ಬಿಆರ್ ಪಾಟೀಲ್ ದೆಹಲಿಗೆ ಬಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತೇ ಇರಲಿಲ್ಲವೇ?
ಕಾರು ಹತ್ತುವಾಗ ಸಿದ್ದರಾಮಯ್ಯ, ಮುಖ್ಯಮಂತ್ರಿ ಬದಲಾವಣೆ ವಿಷಯ ಹೈಕಮಾಂಡ್ ಜೊತೆ ನಡೆಸಿದ ಸಭೆಯಲ್ಲಿ ಪ್ರಸ್ತಾಪ ಆಗೇ ಇಲ್ಲ ಎನ್ನುತ್ತಾರೆ. ಹಾಗಾದರೆ ಅವರು ಶಾಸಕರನ್ನು ಮಂತ್ರಿಗಳನ್ನು ಯಾಕೆ ಕರೆದುಕೊಂಡು ಹೋದರು? ಅವರೆಲ್ಲ ತಮ್ಮ ಸ್ವಂತ ಖರ್ಚಿನಲ್ಲಿ ಹೋದರೇ ಅಥವಾ ಯಾರಾದ್ದಾದರೂ ಪ್ರಾಯೋಜಕತ್ವ ಇತ್ತೇ ಅನ್ನೋದು ಎರಡನೇ ಪ್ರಶ್ನೆ. ಸರ್ಕಾರೀ ದುಡ್ಡಲ್ಲಿ ಹೋಗಿದ್ದರೆ ಅದು ಜನರು ತೆರಿಗೆ ರೂಪದಲ್ಲಿ ಕೊಟ್ಟ ಹಣ ತಾನೇ?
ದೆಹಲಿ, ಜುಲೈ 11: ದೆಹಲಿಯಿಂದ ಬೆಂಗಳೂರುಗೆ ಹೊರಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪೊಲೀಸ್ ವಂದನೆ ಸ್ವೀಕರಿಸಿದರು. ಸಿದ್ದರಾಮಯ್ಯನವರಿಗೆ ಆಳಂದ್ ಶಾಸಕ ಬಿಅರ್ ಪಾಟೀಲ್ ದೆಹಲಿಗೆ ಬಂದ ವಿಚಾರ ಗೊತ್ತಿಲ್ಲದಿರೋದು ಅಚ್ಚರಿಯ ಸಂಗತಿಯೇ. ಅವರನ್ನು ಮಾತಾಡಿಸುವಾಗ ಏನಯ್ಯಾ ಬಿಆರ್, ದೆಹಲಿಗೆ ಯಾವಾಗ ಬಂದೆ ಅಂತ ಕೇಳುತ್ತಾ ಹೆಗಲ ಮೇಲೆ ಕೈಹಾಕುತ್ತಾರೆ. ಪಾಟೀಲ್ ಮತ್ತು ಸಿದ್ದರಾಮಯ್ಯ ಮೊದಲು ಜೆಡಿಎಸ್ ನಲ್ಲಿದ್ದವರು ಹಾಗಾಗಿ ಅವರ ನಡುವೆ ಸಲುಗೆ ಇದೆ. ಅದರೆ ಪಾಟೀಲ್ ದೆಹಲಿಗೆ ಬಂದಿದ್ದು ಸಿದ್ದರಾಮಯ್ಯಗೆ ಗೊತ್ತೇ ಇರಲಿಲ್ಲವೇ ಅನ್ನೋದು ಸಂದೇಹ ಹುಟ್ಟಿಸುವ ಸಂಗತಿ. ಯಾಕೆಂದರೆ, ಸಿದ್ದರಾಮಯ್ಯ ತಮ್ಮೊಂದಿಗೆ ದೆಹಲಿ ಕೆಲ ಮಂತ್ರಿ, ಶಾಸಕರನ್ನು ಕರೆದೊಯ್ದಿದ್ದಾರೆ. ಪಾಟೀಲ್ ತಾವಾಗಿಯೇ ಅಲ್ಲಿಗೆ ಯಾಕೆ ಹೋದಾರು?
ಇದನ್ನೂ ಓದಿ: ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡೋದು ಶತಸಿದ್ಧ, ಅಲ್ಪಾವಧಿಯ ವಿಸ್ತರಣೆಯೂ ಸಿಗಲಾರದು: ಆರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ