K-Rail ಪಿಣರಾಯಿ ಸರ್ಕಾರ ಕೆ-ರೈಲ್ ಯೋಜನೆ ನಿಲ್ಲಿಸದಿದ್ದರೆ ನಂದಿಗ್ರಾಮ್ ತರಹದ ಘಟನೆಗೆ ಕೇರಳ ಸಾಕ್ಷಿಯಾಗಬಹುದು: ಮೇಧಾ ಪಾಟ್ಕರ್

ಕೆ-ರೈಲ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಲು ತಿರುವನಂತಪುರಕ್ಕೆ ಭೇಟಿ ನೀಡಿದ್ದ ಪಾಟ್ಕರ್, ಎಡ ಸರ್ಕಾರವು ಕೆ-ರೈಲ್ ಗಾಗಿ ಒತ್ತಾಯಿಸುವುದನ್ನು ಮುಂದುವರೆಸಿದರೆ ನಂತರ ರಾಜ್ಯವು ನಂದಿಗ್ರಾಮ್ ರೀತಿಯ ಘಟನೆಗೆ ಸಾಕ್ಷಿಯಾಗಬಹುದು ಎಂದು ಹೇಳಿದರು. 

K-Rail ಪಿಣರಾಯಿ ಸರ್ಕಾರ ಕೆ-ರೈಲ್ ಯೋಜನೆ  ನಿಲ್ಲಿಸದಿದ್ದರೆ ನಂದಿಗ್ರಾಮ್ ತರಹದ ಘಟನೆಗೆ ಕೇರಳ ಸಾಕ್ಷಿಯಾಗಬಹುದು: ಮೇಧಾ ಪಾಟ್ಕರ್
ಪ್ರತಿಭಟನೆಯಲ್ಲಿ ಮೇಧಾ ಪಾಟ್ಕರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 24, 2022 | 8:32 PM

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan)ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೆ-ರೈಲ್‌ನ (K-Rail) ಸಿಲ್ವರ್‌ಲೈನ್ (SilverLine ) ಅನ್ನು ಪರಿಸರ ಸ್ನೇಹಿ, ಸುಸ್ಥಿರ ಯೋಜನೆ ಎಂದು ಕರೆದ ದಿನವೇ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಉದ್ದೇಶಿತ ಯೋಜನೆಯು 20,000 ಕ್ಕೂ ಹೆಚ್ಚು ಮನೆಗಳನ್ನು ಕೆಡವಲಿದೆ, ಕೃಷಿ ಭೂಮಿಗಳನ್ನು ನಾಶ ಮಾಡಲಿದೆ ಹೇಳಿದರು. ಬುಧವಾರ ಕೆ-ರೈಲ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಲು ತಿರುವನಂತಪುರಕ್ಕೆ ಭೇಟಿ ನೀಡಿದ್ದ ಪಾಟ್ಕರ್, ಎಡ ಸರ್ಕಾರವು ಕೆ-ರೈಲ್ ಗಾಗಿ ಒತ್ತಾಯಿಸುವುದನ್ನು ಮುಂದುವರೆಸಿದರೆ ನಂತರ ರಾಜ್ಯವು ನಂದಿಗ್ರಾಮ್ ರೀತಿಯ ಘಟನೆಗೆ ಸಾಕ್ಷಿಯಾಗಬಹುದು ಎಂದು ಹೇಳಿದರು.  ಕೆ-ರೈಲ್ ವಿರೋಧಿ ಪ್ರತಿಭಟನೆಯ ಹೊತ್ತಲ್ಲಿ ನ್ಯೂಸ್ 9 ನೊಂದಿಗೆ ಮಾತನಾಡಿದ ಪಾಟ್ಕರ್, ಈ ಯೋಜನೆಯು ಕೇರಳವನ್ನು ಸಾಲದ ಹೊರೆಯಾಗಲಿದೆ ಎಂದು ಹೇಳಿದ್ದಾರೆ. ಅವರೊಂದಿಗೆ ನ್ಯೂಸ್ 9 ನಡೆಸಿದ ಚಿಟ್ ಚಾಟ್ ಇಲ್ಲಿದೆ.

ಪ್ರಶ್ನೆ: ಕೇರಳ ಸರ್ಕಾರ ಮತ್ತು ಕೆ-ರೈಲ್ ಯೋಜನೆಯನ್ನು ಬೆಂಬಲಿಸುವವರು ಇದು ಭವಿಷ್ಯದ ಪೀಳಿಗೆಯ ಯೋಜನೆ ಎಂದು ಹೇಳುತ್ತಾರೆ. ಅಭಿವೃದ್ಧಿಯ ಹಾದಿಯಲ್ಲಿ ನಿಲ್ಲುವುದು ನ್ಯಾಯವಲ್ಲವೇ? ಉತ್ತರ: ದೊಡ್ಡ ಸಾಲವನ್ನು ಅವರ ಹೆಗಲ ಮೇಲೆ ಹಾಕಿದರೆ ಭವಿಷ್ಯದ ಪೀಳಿಗೆ ಹೇಗೆ ಉಳಿಯುತ್ತದೆ? ಈಗಾಗಲೇ ಕೇರಳದ ಜನರ ಮೇಲೆ ಸುಮಾರು 3 ಲಕ್ಷ ಕೋಟಿ ರೂ. ಸಾಲವಿದೆ. ಹೆಚ್ಚಿನ ಉದ್ಯೋಗಾವಕಾಶಗಳು ಅಥವಾ ಸುಸ್ಥಿರ ಯೋಜನೆಗಳನ್ನು ಒದಗಿಸುವ ಬದಲು ಸರ್ಕಾರವು ರಾಜ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ.

ಪ್ರ. ಕೆ-ರೈಲ್‌ಗಾಗಿ ನಡೆಯುತ್ತಿರುವ ಸರ್ವೇಕಲ್ಲು ಸ್ಥಾಪಿಸುವುದನ್ನು ನೀವು ಹೇಗೆ ನೋಡುತ್ತೀರಿ? ನಂದಿಗ್ರಾಮ್ ಘಟನೆಯ ನಂತರ ಜಂತರ್ ಮಂತರ್‌ನಲ್ಲಿ ನಮ್ಮ ನಿರಂತರ ಪ್ರತಿಭಟನೆಯಿಂದಾಗಿ, ಸರ್ಕಾರವು ಭೂ ಸ್ವಾಧೀನ ಕಾಯಿದೆ 1894 ಅನ್ನು ತಿದ್ದುಪಡಿ ಮಾಡಿತು. 2013 ರ ಕಾಯಿದೆಯಲ್ಲಿ ಸಾಕಷ್ಟು ಸ್ವಾಗತಾರ್ಹ ಬದಲಾವಣೆಗಳನ್ನು ಪರಿಚಯಿಸಿತು. ವಾಸುದೇವ್ ಆಚಾರ್ಯ ಸೇರಿದಂತೆ ಹಲವಾರು ಎಡಪಕ್ಷ ನಾಯಕರು ಕಾಯಿದೆಯನ್ನು ರಚಿಸುವಾಗ ನಮ್ಮೊಂದಿಗಿದ್ದರು. ಎಡ ಸರ್ಕಾರ ಈ ಕಾಯ್ದೆಯನ್ನು ಉಲ್ಲಂಘಿಸುತ್ತಿರುವುದು ದುರದೃಷ್ಟಕರ. ಭೂಸ್ವಾಧೀನವನ್ನು ಪ್ರಾರಂಭಿಸುವ ಮೊದಲು ಸರಿಯಾದ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಅಧ್ಯಯನವನ್ನು ನಡೆಸಬೇಕು.

ಪ್ರ. ಆದರೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನಕ್ಕೂ ಮುನ್ನವೇ ಸರ್ವೇಕಲ್ಲು ಸ್ಥಾಪಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ ಎ. ಇಲ್ಲ, ಈ ರೀತಿ ಏನಾದರೂ ಮಾಡುವ ಮೊದಲು ಅವರು ಭೂ ಮಾಲೀಕರಿಗೆ 7 ದಿನಗಳ ಸೂಚನೆ ನೀಡಬೇಕು. ಗ್ರಾಮ ಸಭೆಗಳನ್ನು ಯಾವಾಗ ಕರೆಯಲಾಯಿತು? ಅವರು ಸಂತ್ರಸ್ತ ಜನರನ್ನು ಯಾವಾಗ ಸಮಾಲೋಚಿಸಿದರು? ತಮ್ಮ ಮನೆ ಮತ್ತು ಭೂಮಿಯನ್ನು ಕಳೆದುಕೊಳ್ಳುವವರು, ಬಫರ್ ವಲಯದಲ್ಲಿ ವಾಸಿಸುವವರು ಮತ್ತು ಇತರರ ಜೀವನ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಎಲ್ಲ ಜನರನ್ನು ಸಂಪರ್ಕಿಸಬೇಕು.

ಪ್ರ. ಯೋಜನೆಗೆ ಸುಮಾರು 6800000 ಘನ ಮೀಟರ್ ಕ್ವಾರಿ ಕಲ್ಲುಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ. ಇದು ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎ. ಅದಾನಿಗೂ (ಗೌತಮ್ ಅದಾನಿ, ಅದಾನಿ ಗ್ರೂಪ್‌ನ ಅಧ್ಯಕ್ಷ ವಿಝಿಂಜಂ ಕಂಟೈನರ್ ಟರ್ಮಿನಲ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ) ವಿಝಿಂಜಂ ಯೋಜನೆಗೆ ಸಾಕಷ್ಟು ಕಚ್ಚಾ ಸಾಮಗ್ರಿಗಳನ್ನು ಹೊಂದಿಸಲಾಗಲಿಲ್ಲ.  ಹಾಗಾದರೆ ಈ ಬೃಹತ್ ಪ್ರಮಾಣದ ಕಚ್ಚಾ ವಸ್ತುಗಳನ್ನು ಪಡೆಯಲು ಕೆ-ರೈಲ್ ಏನು ಮಾಡಬೇಕು. ಸರಿಸುಮಾರು ಶೇ 91 ರಷ್ಟು ಜೋಡಣೆಯು ಸಡಿಲ ಮಣ್ಣನ್ನು ಹೊಂದಿರುವ ಭೂಮಿಯ ಮೂಲಕ ಹಾದುಹೋಗುತ್ತದೆ ಮತ್ತು ಇದಕ್ಕೆ ಟನ್‌ಗಳಷ್ಟು ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಬೃಹತ್ ಬಲವರ್ಧನೆ ಅಗತ್ಯವಿರುತ್ತದೆ. ಈ ವೆಚ್ಚವನ್ನು ಡಿಪಿಆರ್‌ನಲ್ಲಿ ಸೇರಿಸಲಾಗಿಲ್ಲ.

ಪ್ರಶ್ನೆ. ಸುಸ್ಥಿರ ಪರ್ಯಾಯ ಯಾವುದು ಎಂದು ನೀವು ಯೋಚಿಸುತ್ತೀರಿ? ಉತ್ತರ: ಅಸ್ತಿತ್ವದಲ್ಲಿರುವ ರೈಲು ಸೇವೆಯನ್ನು ಸುಧಾರಿಸುವ ಮಾರ್ಗಗಳನ್ನು ಸರ್ಕಾರಗಳು ಕಂಡುಹಿಡಿಯಬೇಕು. ಅದು ಖಾಸಗೀಕರಣವಿಲ್ಲದೆ ನಡೆಯಬೇಕು. ಅದೇ ಎಡಪಕ್ಷಗಳು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ವಿರೋಧಿಸುತ್ತಿವೆ. ಹಾಗಾಗಿ ಸಮಸ್ಯೆ ಇರುವುದು ಎಡಪಕ್ಷಗಳಲ್ಲಿ ಅಲ್ಲ, ಪಿಣರಾಯಿ ವಿಜಯನ್ ಸರ್ಕಾರದಲ್ಲಿ.

ಇದನ್ನೂ ಓದಿ: SilverLine Project ಕೇರಳ ಸರ್ಕಾರ ದಾರಿ ತಪ್ಪಿಸುತ್ತಿದೆ: ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು