ಕಾಶ್ಮೀರ್ ಫೈಲ್ಸ್​​​ ತೆರಿಗೆ ಮುಕ್ತ ಮಾಡುವುದಕ್ಕಿಂತ ಯೂಟ್ಯೂಬ್​​ನಲ್ಲೇ ಹಾಕಿಬಿಡಿ, ಎಲ್ಲರೂ ನೋಡಲಿ: ಅರವಿಂದ ಕೇಜ್ರಿವಾಲ್

ಕಾಶ್ಮೀರ್ ಫೈಲ್ಸ್ ತೆರಿಗೆ ಮುಕ್ತ ಮಾಡಿ ಎಂದು ಹೇಳುತ್ತಿದ್ದಾರೆ. ಅರೇ, ಯೂಟ್ಯೂಬ್​​ನಲ್ಲಿ ಹಾಕಿ ಬಿಡಿ, ಎಲ್ಲರಿಗೂ ಉಚಿತವಾಗಿ ಸಿಗುತ್ತದೆ. ತೆರಿಗೆ ಮುಕ್ತ ಯಾಕೆ ಮಾಡುತ್ತಿದ್ದೀರಿ? ನಿಮಗೆ ಅಷ್ಟೊಂದು ಆಸಕ್ತಿ ಇದ್ದರೆ ವಿವೇಕ್ ಅಗ್ನಿಹೋತ್ರಿಯಲ್ಲೇ ಹೇಳಿ, ಅವರು ಯೂಟ್ಯೂಬ್​​ನಲ್ಲಿ ಹಾಕುತ್ತಾರೆ.

ಕಾಶ್ಮೀರ್ ಫೈಲ್ಸ್​​​ ತೆರಿಗೆ ಮುಕ್ತ ಮಾಡುವುದಕ್ಕಿಂತ ಯೂಟ್ಯೂಬ್​​ನಲ್ಲೇ ಹಾಕಿಬಿಡಿ, ಎಲ್ಲರೂ ನೋಡಲಿ: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
TV9kannada Web Team

| Edited By: Rashmi Kallakatta

Mar 24, 2022 | 9:58 PM

ದೆಹಲಿ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ‘ದಿ ಕಾಶ್ಮೀರ್ ಫೈಲ್ಸ್(The Kashmir Files) ಚಿತ್ರವನ್ನು ಎಲ್ಲರೂ ನೋಡಬೇಕೆಂದು ಬಿಜೆಪಿ ಬಯಸಿದರೆ, ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಿ, ಹಾಗಾದರೆ ಅದು ಎಲ್ಲರಿಗೂ ಸಿಗುತ್ತದೆ ಎಂದು ಹೇಳಿದ್ದಾರೆ. ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ನಡೆಯುತ್ತಿರುವ ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸಿದ ಒಂದು ದಿನದ ನಂತರ ಮುಖ್ಯಮಂತ್ರಿ ಕೇಜ್ರಿವಾಲ್, ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಪ್ರತಿಯೊಬ್ಬರೂ ಚಲನಚಿತ್ರವನ್ನು ವೀಕ್ಷಿಸಬೇಕೆಂದು ಬಯಸುತ್ತಾರೆ. ಅವರು ಅದನ್ನು ಯೂಟ್ಯೂಬ್ ಗೆ ಹಾಕಿದರೆ ಎಲ್ಲರಿಗೂ ಸಿಗುತ್ತದೆ ಎಂದಿದ್ದಾರೆ. ಇಂದು ದೇಶಾದ್ಯಂತ ಬಿಜೆಪಿಯವರು ಬೀದಿ ಬೀದಿಗಳಲ್ಲಿ ಸಿನಿಮಾದ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ. ಇದನ್ನು ಮಾಡಲು ನೀವು ರಾಜಕೀಯಕ್ಕೆ ಬಂದಿದ್ದೀರಾ? ನೀವು ಮನೆಗೆ ಹೋದಾಗ ನಿಮ್ಮ ಮಕ್ಕಳಿಗೆ ಏನು ಹೇಳುತ್ತೀರಿ?. 8 ವರ್ಷ ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸಿದ ನಂತರ ದೇಶದ ಪ್ರಧಾನಿಯೊಬ್ಬರು ವಿವೇಕ್ ಅಗ್ನಿಹೋತ್ರಿಯ ಪಾದಗಳನ್ನು ಆಶ್ರಯಿಸಬೇಕು ಎಂದರೆ ಅವರು ತಮ್ಮ 8 ವರ್ಷಗಳ ಅಧಿಕಾರಾವಧಿಯಲ್ಲಿ ಏನನ್ನೂ ಮಾಡಲಿಲ್ಲ. ಕಾಶ್ಮೀರ್ ಫೈಲ್ಸ್ ತೆರಿಗೆ ಮುಕ್ತ ಮಾಡಿ ಎಂದು ಹೇಳುತ್ತಿದ್ದಾರೆ. ಅರೇ, ಯೂಟ್ಯೂಬ್​​ನಲ್ಲಿ ಹಾಕಿ ಬಿಡಿ, ಎಲ್ಲರಿಗೂ ಉಚಿತವಾಗಿ ಸಿಗುತ್ತದೆ. ತೆರಿಗೆ ಮುಕ್ತ ಯಾಕೆ ಮಾಡುತ್ತಿದ್ದೀರಿ? ನಿಮಗೆ ಅಷ್ಟೊಂದು ಆಸಕ್ತಿ ಇದ್ದರೆ ವಿವೇಕ್ ಅಗ್ನಿಹೋತ್ರಿಯಲ್ಲೇ ಹೇಳಿ, ಅವರು ಯೂಟ್ಯೂಬ್​​ನಲ್ಲಿ ಹಾಕುತ್ತಾರೆ. ಇಡೀ ಸಿನಿಮಾ ಉಚಿತ, ಎಲ್ಲರೂ ಒಂದೇ ದಿನದಲ್ಲಿ ನೋಡಿಬಿಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಚಿತ್ರವು ಈಗಾಗಲೇ ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ, ಚಂಡೀಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಇತರ ರಾಜ್ಯಗಳಲ್ಲಿ ತೆರಿಗೆ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ.

ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಮುಂದೂಡುವಂತೆ ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಮಾಡಲಾಗಿತ್ತು ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಮುಂದೂಡುವಂತೆ ಪ್ರಧಾನ ಮಂತ್ರಿ ಕಚೇರಿಯಿಂದ ರಾಜ್ಯ ಚುನಾವಣಾ ಆಯುಕ್ತರಿಗೆ ದೂರವಾಣಿ ಕರೆ ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಪ್ರಧಾನಿಯೊಬ್ಬರು ನೇರವಾಗಿ ಚುನಾವಣಾ ಆಯೋಗಕ್ಕೆ ಕರೆ ಮಾಡಿ ಪತ್ರ ಕಳುಹಿಸುವ ಮೂಲಕ ಚುನಾವಣೆಯನ್ನು ಮುಂದೂಡುತ್ತಿರುವುದು ಜಗತ್ತಿನಲ್ಲಿ ಎಲ್ಲಿಯೂ ನಡೆಯುತ್ತಿರಲಿಲ್ಲ. ಬಿಜೆಪಿಗೆ ಚುನಾವಣೆ ಬೇಕಾಗಿಲ್ಲ. ಬಿಜೆಪಿ ನಾಯಕರು ಎಂಸಿಡಿಯಲ್ಲಿ ಲೂಟಿ ಮಾಡಿದ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ ಎಂದು ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ಹೇಳಿದ್ದಾರೆ.  ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಂದ ಸಂವಹನವನ್ನು ಸ್ವೀಕರಿಸಿದ ನಂತರ ದೆಹಲಿ ಎಸ್‌ಇಸಿ ಈ ತಿಂಗಳ ಆರಂಭದಲ್ಲಿ ನಾಗರಿಕ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಯ ಪ್ರಕಟಣೆಯನ್ನು ಮುಂದೂಡಿದ ನಂತರ ಮುಖ್ಯಮಂತ್ರಿಯವರ ಹೇಳಿಕೆಗಳು ಬಂದಿವೆ. ದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ಏಕೀಕೃತಗೊಳಿಸುವ ಬಗ್ಗೆ ಕೇಂದ್ರವು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ತರಲು ಯೋಜಿಸಿದೆ ಎಂದು ಹೇಳಿದರು.

ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ವಿಲೀನಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.

ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಯಾಕೆ ಎಲ್ಲಾ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ಮರುಸಂಘಟಿಸಲಿಲ್ಲ ಎಂದು ಕೇಜ್ರಿವಾಲ್ ಕೇಳಿದ್ದಾರೆ.

“ನೀವು (ಬಿಜೆಪಿ) ಏಳು ವರ್ಷಗಳಿಂದ ನಿದ್ದೆ ಮಾಡುತ್ತಿದ್ದೀರಾ? ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ಮಾರ್ಚ್ 9 ರಂದು ಸಂಜೆ 5 ಗಂಟೆಗೆ ಎಂಸಿಡಿ ಚುನಾವಣೆಯ ದಿನಾಂಕಗಳನ್ನು ಘೋಷಿಸಲು ನಿರ್ಧರಿಸಲಾಗಿತ್ತು, ಆದರೆ ಪಿಎಂಒದಿಂದ ಕಮಿಷನರ್‌ಗೆ ದೂರವಾಣಿ ಕರೆ ಮಾಡಿ ಪತ್ರ ಬರೆಯಲಾಯಿತು. ಚುನಾವಣೆಯನ್ನು ರದ್ದುಗೊಳಿಸುವ ಘೋಷಣೆಗೆ ಕೇವಲ ಒಂದು ಗಂಟೆ ಮೊದಲು ಕಳುಹಿಸಲಾಗಿದೆ ”ಎಂದು ಹೇಳಿದರು.

ಸದನವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನೀಡಿದ್ದರಿಂದ ಬಿಜೆಪಿ ಅವರನ್ನು ದ್ವೇಷಿಸುತ್ತಿದೆ ಎಂದು ಆರೋಪಿಸಿದರು. “ಜಗತ್ತಿನ ಅತ್ಯಂತ ಚಿಕ್ಕ ಪಕ್ಷ (ಎಎಪಿ) ಯಿಂದ ವಿಶ್ವದ ಅತಿದೊಡ್ಡ ಪಕ್ಷ (ಬಿಜೆಪಿ) ಹೆದರುತ್ತಿದೆ” ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: K-Rail ಪಿಣರಾಯಿ ಸರ್ಕಾರ ಕೆ-ರೈಲ್ ಯೋಜನೆ ನಿಲ್ಲಿಸದಿದ್ದರೆ ನಂದಿಗ್ರಾಮ್ ತರಹದ ಘಟನೆಗೆ ಕೇರಳ ಸಾಕ್ಷಿಯಾಗಬಹುದು: ಮೇಧಾ ಪಾಟ್ಕರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada