ಮಹಾದೇವಪ್ಪ ಲೋಕೋಪಯೋಗಿ ಸಚಿವನಾಗಿದ್ದಾಗ ಸಿಗಂದೂರು ಸೇತುವೆ ಡಿಪಿಆರ್ ರೆಡಿಯಾಗಿತ್ತು: ಸಿದ್ದರಾಮಯ್ಯ
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಮಾತಾಡಿದ ಸಿದ್ದರಾಮಯ್ಯ ಒಬಿಸಿ ಕೌನ್ಸಿಲ್ಗೆ ತಾನೂ ಒಬ್ಬ ಸದಸ್ಯನಾಗಿದ್ದೇನೆ, ಈ ಬಾರಿಯ ಮೀಟಿಂನ್ನು ತಾನು ಬೆಂಗಳೂರಲ್ಲಿ ಆಯೋಜಿಸುತ್ತಿರುವುದಾಗಿ ಹೇಳಿದರು. ಅಹಿಂದ ಸಂಘಟನೆಯನ್ನು ಬಹಳ ಹಿಂದೆಯೇ ಆರಂಭಿಸಿರುವೆನೆಂದ ಮುಖ್ಯಮಂತ್ರಿ, ಮೀಟಿಂಗ್ ನಲ್ಲಿ ಹಿಂದುಳಿದ ವರ್ಗಗಳ ಒಲವು ಹೇಗೆ ಪಡೆಯಬೇಕೆನ್ನುವುದನ್ನು ಚರ್ಚಿಸಲಾಗುವುದು ಎಂದು ಹೇಳಿದರು.
ವಿಜಯಪುರ, ಜುಲೈ 14: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ತಮ್ಮನ್ನು ಅಹ್ವಾನಿಸದೆ ಸಿಗಂದೂರು ಚೌಡೇಶ್ವರಿ ಸೇತುವೆಯನ್ನು ಉದ್ಘಾಟಿಸಲಾಗಿದೆ, ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರಿರೋದು ನಿಜ, ಆದರೆ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ತನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ, ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಅಸಮಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ಭಾಗವಾಗಿಯೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ, ಮಹದೇವಪ್ಪ ಅವರು ಲೋಕೋಪಯೋಗಿ ಖಾತೆ ಸಚಿವರಾಗಿದ್ದಾಗ ಯೋಜನೆ ಡಿಪಿಆರ್ ತಯಾರಾಗಿತ್ತು, ಅದು ಬಹು ದೊಡ್ಡ ಯೋಜನೆಯಾಗಿದ್ದರಿಂದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಗೆ ವರ್ಗಾಯಿಸಲಾಗಿತ್ತು, ಸಹಕಾರಿ ಒಕ್ಕೂಟ ವ್ಯವಸ್ಥೆ ಅಂದರೆ ಇದೇನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಅಂತ ನಾಮಕರಣ ಮಾಡಿದ ನಿತಿನ್ ಗಡ್ಕರಿ
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ