AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸಿಎಸ್​ಕೆ ವಿರುದ್ಧ ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್ 11? 2 ಬದಲಾವಣೆ ಸಾಧ್ಯತೆ

RCB vs CSK Predicted Playing XI: ಐಪಿಎಲ್ 2025ರ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಚೆಪಾಕ್ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದೆ. ಆರ್‌ಸಿಬಿ ತಮ್ಮ ಪ್ಲೇಯಿಂಗ್ 11ರಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ, ಜೇಕಬ್ ಬೆಥಲ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಸೇರ್ಪಡೆ ಮಾಡಬಹುದು.

IPL 2025: ಸಿಎಸ್​ಕೆ ವಿರುದ್ಧ ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್ 11? 2 ಬದಲಾವಣೆ ಸಾಧ್ಯತೆ
Rcb Vs Csk
ಪೃಥ್ವಿಶಂಕರ
|

Updated on: Mar 27, 2025 | 10:04 PM

Share

ಐಪಿಎಲ್ 2025 ರ (IPL 2025) 8ನೇ ಪಂದ್ಯ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ನಡುವೆ ನಡೆಯಲಿದೆ. ಈ ಸೀಸನ್‌ನಲ್ಲಿ ಎರಡೂ ತಂಡಗಳು ಮೊದಲ ಪಂದ್ಯವನ್ನು ಗೆದ್ದಿರುವ ಕಾರಣ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಚೆಪಾಕ್‌ನಲ್ಲಿ ತನ್ನ 17 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಲು ಪ್ರಯತ್ನಿಸಲಿದೆ. ಹೀಗಾಗಿ ಆರ್​ಸಿಬಿ ಚೆಪಾಕ್​ ಪಿಚ್​ಗೆ ಸರಿಹೊಂದುವಂತ ಪ್ಲೇಯಿಂಗ್ 11 ಕಟ್ಟಿಕೊಂಡು ಕಣಕ್ಕಿಳಿಯಬೇಕಿದೆ. ಆ ಪ್ರಕಾರ ನೋಡುವುದಾದರೆ.. ಆರ್​ಸಿಬಿ ತಂಡದಲ್ಲಿ 2 ಬದಲಾವಣೆಯಾಗುವ ಸಾಧ್ಯತೆಗಳಿವೆ.

ಆರ್​​ಸಿಬಿ ತಂಡದಲ್ಲಿ 2 ಬದಲಾವಣೆ

ಆರ್​ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣುವ ಲಕ್ಷಣಗಳಿಲ್ಲ. ಏಕೆಂದರೆ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿತ್ತು. ಪಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದ್ದರು. ಆ ಬಳಿಕ ಬಂದಿದ್ದ ದೇವದತ್ ಪಡಿಕ್ಕಲ್ ವಿಫಲರಾದರಾದರೂ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಕೆಳಕ್ರಮಾಂಕದಲ್ಲಿ ಟಿಮ್ ಡೇವಿಡ್ ಬದಲಿಗೆ ಜೇಕಬ್ ಬೆಥಲ್ ಆಡುವ ಸಾಧ್ಯತೆಗಳಿವೆ. ಏಕೆಂದರೆ ಸಿಎಸ್​ಕೆ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಕಾರಣ ಬೆಥಲ್​ರನ್ನು ಆಡಿಸಬಹುದಾಗಿದೆ. ಹಾಗೆಯೇ ಬೌಲಿಂಗ್ ವಿಭಾಗದಲ್ಲೂ ರಸಿಖ್ ದಾರ್ ಬದಲಿಗೆ ಅನುಭವಿ ಭುವನೇಶ್ವರ್ ಕುಮಾರ್ ಆಡಲಿದ್ದಾರೆ.

ಚೆನ್ನೈ ಪಿಚ್ ವರದಿ

ಚೆನ್ನೈ ಮತ್ತು ಬೆಂಗಳೂರು ನಡುವಿನ ಐಪಿಎಲ್ 2025 ರ 18 ನೇ ಸೀಸನ್​ನ 8 ನೇ ಪಂದ್ಯವು ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಚೆಪಾಕ್‌ನ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದೆ. ಹೀಗಾಗಿ, ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಇಲ್ಲಿ ತಾಳ್ಮೆಯ ಬ್ಯಾಟಿಂಗ್‌ಗೆ ಹೆಚ್ಚು ಒತ್ತುಕೊಡುವ ಬ್ಯಾಟರ್​ ಮೇಲುಗೈ ಸಾಧಿಸಬಹುದು. ಹಾಗೆಯೇ ಪಿಚ್​ನಲ್ಲಿ ಕೊಂಚ ಸಮಯ ಕಳೆದರೆ ಉತ್ತಮ ರನ್ ಕಲೆಹಾಕಲು ಸಾಧ್ಯವಾಗುತ್ತದೆ.

ಇದನ್ನೂ ಓದಿ
Image
ಪ್ರಿನ್ಸ್ ವೇಗಕ್ಕೆ ಹೆಡ್ ಕ್ಲೀನ್ ಬೌಲ್ಡ್; ವಿಡಿಯೋ
Image
ಹೈದರಾಬಾದ್​ನ ಆರಂಭಿಕ ಅಬ್ಬರಕ್ಕೆ ಬ್ರೇಕ್ ಹಾಕಿದ ಶಾರ್ದೂಲ್
Image
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
Image
ತವರಿನಲ್ಲೇ ಸಿಎಸ್​ಕೆಗೆ ಮಣ್ಣು ಮುಕ್ಕಿಸಲು ಆರ್​ಸಿಬಿ ರೆಡಿ

ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಇದುವರೆಗೆ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಒಟ್ಟು 33 ಪಂದ್ಯಗಳು ನಡೆದಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 21 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ ತಂಡ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ಐಪಿಎಲ್‌ ನಡುವೆ ರೋಹಿತ್ ಅಚ್ಚರಿಯ ನಿರ್ಧಾರ; ಹಿಟ್‌ಮ್ಯಾನ್ ಟೆಸ್ಟ್ ವೃತ್ತಿಜೀವನ ಅಂತ್ಯ?

ಉಭಯ ತಂಡಗಳು

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್/ ಜೇಕಬ್ ಬೆಥಲ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್ ಮತ್ತು ಯಶ್ ದಯಾಳ್.

ಚೆನ್ನೈ ಸಂಭಾವ್ಯ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಮತಿಶ ಪತಿರಾನ, ಖಲೀಲ್ ಅಹ್ಮದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ