AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ವ್ಯಾಪಾರಿಗಳಿಗೆ ನೀಡಿರುವ ತೆರಿಗೆ ನೋಟೀಸ್​​ಗಳನ್ನು ಕರ್ನಾಟಕ ಸರ್ಕಾರ ವಾಪಸ್ಸು ಪಡೆಯಲಿ: ಸಿಟಿ ರವಿ

ಸಣ್ಣ ವ್ಯಾಪಾರಿಗಳಿಗೆ ನೀಡಿರುವ ತೆರಿಗೆ ನೋಟೀಸ್​​ಗಳನ್ನು ಕರ್ನಾಟಕ ಸರ್ಕಾರ ವಾಪಸ್ಸು ಪಡೆಯಲಿ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2025 | 3:02 PM

Share

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನವೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನ ಕಾಡದಿರದು, ಯಾಕೆಂದರೆ ಐಟಿ-ಬಿಟಿ ರಾಜಧಾನಿಯೂ ಎನಿಸಿಕೊಂಡಿರುವ ಬೆಂಗಳೂರು ಡಿಜಿಟಲ್ ಪೇಮೆಂಟ್​ಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿದೆ, ಇಲ್ಲಿ ತರಕಾರಿ ಮಾರುವವ ಸಹ ಡಿಜಿಟಲ್ ಪೇಮೆಂಟ್ ಸ್ವೀಕರಿಸುತ್ತಾನೆ ಎಂದು ಎಂಎಲ್ಸಿ ಸಿಟಿ ರವಿ ಹೇಳಿದರು.

ಬೆಂಗಳೂರು, ಜುಲೈ 22: ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ತೆರಿಗೆ ನೋಟೀಸ್ ಗಳಿಂದ ಸಣ್ಣ ವ್ಯಾಪಾರಿಗಳು ಭೀತಿಗೊಳಗಾಗಿದ್ದಾರೆ, ಅವರಿಗಿರುವ ಹೆದರಿಕೆ, ಆತಂಕವನ್ನು ಮಧ್ಯವರ್ತಿಗಳು (mediators) ಎನ್​ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ, ಸಣ್ಣ ವ್ಯಾಪಾರಿಗಳು ತಮ್ಮ ಬಿಸಿನೆಸ್ ಮುಚ್ಚಿ ಗಂಟು ಮೂಟೆ ಕಟ್ಟಿ ತಮ್ಮ ಊರುಗಳಿಗೆ ಹೋಗುವ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಸರ್ಕಾರ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟೀಸ್​​ಗಳನ್ನು ಕಳಿಸುತ್ತಿದೆ, ಚಿಕ್ಕ ವ್ಯಾಪಾರಿಗಳನ್ನು ಹೀಗೆ ಗೋಳು ಹೊಯ್ದುಕೊಳ್ಳುವ ಬದಲು ಖಜಾನೆ ಖಾಲಿಯಾಗಿದೆ ಅಂತ ಸರ್ಕಾರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ, ವ್ಯಾಪಾರಿಗಳನ್ನು ಭಯದಿಂದ ಮುಕ್ತಮಾಡುವ ಏಕೈಕ ಮಾರ್ಗವೆಂದರೆ ಅವರಿಗೆ ಜಾರಿ ಮಾಡಿರುವ ನೋಟೀಸ್​ಗಳನ್ನು ವಾಪಸ್ಸು ಪಡೆಯುವುದು ಎಂದು ರವಿ ಹೇಳಿದರು.

ಇದನ್ನೂ ಓದಿ:  ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಶಾಕ್, ಭಾರೀ ಮೊತ್ತಗಳ ತೆರಿಗೆ ಕಟ್ಟುವಂತೆ ನೋಟೀಸ್!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ