ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ, ಒಂದು ಸರ್ಕಾರದ ಮುಖ್ಯಸ್ಥ; ಬಿಜೆಪಿ ಅರ್ಥಮಾಡಿಕೊಳ್ಳಲಿ: ಹೆಚ್ಸಿ ಮಹದೇವಪ್ಪ
ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ಹೇಳಿದ್ದನಂತೆ, ಹಾಗಿದೆ ರಾಜ್ಯ ಬಿಜೆಪಿ ನಾಯಕರ ವರಸೆ, ಅವರು ಪಾದಯಾತ್ರೆ ಮಾಡಿದ್ದಕ್ಕೆ ಏನಾದರೂ ಅರ್ಥವಿದೆಯೇ? ಬಿಜೆಪಿ ಮತ್ತು ಜೆಡಿಎಸ್ ವಿರೋಧಪಕ್ಷಗಳಾಗಿ ಸಂವಿಧಾನದತ್ತ ಪಾತ್ರವನ್ನು ನಿರ್ವಹಿಸಬೇಕು, ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾದ ಗುರುತರವಾದ ಜವಾಬ್ದಾರಿ ಅವರ ಮೇಲಿದೆ, ಅವರು ಮಾಡುತ್ತಿರುವ ರಾಜಕಾರಣ ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಮಹದೇವಪ್ಪ ಹೇಳಿದರು.
ಬೆಂಗಳೂರು, ಜುಲೈ 22: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ, ಮುಡಾ ಪ್ರಕರಣಕ್ಕೆ (MUDA case) ಸಂಬಂಧಿದಂತೆ ವಿಚಾರಣೆ ನಡೆಸುವಾಗ ಸುಪ್ರೀಮ್ ಕೋರ್ಟ್ ರಾಜಕೀಯ ವಿಷಯಗಳಿಗೆ ಸರ್ಕಾರೀ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ, ಇನ್ನಾದರೂ ರಾಜ್ಯದ ಬಿಜೆಪಿ ನಾಯಕರು ತಮ್ಮ ಮೊಂಡುವಾದವನ್ನು ಬಿಡಬೇಕು ಎಂದು ಹೇಳಿದರು. ಸಿದ್ದರಾಮಯ್ಯನವರನ್ನು 40 ವರ್ಷಗಳಿಂದ ಬಲ್ಲೆ, ಅವರು ಯಾವತ್ತೂ ಸ್ವಜನ ಪಕ್ಷಾಪಾತ ಮಾಡಿದವರಲ್ಲ ಮತ್ತು ಭ್ರಷ್ಟಾಚಾರವನ್ನು ಸಹಿಸಿದವರಲ್ಲ, ವಿನಾಕಾರಣ ಬಿಜೆಪಿ ನಾಯಕರು ಅವರ ಮತ್ತು ಕುಟುಂಬದವರ ನೆಮ್ಮದಿಯನ್ನು ಹಾಳು ಮಾಡಿದರು, ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ, ಒಂದು ಸರ್ಕಾರದ ಮುಖ್ಯಸ್ಥ, ಪ್ರಜಾಪ್ರಭುತ್ವವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ ಅನ್ನೋದು ಅವರು ಆಡುವ ಆಟಗಳಿಂದ ಗೊತ್ತಾಗುತ್ತದೆ ಎಂದು ಮಹದೇವಪ್ಪ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆ ಮತ್ತು ನಾವು ಖರ್ಗೆಯವರನ್ನು ಭೇಟಿಯಾಗಿರುವ ನಡುವೆ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ