ಚುನಾವಣೆಯಲ್ಲಿ ಸೋಲಿಸಲು ಆಗುತ್ತಿಲ್ಲ ಹಾಗಾಗಿ ಕೇಜ್ರಿವಾಲ್ನ್ನು ಕೊಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ: ಆಮ್ ಆದ್ಮಿ ಪಕ್ಷ
ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಮನೆಗೆ ತಲುಪಲು ಅವಕಾಶ ನೀಡುವ ಮೂಲಕ ದೆಹಲಿ ಪೊಲೀಸರು ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರವನ್ನು ಸುಗಮಗೊಳಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಲವಾರು ಹಿರಿಯ ನಾಯಕರು ಆರೋಪಿಸಿದ್ದಾರೆ.
ದೆಹಲಿ: ಇತ್ತೀಚೆಗೆ ಬಿಡುಗಡೆಯಾದ ವಿವಾದಾತ್ಮಕ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಕುರಿತು ಕೇಜ್ರಿವಾಲ್ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ (BJP) ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದಾಗ ಪೊಲೀಸರೊಂದಿಗೆ ಸಂಘರ್ಷವುಂಟಾಗಿದೆ. ಚಿತ್ರದಲ್ಲಿ ತೋರಿಸಿರುವ ಕಾಶ್ಮೀರಿ ಹಿಂದೂಗಳ “ಹತ್ಯಾಕಾಂಡ” ವನ್ನು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ಆರೋಪಿಸಿದ್ದಾರೆ. ದಾಳಿಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹಿರಿಯ ಎಎಪಿ ನಾಯಕ ಮನೀಶ್ ಸಿಸೋಡಿಯಾ, ಬಿಜೆಪಿಯು ಕೇಜ್ರಿವಾಲ್ ಅವರನ್ನು “ಕೊಲ್ಲಲು” ಬಯಸುತ್ತದೆ, ಏಕೆಂದರೆ ಅವರನ್ನು ಚುನಾವಣೆಯಲ್ಲಿ ಅವರನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದು ರಾಜಕೀಯವಲ್ಲ ಇದು ಪಕ್ಕಾ ಕ್ರಿಮಿನಲ್ ಪ್ರಕರಣ ಎಂದು ಸಿಸೋಡಿಯಾ ಹೇಳಿದ್ದಾರೆ. “ಇಂದು ಬಿಜೆಪಿಯ ಗೂಂಡಾಗಳು ಪೊಲೀಸರ ಸಮ್ಮುಖದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆಗೆ ತಲುಪಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಅವರು ಅವರನ್ನು ಕೊಲ್ಲಲು ಬಯಸಿದ್ದಾರೆ” ಎಂದು ಸಿಸೋಡಿಯಾ ಹೇಳಿದರು. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಮನೆಗೆ ತಲುಪಲು ಅವಕಾಶ ನೀಡುವ ಮೂಲಕ ದೆಹಲಿ ಪೊಲೀಸರು ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರವನ್ನು ಸುಗಮಗೊಳಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಲವಾರು ಹಿರಿಯ ನಾಯಕರು ಆರೋಪಿಸಿದ್ದಾರೆ.
बीजेपी के गुंडे CM @ArvindKejriwal जी के घर पर तोड़फोड़ करते रहे. बीजेपी की पुलिस उन्हें रोकने की जगह उन्हें घर के दरवाज़े तक लेकर आई. https://t.co/oSFc2kWaDC
— Manish Sisodia (@msisodia) March 30, 2022
ಬಿಜೆಪಿ ಧ್ವಜಗಳು ಮತ್ತು ಕಾಶ್ಮೀರಿ ಪಂಡಿತರಿಗೆ “ಅವಮಾನ” ವನ್ನು ಖಂಡಿಸುವ ಫಲಕಗಳನ್ನು ಹೊತ್ತ ಜನರ ದೊಡ್ಡ ಗುಂಪು ಮುಖ್ಯಮಂತ್ರಿಯ ನಿವಾಸದ ಹೊರಗೆ ಹಾಕಲಾದ ಬ್ಯಾರಿಕೇಡ್‌ನಲ್ಲಿ ಪೊಲೀಸರೊಂದಿಗೆ ಘರ್ಷಣೆ ಮಾಡುವುದನ್ನು ದೃಶ್ಯ ಮಾಧ್ಯಮಗಳು ತೋರಿಸಿವೆ. ಅವರಲ್ಲಿ ಹಲವರು ಭದ್ರತಾ ಗೋಡೆ ಮೂಲಕ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
“ಸಮಾಜವಿರೋಧಿ” ಶಕ್ತಿಗಳು ಕೇಜ್ರಿವಾಲ್ ಅವರ ಮನೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ತಡೆಗಳನ್ನು ಒಡೆದು ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅವರು ಪ್ರವೇಶದ್ವಾರದಲ್ಲಿ ಅಡೆತಡೆಗಳನ್ನು ಮುರಿದರು. ಮತ್ತೊಂದು ಟ್ವೀಟ್‌ನಲ್ಲಿ, ದುಷ್ಕರ್ಮಿಗಳು ದೆಹಲಿ ಪೊಲೀಸರು ಸಹಾಯ ಮಾಡಿದ “ಬಿಜೆಪಿ ಗೂಂಡಾಗಳು” ಎಂದು ಅವರು ಹೇಳಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಅವರು ಮಾಡಿದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾದ ಸುಮಾರು 150-200 ಪ್ರತಿಭಟನಾಕಾರರು ಬೆಳಿಗ್ಗೆ 11:30 ರ ಸುಮಾರಿಗೆ ಸಿಎಂ ಅವರ ನಿವಾಸವನ್ನು ತಲುಪಿದರು ಎಂದು ಪೊಲೀಸರು ತಿಳಿಸಿದ್ದಾರೆ. “ತಕ್ಷಣ” ಅವರನ್ನು ಸ್ಥಳದಿಂದ ಚದುರಿಸಿದ್ದು ಸುಮಾರು 70 ಜನರನ್ನು ಬಂಧಿಸಲಾಯಿತು. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
लोकप्रिय मुख्यमंत्री @ArvindKejriwal जी के निवास पर भाजपाई गुंडे हमला कर देते है और दिल्ली पुलिस उन्हें रोकने की जगह उनके साथ खड़ी दिखती है। भाजपाइयों याद रखना सबका हिसाब लिया जाएगा, ये लोकतंत्र है यहां जनता वक़्त आने पर तुम्हे वोट की लाठी से पीटेगी। pic.twitter.com/5XweWC7KBF
— Sanjay Singh AAP (@SanjayAzadSln) March 30, 2022
ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲವು ಪ್ರತಿಭಟನಾಕಾರರು ಎರಡು ಬ್ಯಾರಿಕೇಡ್‌ಗಳನ್ನು ಮುರಿದು ಸಿಎಂ ಭವನದ ಹೊರಗೆ ತಲುಪಿದರು . ಅಲ್ಲಿ ಅವರು ಗದ್ದಲ ಸೃಷ್ಟಿಸಿದರು, ಘೋಷಣೆಗಳನ್ನು ಕೂಗಿದರು. ಅವರು ಬಾಗಿಲಿನ ಹೊರಗೆ ಬಣ್ಣವನ್ನು ಎಸೆದರು. ಇಂಬ್ರೊಗ್ಲಿಯೊದಲ್ಲಿ, ಬೂಮ್ ಬ್ಯಾರಿಯರ್ ಆರ್ಮ್ ಅನ್ನು ಸಹ ಧ್ವಂಸಗೊಳಿಸಲಾಗಿದೆ ಮತ್ತು ಸಿಸಿಟಿವಿ ಕ್ಯಾಮೆರಾವನ್ನು ಸಹ ಧ್ವಂಸಗೊಳಿಸಲಾಗಿದೆ ಎಂದು ಪೋಲೀಸರ ಪ್ರಕಟಣೆ ತಿಳಿಸಿದೆ.
ದೆಹಲಿಯ ಬಿಜೆಪಿ ಶಾಸಕರು ರಾಷ್ಟ್ರ ರಾಜಧಾನಿಯಲ್ಲಿ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸುವ ಬೇಡಿಕೆಗೆ ಪ್ರತಿಕ್ರಿಯಿಸಿದ ಅರವಿಂದ ಕೇಜ್ರಿವಾಲ್, ತೆರಿಗೆ ಮುಕ್ತಗೊಳಿಸುವ ಬದಲು ಅದನ್ನು ಯುಟ್ಯೂಬ್ನಲ್ಲಿ ಹಾಕಿಬಿಡಿ ಎಂದಿದ್ದರು.
“ಅವರು ಕಾಶ್ಮೀರ ಫೈಲ್ಸ್ ತೆರಿಗೆ ಮುಕ್ತಗೊಳಿಸಿ ಎಂದು ಹೇಳುತ್ತಿದ್ದಾರೆ. ಸರಿ, ಅದನ್ನು ಯೂಟ್ಯೂಬ್‌ನಲ್ಲಿ ಹಾಕಿ ಅದು ಉಚಿತವಾಗಿರುತ್ತದೆ. ತೆರಿಗೆ ಮುಕ್ತಗೊಳಿಸುವಂತೆ ನಮ್ಮನ್ನು ಏಕೆ ಕೇಳುತ್ತಿದ್ದೀರಿ. ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿ ಸಿಗುತ್ತದೆ. ಒಂದು ದಿನದಲ್ಲಿ ಪ್ರತಿಯೊಬ್ಬರೂ ಅದನ್ನು ನೋಡಲು ಸಾಧ್ಯವಾಗುತ್ತದೆ. ಅದನ್ನು ತೆರಿಗೆ ಮುಕ್ತಗೊಳಿಸುವ ಅಗತ್ಯ ಎಲ್ಲಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಹೆಚ್ಚಿನ ಪ್ರಶಂಸೆ ಸೇರಿದಂತೆ ಸರ್ಕಾರದ ಬೆಂಬಲವನ್ನು ಪಡೆದಿರುವ ಈ ಚಲನಚಿತ್ರವು ಕಾಶ್ಮೀರಿ ಕಣಿವೆಯಿಂದ ಕಾಶ್ಮೀರಿ ಹಿಂದೂಗಳ ವಲಸೆಯನ್ನು ಆಧರಿಸಿದೆ.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಯೆದುರು ಬಿಜೆಪಿ ಬೆಂಬಲಿಗರ ಪ್ರತಿಭಟನೆ; ತೇಜಸ್ವಿ ಸೂರ್ಯ ಮುಂದಾಳತ್ವ, ಗೇಟ್ ಧ್ವಂಸ
ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ತೆರಿಗೆ ಮುಕ್ತ ಮಾಡುವುದಕ್ಕಿಂತ ಯೂಟ್ಯೂಬ್ನಲ್ಲೇ ಹಾಕಿಬಿಡಿ, ಎಲ್ಲರೂ ನೋಡಲಿ: ಅರವಿಂದ ಕೇಜ್ರಿವಾಲ್