ದೆಹಲಿಯ ಮದ್ಯ ನೀತಿ ಪ್ರಕರಣ: ಎಎಪಿಯ ಸಂಸದ ಸಂಜಯ್ ಸಿಂಗ್ ಬಂಧನ
ದೆಹಲಿಯ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್(Sanjay Singh)ಅವರ ಮನೆ ಮೇಲೆ ಇಂದು ಬೆಳಿಗ್ಗೆ (ಅ.4) ಇಡಿ ದಾಳಿ ನಡೆಸಿತ್ತು. ಇದೀಗ ಇಡಿ ಅವರನ್ನು ಬಂಧಿಸಿದೆ.
ದೆಹಲಿ, ಅ.4: ದೆಹಲಿಯ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್(Sanjay Singh)ಅವರ ಮನೆ ಮೇಲೆ ಇಂದು ಬೆಳಿಗ್ಗೆ (ಅ.4) ಇಡಿ ದಾಳಿ ನಡೆಸಿತ್ತು. ಇದೀಗ ಇಡಿ ಅವರನ್ನು ಬಂಧಿಸಿದೆ. ಕೇಂದ್ರ ತನಿಖಾ ಸಂಸ್ಥೆ ಈ ಹಿಂದೆ ಸಂಜಯ್ ಸಿಂಗ್ ಅವರ ಸಿಬ್ಬಂದಿಗಳು ಹಾಗೂ ಆಪ್ತರನ್ನು ವಿಚಾರಣೆ ನಡೆಸಿತ್ತು. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ತನ್ನ ಚಾರ್ಜ್ ಶೀಟ್‌ನಲ್ಲಿ ಇವರ ಹೆಸರನ್ನು ಕೂಡ ಪ್ರಸ್ತಾಪಿಸಿಲಾಗಿತ್ತು. ಇಡಿ ವರದಿ ಪ್ರಕಾರ ದಿನೇಶ್ ಅರೋರಾ ಎಂಬ ಮಧ್ಯವರ್ತಿಯ ರೆಸ್ಟೋರೆಂಟ್ ಅನ್‌ಪ್ಲಗ್ಡ್ ಕೋರ್ಟ್‌ಯಾರ್ಡ್‌ನಲ್ಲಿ ಪಾರ್ಟಿಯ ಸಂದರ್ಭದಲ್ಲಿ ಸಿಂಗ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಿದೆ.
2020ರಲ್ಲಿ, ದೆಹಲಿ ವಿಧಾನಸಭಾ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷದ ನಿಧಿಗೆ ಹಣವನ್ನು ಸಂಗ್ರಹಿಸಲು ರೆಸ್ಟೋರೆಂಟ್ ಮಾಲೀಕರನ್ನು ಕೇಳುವಂತೆ ಸಂಜಯ್ ಸಿಂಗ್ ಈ ಮಧ್ಯವರ್ತಿ ದಿನೇಶ್ ಅರೋರಾ ಅವರಿಗೆ ಕೇಳಿದರು. ಇದಕ್ಕಾಗಿ ₹ 82 ಲಕ್ಷ ಚೆಕ್ ನೀಡಿದ್ದೇನೆ ಎಂದು ಹೇಳಿದ್ದಾರೆ. ಇನ್ನು ದಿನೇಶ್ ಅರೋರಾ ಚಾರ್ಜ್ ಶೀಟ್‌ನಲ್ಲಿ ಇನ್ನೊಬ್ಬ ಆರೋಪಿಯನ್ನು ಕೂಡ ಬಾಯಿಬಿಟ್ಟಿದ್ದಾರೆ. ಅಮಿತ್ ಅರೋರಾ ಎಂಬ ವ್ಯಕ್ತಿ ತನ್ನ ಮದ್ಯದ ಅಂಗಡಿಯನ್ನು ಓಖ್ಲಾದಿಂದ ಪಿತಾಂಪುರಕ್ಕೆ ಸ್ಥಳಾಂತರಿಸಲು ಸಹಾಯ ಕೇಳಿದ್ದಾನೆ. ಇದಕ್ಕೆ ಸಂಜಯ್ ಸಿಂಗ್ ನಾನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಲ್ಲಿ ಮಾತನಾಡಿ ಈ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಅಂಬಕಾರಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಎಎಪಿಯ ಸಂಸದ ಸಂಜಯ್ ಸಿಂಗ್ ಮನೆ ಮೇಲೆ ಇಡಿ ದಾಳಿ
ದಿನೇಶ್ ಅರೋರಾ ಸಂಜಯ್ ಸಿಂಗ್ ಅವರೊಂದಿಗೆ ಅರವಿಂದ್ ಕ್ರೇಜಿವಾಲ್ ಅವರನ್ನು ದೆಹಲಿ ಅವರ ನಿವಾಸದಲ್ಲಿ ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ಇದರ ಜತೆಗೆ ದಿನೇಶ್ ಅರೋರಾ ಮನೀಶ್ ಸಿಸೋಡಿಯಾ ಅವರೊಂದಿಗೆ ಐದು-ಆರು ಬಾರಿ ಮಾತನಾಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.
ಇದು ಕೇಂದ್ರ ಸರ್ಕಾರದ ಪಿತ್ತೂರಿ, ಅದಾನಿ ಬಗ್ಗೆ ಸಂಜಯ್ ಅವರು ಪ್ರತಿ ಬಾರಿ ಸಂಸತ್ನಲ್ಲಿ ಧ್ವನಿ ಎತ್ತುತ್ತಿದ್ದರು. ಈ ಕಾರಣಕ್ಕೆ ಅವರ ಧ್ವನಿಯನ್ನು ನಿಲ್ಲಿಸಲು ಈ ದಾರಿಯಲ್ಲಿ ಸಾಗುತ್ತಿದೆ. ಕೇಂದ್ರೀಯ ಏಜೆನ್ಸಿಗಳು ಹಿಂದೆ ಈ ರೀತಿಯ ದಾಳಿಯನ್ನು ಅವರ ಮೇಲೆ ಮಾಡಿತ್ತು. ಆಗಾ ಅವರಿಗೆ ಏನು ಸಿಕ್ಕಿಲ್ಲ. ಈ ಬಾರಿಯೂ ಯಾವುದು ಸಿಗುವುದಿಲ್ಲ. ಸಂಜಯ್ ಅವರ ಮನೆಗೆ ದಾಳಿ ಮಾಡುವ ಮೊದಲು ಹಲವು ಪತ್ರಕರ್ತರ ಮೇಲೆ ನಿನ್ನೆ ಮತ್ತು ಇಂದು ದಾಳಿ ನಡೆಸಿದೆ ಎಂದು ಎಎಪಿ ವಕ್ತಾರ ರೀನಾ ಗುಪ್ತಾ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Wed, 4 October 23