Video: ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ, ಆಮೇಲೇನಾಯ್ತು ನೋಡಿ
ಅಪ್ರಾಪ್ತ ಬಾಲಕಿಯ ಕೊರಳಿಗೆ ಯುವಕನೊಬ್ಬ ಚಾಕು ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಆ ಬಾಲಕಿಗೆ ಆತ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಅದೂ ಹಾಡಹಗಲಲ್ಲಿ. ಆದರೆ ಆಗಬೇಕಾದ ದೊಡ್ಡ ಅನಾಹುತವನ್ನು ಜಾಗೃತ ನಾಗರಿಕರು ಹಾಗೂ ಪೊಲೀಸರು ತಪ್ಪಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಇಬ್ಬರು ಒಂದೇ ಪ್ರದೇಶದಲ್ಲಿ ವಾಸವಾಗಿದ್ದಾರೆ.
ಸತಾರಾ, ಜುಲೈ 22: ಅಪ್ರಾಪ್ತ ಬಾಲಕಿಯ ಕೊರಳಿಗೆ ಯುವಕನೊಬ್ಬ ಚಾಕು ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಆ ಬಾಲಕಿಗೆ ಆತ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಅದೂ ಹಾಡಹಗಲಲ್ಲಿ. ಆದರೆ ಆಗಬೇಕಾದ ದೊಡ್ಡ ಅನಾಹುತವನ್ನು ಜಾಗೃತ ನಾಗರಿಕರು ಹಾಗೂ ಪೊಲೀಸರು ತಪ್ಪಿಸಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಇಬ್ಬರು ಒಂದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿದ್ದಾನೆ. ಜನರು ಸ್ಥಳದಲ್ಲಿ ಜಮಾಯಿಸಿದರೂ ಕೂಡಲೇ ಬಾಲಕಿಯನ್ನು ರಕ್ಷಿಸಿ ಆ ಯುವಕನನ್ನು ಥಳಿಸಿ ಪೊಲೀಸರಿಗೆ ಹಿಡಿದುಕೊಡಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

