AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರ ಹಿಂಸಾಚಾರಕ್ಕೆ 5 ತಿಂಗಳು: ಪ್ರಧಾನಿ ಮೋದಿಗೆ 4 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್

ವಾಸ್ತವವಾಗಿ, ವಿಷಯಗಳು ಕೆಟ್ಟದರಿಂದ ಅತ್ಯಂತ ಕೆಟ್ಟದಕ್ಕೆ ತಿರುಗಿವೆ. ಸಾಮಾಜಿಕ ಸಾಮರಸ್ಯ ಸಂಪೂರ್ಣ ಹದಗೆಟ್ಟಿದೆ. ಹಿಂಸಾತ್ಮಕ ಅಪರಾಧಗಳ ಭಯಾನಕ ವಿವರಗಳು ಪ್ರತಿ ದಿನವೂ ಹೊರಹೊಮ್ಮುತ್ತವೆ. ಹತ್ತಾರು ಜನರು ಪರಿಹಾರ ಶಿಬಿರಗಳಲ್ಲಿ ಕೊಳೆಯುತ್ತಿದ್ದಾರೆ. ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸರ ನಡುವೆ ಘರ್ಷಣೆಗಳು ನಡೆಯುತ್ತಲೇ ಇದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಮಣಿಪುರ ಹಿಂಸಾಚಾರಕ್ಕೆ 5 ತಿಂಗಳು: ಪ್ರಧಾನಿ ಮೋದಿಗೆ 4 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್
ಜೈರಾಮ್ ರಮೇಶ್
Follow us
ರಶ್ಮಿ ಕಲ್ಲಕಟ್ಟ
|

Updated on:Oct 04, 2023 | 5:00 PM

ದೆಹಲಿ ಅಕ್ಟೋಬರ್ 04: ಮಣಿಪುರದಲ್ಲಿ (Manipur) ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಕಾಂಗ್ರೆಸ್ (Congress) ಪ್ರಶ್ನಿಸಿದ್ದು, ಪ್ರಧಾನಿ ರಾಜ್ಯ ಮತ್ತು ಅದರ ಜನರನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟಿದ್ದಾರೆ ಎಂದು ಹೇಳಿದೆ. ಈಗಿನಂತೆ ಒಂದು ರಾಜ್ಯವನ್ನು ಮತ್ತು ಅದರ ಸಂಪೂರ್ಣ ಜನರನ್ನು ಹಿಂದೆಂದೂ ಪ್ರಧಾನಿ ಸಂಪೂರ್ಣವಾಗಿ ತ್ಯಜಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ರಾಜ್ಯದಲ್ಲಿ ಬಿಜೆಪಿಗೆ ಭಾರೀ ಜನಾದೇಶ ದೊರೆತ ಕೇವಲ 15 ತಿಂಗಳ ನಂತರ ಮಣಿಪುರ ಈ ಭಯಾನಕ ಪರಿಸ್ಥಿತಿಗೆ ಬಂದಿರುವುದಕ್ಕೆ ಅದರ ನೀತಿಗಳು ಮತ್ತು ಪ್ರಧಾನಿಯವರ ಆದ್ಯತೆಗಳೇ ಕಾರಣ ಎಂದು ಅವರು ಹೇಳಿದ್ದಾರೆ.

ಮೇ 3 ರಂದು ಮಣಿಪುರದಲ್ಲಿ ಮೊದಲ ಬಾರಿಗೆ ಘರ್ಷಣೆಗಳು ಭುಗಿಲೆದ್ದಿದ್ದು ಹಿಂಸಾಚಾರವು ತ್ವರಿತವಾಗಿ ರಾಜ್ಯದಾದ್ಯಂತ ಹರಡಿತು. ಇಲ್ಲಿ ನಡೆದ ಜನಾಂಗೀಯ ಸಂಘರ್ಘದಿಂದಾಗಿ ರಾಜ್ಯದಲ್ಲಿ ಕನಿಷ್ಠ 175 ಜನರು ಸಾವಿಗೀಡಾಗಿದ್ದಾರೆ, 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರವು “ಡಬಲ್ ಇಂಜಿನ್ ಸರ್ಕಾರ್ ಎಂದು ಕರೆಯಲ್ಪಡುವ ವಿಭಜಕ ರಾಜಕೀಯ” ದಿಂದ ಭುಗಿಲೆದ್ದಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

“ವಾಸ್ತವವಾಗಿ, ವಿಷಯಗಳು ಕೆಟ್ಟದರಿಂದ ಅತ್ಯಂತ ಕೆಟ್ಟದಕ್ಕೆ ತಿರುಗಿವೆ. ಸಾಮಾಜಿಕ ಸಾಮರಸ್ಯ ಸಂಪೂರ್ಣ ಹದಗೆಟ್ಟಿದೆ. ಹಿಂಸಾತ್ಮಕ ಅಪರಾಧಗಳ ಭಯಾನಕ ವಿವರಗಳು ಪ್ರತಿ ದಿನವೂ ಹೊರಹೊಮ್ಮುತ್ತವೆ. ಹತ್ತಾರು ಜನರು ಪರಿಹಾರ ಶಿಬಿರಗಳಲ್ಲಿ ಕೊಳೆಯುತ್ತಿದ್ದಾರೆ. ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸರ ನಡುವೆ ಘರ್ಷಣೆಗಳು ನಡೆಯುತ್ತಲೇ ಇದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಆಗಸ್ಟ್ 10 ರಂದು ಲೋಕಸಭೆಯಲ್ಲಿ 133 ನಿಮಿಷಗಳ ಭಾಷಣದಲ್ಲಿ 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಣಿಪುರದ ಬಗ್ಗೆ ಏನೋ ಸ್ವಲ್ಪ ಮಾತನಾಡಿ ಮೋದಿ ಆಮೇಲೆ ಮೌನವಾಗಿದ್ದಾರೆ.

ಮಣಿಪುರದ ಬಿಕ್ಕಟ್ಟಿನ ಬಗ್ಗೆ ಯೋಚಿಸಲು ಕೆಲವು ಪ್ರಶ್ನೆಗಳಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

    • ಮೋದಿ ಮಣಿಪುರಕ್ಕೆ ಕೊನೆಯ ಬಾರಿ ಭೇಟಿ ಮಾಡಿದ್ದು ಯಾವಾಗ?
    • ಮಣಿಪುರದ ಬಿಜೆಪಿ ಸಿಎಂ ಜೊತೆ ಪ್ರಧಾನಿಯವರು ಕೊನೆಯ ಬಾರಿ ಮಾತನಾಡಿದ್ದು ಯಾವಾಗ?
    • ಮಣಿಪುರದ ಬಿಜೆಪಿ ಶಾಸಕರನ್ನು ಪ್ರಧಾನಿಯವರು ಕೊನೆಯ ಬಾರಿ ಭೇಟಿಯಾದದ್ದು ಯಾವಾಗ?
    • ಪ್ರಧಾನಮಂತ್ರಿಯವರು ಮಣಿಪುರದ ಕುರಿತು ತಮ್ಮ ರಾಜ್ಯದ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಕೊನೆಯ ಬಾರಿ ಚರ್ಚಿಸಿದ್ದು ಯಾವಾಗ?

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ “ಬಹುಪಾಲು ಬಿಜೆಪಿ ಶಾಸಕರು ಅವರನ್ನು ಕಚೇರಿಯಿಂದ ಹೊರಹಾಕಲು ಬಯಸಿದ್ದರೂ ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಸಂಸತ್​​​ನಲ್ಲಿ ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಆಗಸ್ಟ್ 10 ರಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಜನರ ನೋವನ್ನು ಪರಿಹರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದರು. ಭಾರತ ಮತ್ತು ಸಂಸತ್ ಮಣಿಪುರದೊಂದಿಗೆ ದೃಢವಾಗಿ ನಿಂತಿದೆ ಮತ್ತು ರಾಜ್ಯವನ್ನು ಮತ್ತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.

ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮಹಿಳೆಯರ ವಿರುದ್ಧ ಗಂಭೀರ ಅಪರಾಧಗಳು ನಡೆದಿವೆ, ಇದು ಸ್ವೀಕಾರಾರ್ಹವಲ್ಲ “ನಮ್ಮ ಸರ್ಕಾರವು ಅಪರಾಧಿಗಳ ವಿರುದ್ಧ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Viral Optical Illusion: ಮೂರನೇ ನಾಯಿ ಇಲ್ಲಿ ಎಲ್ಲಿದೆ, 7 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಜುಲೈ 26 ರಂದು ಕಾಂಗ್ರೆಸ್‌ನ ಗೌರವ್ ಗೊಗೊಯ್ ಅವರು ಸಲ್ಲಿಸಿದ ಅವಿಶ್ವಾಸ ನಿರ್ಣಯದ ನಂತರ ಮೂರು ದಿನಗಳ ಚರ್ಚೆಯ ಕೊನೆಯಲ್ಲಿ ಮಣಿಪುರದಲ್ಲಿನ ಗಂಭೀರ ಅನ್ಯಾಯ ಮತ್ತು ಈ ವಿಷಯದ ಬಗ್ಗೆ ಮೋದಿ ಮಾತನಾಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Wed, 4 October 23

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ