ಕೇರಳದ ರೀತಿ ರಾಜ್ಯದಲ್ಲೂ ಮುಸ್ಲಿಮರಿಗೆ ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ; ಯತ್ನಾಳ್​

ಪೊಲೀಸ್ ಠಾಣೆಗೆ ನುಗ್ಗಿ ಗಲಭೆ ಮಾಡಿದವರ ಕೇಸ್ ಹಿಂಪಡೆಯಲು ಡಿಸಿಎಂ ಪತ್ರ ಬರೆಯುತ್ತಾರೆ ಅಂದ್ರೆ ಪೊಲೀಸರು ಹೇಗೆ ಕೆಲಸ ಮಾಡಬೇಕು. ಕುಕ್ಕರ್​ ಬ್ಲಾಸ್ಟ್​ ಆದಾಗ ನಮ್ಮ ಬ್ರದರ್​ ಅಂತಾರೆ, ಇವರಿಗೆ ನಾಚಿಕೆ ಆಗಲ್ವ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು.

ಕೇರಳದ ರೀತಿ ರಾಜ್ಯದಲ್ಲೂ ಮುಸ್ಲಿಮರಿಗೆ ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ; ಯತ್ನಾಳ್​
ಬಸನಗೌಡ ಪಾಟೀಲ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2023 | 2:54 PM

ಬೆಂಗಳೂರು, ಅ.04: ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಮಾಡುವುದು ಯಾರು ಎಂಬ ಪ್ರಶ್ನೆ ಮೂಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal)  ಕಾಂಗ್ರೆಸ್​ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ(Bangalore) ಮಾತನಾಡಿದ ಅವರು ‘ ರಾಜ್ಯದಲ್ಲಿ ಮುಸ್ಲಿಮರಿಗೆ ಯಾರೂ ಏನು ಮಾಡಲ್ಲವೆಂಬ ವಾತಾವರಣ ಇದೆ. ಪೊಲೀಸ್ ಇಲಾಖೆ ಈಗ ಯಾಕೆ ಸುಮ್ಮನಾಗಿದೆ ಎಂದು ಗೃಹ ಸಚಿವರು ಉತ್ತರಿಸಲಿ ಎಂದಿದ್ದಾರೆ.

ಕುಕ್ಕರ್ ಬ್ಲಾಸ್ಟ್ ಆದಾಗ ನಮ್ಮ ಬ್ರದರ್ ಅಂತಾರೆ, ಇವರಿಗೆ ನಾಚಿಕೆ ಆಗಲ್ವಾ?

ಪೊಲೀಸ್ ಠಾಣೆಗೆ ನುಗ್ಗಿ ಗಲಭೆ ಮಾಡಿದವರ ಕೇಸ್ ಹಿಂಪಡೆಯಲು ಡಿಸಿಎಂ ಪತ್ರ ಬರೆಯುತ್ತಾರೆ ಅಂದ್ರೆ ಪೊಲೀಸರು ಹೇಗೆ ಕೆಲಸ ಮಾಡಬೇಕು. ಕುಕ್ಕರ್​ ಬ್ಲಾಸ್ಟ್​ ಆದಾಗ ನಮ್ಮ ಬ್ರದರ್​ ಅಂತಾರೆ, ಇವರಿಗೆ ನಾಚಿಕೆ ಆಗಲ್ವ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು. ಇದರ ಜೊತೆಗೆ ಜಮ್ಮು-ಕಾಶ್ಮೀರ, ಕೇರಳದ ರೀತಿ ರಾಜ್ಯದಲ್ಲೂ ಮುಸ್ಲಿಮರಿಗೆ ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಔರಂಗಜೇಬ ಎಂದೂ ಶಿವಾಜಿ ಎದುರು ಬರಲಿಲ್ಲ, ನಮ್ಮ ಮಹಾರಾಣಾ ಪ್ರತಾಪ್‌ ಹೆಸರು ಕೇಳಿದರೆ ಅಕ್ಬರ್ ಚಡ್ಡಿಯಲ್ಲೇ ಮೂತ್ರಪಾನ ಮಾಡಿಕೊಳ್ಳುತ್ತಿದ್ದರು. ನಾವು ಮನೆಯಲ್ಲಿ ಈರುಳ್ಳಿ ಹೆಚ್ಚಲು ಚಾಕು-ಚೂರಿ ಇಟ್ಟುಕೊಂಡಿರುವುದಿಲ್ಲ. ಹಿಂದೂ ಸನಾತನ ಧರ್ಮದ ಬಗ್ಗೆ ಮಾತಾಡುವವರು ಕ್ರಾಸ್ ಬ್ರೀಡ್, ಹಂದಿ ಮಿಶ್ರಿತ ತಳಿಯವರೇ ನಮ್ಮ ಧರ್ಮಕ್ಕೆ ಬಯ್ಯುತ್ತಾರೆ ಎಂದರು.

ಇದನ್ನೂ ಓದಿ:ಶಿವಮೊಗ್ಗ ಈದ್​ ಗಲಾಟೆ ಬಗ್ಗೆ ಸರ್ಕಾರಕ್ಕೆ​ ಖಡಕ್​ ವಾರ್ನಿಂಗ್​ ಕೊಟ್ಟ ಬಸನಗೌಡ ಪಾಟೀಲ್​ ಯತ್ನಾಳ್​; ಇಲ್ಲಿದೆ ವಿಡಿಯೋ

ಸಿಎಂ ಸಿದ್ದರಾಮಯ್ಯ ಮತಾಂಧ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಸಮುದಾಯದ ಪೇಟ ಹಾಕಲು ರೆಡಿ ಇಲ್ಲ. ಆದರೆ, ಮುಸ್ಲಿಮರು ಧರಿಸುವ ಬಟ್ಟೆ ಹಾಕಿಕೊಂಡು ಡ್ಯಾನ್ಸ್ ಮಾಡ್ತಾರೆ. ಅವರೊಬ್ಬ ಮತಾಂಧ ಎಂದು ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಇದೇ ರೀತಿ ಉದ್ಧಟತನ ಮುಂದುವರಿಸಿದರೆ, ಹಿಂದೂಗಳು ಸುಮ್ಮನಿರಲ್ಲ.
ಯಾರೋ ಅರೆಹುಚ್ಚನನ್ನು ಪ್ರಧಾನಿ ಮಾಡಬೇಕು ಅಂತಿದ್ದಾರೆ, ಈ ಹುಚ್ಚರು. ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಅರೆಹುಚ್ಚ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ