SRH vs LSG Highlights, IPL 2025: ಬಲಿಷ್ಠ ಹೈದರಾಬಾದ್‌ಗೆ ಸೋಲಿನ ಶಾಕ್ ನೀಡಿದ ಲಕ್ನೋ
Sunrisers Hyderabad vs Lucknow Super Giants Highlights in Kannada: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 16.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಐದು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

ಐಪಿಎಲ್ 2025 ರ ಹೈ-ವೋಲ್ಟೇಜ್ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಹೈದರಾಬಾದ್ ಪರ ಟ್ರಾವಿಸ್ ಹೆಡ್ ಅತ್ಯಧಿಕ 47 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 16.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಐದು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಲಕ್ನೋ ತಂಡದ ಈ ಗೆಲುವಿನಲ್ಲಿ ಶಾರ್ದೂಲ್ ಠಾಕೂರ್, ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಪ್ರಮುಖ ಪಾತ್ರವಹಿಸಿದರು.
LIVE NEWS & UPDATES
-
ಲಕ್ನೋಗೆ ಸುಲಭ ಜಯ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 16.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಐದು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
-
ಎಲ್‌ಎಸ್‌ಜಿ- 189/5
16 ಓವರ್‌ಗಳಲ್ಲಿ ಲಕ್ನೋ ತಂಡ 5 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿದೆ. ಈಗ ಗೆಲ್ಲಲು ಕೇವಲ 2 ರನ್‌ಗಳು ಬೇಕಾಗಿವೆ.
-
-
ರಿಷಭ್ ಪಂತ್ ಔಟ್
15 ಎಸೆತಗಳಲ್ಲಿ 15 ರನ್ ಗಳಿಸಿದ ನಂತರ ರಿಷಭ್ ಪಂತ್ ಹರ್ಷಲ್ ಪಟೇಲ್‌ಗೆ ಬಲಿಯಾದರು. ಇದರೊಂದಿಗೆ ಲಕ್ನೋ ತಂಡದ ಅರ್ಧದಷ್ಟು ಜನರು ಪೆವಿಲಿಯನ್‌ಗೆ ಮರಳಿದ್ದಾರೆ.
-
28 ರನ್ ಬೇಕು
14 ಓವರ್‌ಗಳು ಮುಗಿದಿದ್ದು, ಲಕ್ನೋ ತಂಡ 4 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿದೆ. ಈಗ ಲಕ್ನೋ ಗೆಲುವಿನಿಂದ ಕೇವಲ 28 ರನ್‌ಗಳ ದೂರದಲ್ಲಿದೆ.
-
ಮೂರನೇ ವಿಕೆಟ್
ಮಿಚೆಲ್ ಮಾರ್ಷ್ ಔಟಾದರು ಮತ್ತು ಇದರೊಂದಿಗೆ ಲಕ್ನೋ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ಮಾರ್ಷ್ 31 ಎಸೆತಗಳಲ್ಲಿ 52 ರನ್ ಗಳಿಸಿದರು.
-
-
ಸತತ ಎರಡನೇ ಅರ್ಧಶತಕ
ಮಿಚೆಲ್ ಮಾರ್ಷ್ ಸತತ ಎರಡನೇ ಅರ್ಧಶತಕ ಗಳಿಸಿದರು. ಅವರು ಕೇವಲ 29 ಎಸೆತಗಳಲ್ಲಿ ಈ ಸಾಧನೆ ಮಾಡಿದರು.
-
10 ಓವರ್‌ಗಳ ನಂತರ- 129/2
10 ಓವರ್‌ಗಳ ಆಟ ಮುಗಿದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ 2 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.
-
ಎರಡನೇ ವಿಕೆಟ್
ಲಕ್ನೋ ತಂಡ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ. ನಿಕೋಲಸ್ ಪೂರನ್ ಅವರ ಬಿರುಗಾಳಿಯ ಇನ್ನಿಂಗ್ಸ್ ಕೊನೆಗೊಂಡಿದೆ. ಕೇವಲ 26 ಎಸೆತಗಳಲ್ಲಿ 70 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಪ್ಯಾಟ್ ಕಮ್ಮಿನ್ಸ್ ಅವರನ್ನು ಬೇಟೆಯಾಡಿದರು.
-
ಪವರ್ ಪ್ಲೇ ಅಂತ್ಯ
ಲಕ್ನೋ ತಂಡವು ಬಿರುಗಾಳಿಯ ಆರಂಭವನ್ನು ಪಡೆದುಕೊಂಡಿದ್ದು, ಪವರ್‌ಪ್ಲೇನಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ.
-
50 ರನ್ ಪೂರ್ಣ
ಲಕ್ನೋ ಸೂಪರ್ ಜೈಂಟ್ಸ್ ಕೇವಲ 4.2 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿತು. ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ನಡುವೆ ಉತ್ತಮ ಜೊತೆಯಾಟ ನಡೆಯುತ್ತಿದೆ.
-
3 ಓವರ್ ಮುಕ್ತಾಯ
ಮೊದಲ 3 ಓವರ್‌ಗಳ ಅಂತ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ. ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.
-
ಲಕ್ನೋ ಮೊದಲ ವಿಕೆಟ್
ಲಕ್ನೋ ತಂಡ ಕೇವಲ 4 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಐಡೆನ್ ಮಾರ್ಕ್ರಾಮ್ 1 ರನ್ ಗಳಿಸಿ ಔಟಾದರು.
-
190 ರನ್ ಟಾರ್ಗೆಟ್
ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಪಂದ್ಯವನ್ನು ಗೆಲ್ಲಲು ಲಕ್ನೋ 120 ಎಸೆತಗಳಲ್ಲಿ 191 ರನ್ ಗಳಿಸಬೇಕಾಗುತ್ತದೆ. ಈ ಇನ್ನಿಂಗ್ಸ್‌ನಲ್ಲಿ ಎಸ್‌ಆರ್‌ಹೆಚ್ ಪರ ಟ್ರಾವಿಸ್ ಹೆಡ್ ಅತಿ ಹೆಚ್ಚು 47 ರನ್ ಗಳಿಸಿದರೆ, ನಿತೀಶ್ ರೆಡ್ಡಿ ಕೂಡ 32 ರನ್‌ಗಳ ಕೊಡುಗೆ ನೀಡಿದರು. ಮತ್ತೊಂದೆಡೆ, ಶಾರ್ದೂಲ್ ಠಾಕೂರ್ 4 ವಿಕೆಟ್‌ಗಳೊಂದಿಗೆ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.
-
ಕಮ್ಮಿನ್ಸ್ ಔಟ್
ಪ್ಯಾಟ್ ಕಮ್ಮಿನ್ಸ್ 4 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 176 ರನ್‌ಗಳಿಗೆ ಎಸ್‌ಆರ್‌ಹೆಚ್ ಈ ವಿಕೆಟ್ ಕಳೆದುಕೊಂಡಿತು.
-
ಶಾರ್ದೂಲ್ಗೆ ಮೂರನೇ ವಿಕೆಟ್
ಹೈದರಾಬಾದ್ ತನ್ನ 7ನೇ ವಿಕೆಟ್ ಕಳೆದುಕೊಂಡಿದೆ. ಅಭಿನವ್ ಮನೋಹರ್ 2 ರನ್ ಗಳಿಸಿ ಶಾರ್ದೂಲ್ ಠಾಕೂರ್ಗೆ ಬಲಿಯಾದರು. ಈ ಪಂದ್ಯದಲ್ಲಿ ಶಾರ್ದೂಲ್ ಗೆ ಇದು ಮೂರನೇ ವಿಕೆಟ್.
-
6ನೇ ವಿಕೆಟ್
ಹೈದರಾಬಾದ್ ತಂಡ 156 ರನ್ ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತು. ಅನಿಕೇತ್ ವರ್ಮಾ 13 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದರು.
-
150 ರನ್ ಪೂರ್ಣ
ಸನ್‌ರೈಸರ್ಸ್ ಹೈದರಾಬಾದ್ 15.4 ಓವರ್‌ಗಳಲ್ಲಿ 150 ರನ್ ಗಳಿಸಿದೆ. ಅನಿಕೇತ್ ವರ್ಮಾ ತುಂಬಾ ವೇಗವಾಗಿ ರನ್ ಗಳಿಸುತ್ತಿದ್ದಾರೆ. ಅವರು ಇಲ್ಲಿಯವರೆಗೆ 4 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
-
ನಾಲ್ಕನೇ ವಿಕೆಟ್
ಹೆನ್ರಿಕ್ ಕ್ಲಾಸೆನ್ 17 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ಇದರೊಂದಿಗೆ ಹೈದರಾಬಾದ್ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ.
-
100 ರನ್ ಪೂರ್ಣ
11 ಓವರ್‌ಗಳ ಅಂತ್ಯಕ್ಕೆ ಹೈದರಾಬಾದ್ ತಂಡ 3 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಆದಾಗ್ಯೂ, ಹೆಡ್ ಮತ್ತು ಇಶಾನ್ ಕಿಶನ್ ಔಟಾದ ನಂತರ ಇನ್ನಿಂಗ್ಸ್ ನಿಧಾನವಾಯಿತು. ಲಕ್ನೋ ಬೌಲರ್‌ಗಳು ಬಿಗಿ ಹಿಡಿತ ಸಾಧಿಸಿದ್ದಾರೆ, ಇದರ ಪರಿಣಾಮವಾಗಿ ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ರೆಡ್ಡಿ ಒಟ್ಟಾಗಿ 21 ಎಸೆತಗಳಲ್ಲಿ ಕೇವಲ 27 ರನ್ ಗಳಿಸಲು ಸಾಧ್ಯವಾಯಿತು.
-
10 ಓವರ್ ಪೂರ್ಣ
10 ಓವರ್‌ಗಳ ಆಟ ಮುಗಿದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.
-
ಹೆಡ್ ಔಟ್
ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ಲಕ್ನೋ ತಂಡದ ಯುವ ಬೌಲರ್ ಪ್ರಿನ್ಸ್ ಯಾದವ್ ಅವರ ಬೌಲಿಂಗ್ನಲ್ಲಿ ಹೆಡ್ ಕ್ಲೀನ್ ಬೌಲ್ಡ್ ಆದರು.
-
6 ಓವರ್‌ಗಳ ನಂತರ SRH- 62/2
6 ಓವರ್‌ಗಳ ಆಟ ಮುಗಿದಿದೆ. ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ. ಟ್ರಾವಿಸ್ ಹೆಡ್ 23 ಎಸೆತಗಳಲ್ಲಿ 42 ರನ್ ಮತ್ತು ನಿತೀಶ್ ಕುಮಾರ್ ರೆಡ್ಡಿ 7 ಎಸೆತಗಳಲ್ಲಿ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
ಹೆಡ್ 2 ಕ್ಯಾಚ್ ಮಿಸ್
ಆರನೇ ಓವರ್‌ನಲ್ಲಿ ಟ್ರಾವಿಸ್ ಹೆಡ್ ಅವರ ಎರಡನೇ ಕ್ಯಾಚ್ ಮಿಸ್ ಆಯಿತು. ಮೊದಲಿಗೆ ನಿಕೋಲಸ್ ಪೂರನ್ ಸುಲಭ ಕ್ಯಾಚ್ ಕೈಚೆಲ್ಲಿದರೆ, ರವಿ ಬಿಷ್ಣೋಯ್ ತಮ್ಮ ಬೌಲಿಂಗ್ನಲ್ಲೇ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಕೈಬಿಟ್ಟರು.
-
ಹೈದರಾಬಾದ್‌ಗೆ ಎರಡನೇ ಹೊಡೆತ
ಶಾರ್ದೂಲ್ ಠಾಕೂರ್ ಒಂದೇ ಓವರ್‌ನಲ್ಲಿ ಎರಡನೇ ವಿಕೆಟ್ ಉರುಳಿಸಿದರು. ಮೊದಲು ಅಭಿಷೇಕ್ರನ್ನು ಔಟ್ ಮಾಡಿದ್ದ ಶಾರ್ದೂಲ್ ನಂತರದ ಎಸೆತದಲ್ಲಿ ಇಶಾನ್ ಕಿಶನ್ ಅವರನ್ನು ಬಲಿಪಶುವನ್ನಾಗಿ ಮಾಡಿಕೊಂಡರು. ನಿತೀಶ್ ರೆಡ್ಡಿ ಈಗ ಬ್ಯಾಟಿಂಗ್ ಮಾಡಲು ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ
-
SRH vs LSG: ಅಭಿಷೇಕ್ ಔಟ್
ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಅವರಿಂದ ಹೈದರಾಬಾದ್ ತಂಡಕ್ಕೆ ಮೊದಲ ಹೊಡೆತ ಸಿಕ್ಕಿತು. ಅವರು ಅಭಿಷೇಕ್ ಶರ್ಮಾ ಅವರ ವಿಕೆಟ್ ಪಡೆದರು.
-
SRH vs LSG: ಹೈದರಾಬಾದ್ ಬ್ಯಾಟಿಂಗ್ ಆರಂಭ
ಲಕ್ನೋ ವಿರುದ್ಧ ಹೈದರಾಬಾದ್ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಅಭಿಷೇಕ್ ಮತ್ತು ಹೆಡ್ ಅವರ ಆರಂಭಿಕ ಜೋಡಿ ಕ್ರೀಸ್‌ನಲ್ಲಿದ್ದಾರೆ. ಪಂದ್ಯದ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಬೌಂಡರಿ ಬಾರಿಸುವ ಮೂಲಕ ಎಸ್‌ಆರ್‌ಹೆಚ್ ಖಾತೆ ತೆರೆದರು. ಪಂದ್ಯದ ಮೊದಲ ಓವರ್ ಅನ್ನು ಎಲ್‌ಎಸ್‌ಜಿ ತಂಡದ ಶಾರ್ದೂಲ್ ಠಾಕೂರ್ ಎಸೆದರು, ಇದರಲ್ಲಿ ಒಟ್ಟು 6 ರನ್‌ಗಳು ಬಂದವು.
-
SRH vs LSG: ಲಕ್ನೋ ತಂಡ
ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಡೇವಿಡ್ ಮಿಲ್ಲರ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್ ಮತ್ತು ಆವೇಶ್ ಖಾನ್.
-
SRH vs LSG: ಎಸ್‌ಆರ್‌ಹೆಚ್
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸಿಮರ್ಜಿತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ
-
SRH vs LSG: ಟಾಸ್ ಗೆದ್ದ ಲಕ್ನೋ ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಲಕ್ನೋ ನಾಯಕ ರಿಷಬ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Mar 27,2025 7:01 PM