ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ಹಾಗೂ ತಾಯಿ ಪುಷ್ಪಾ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಇವೆ. ಆದರೆ, ಇದನ್ನು ಅವರು ಒಪ್ಪೋದಿಲ್ಲ. ಅವರು ಯಶ್ ಬಗ್ಗೆ ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಯಶ್ ಜೊತೆ ಅಷ್ಟು ಒರಟಾಗಿ ನಡೆದುಕೊಳ್ಳೋದು ಏಕೆ ಎಂದು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಯಶ್ ತಾಯಿ ಪುಷ್ಪ ಅವರು ‘ಕೊತ್ತಲವಾಡಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಇದು ಅವರ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರದ ಬಗ್ಗೆ ಸಾಕಷ್ಟು ಸಂದರ್ಶನಗಳನ್ನು ಅವರು ನೀಡುತ್ತಿದ್ದಾರೆ. ಯಶ್ (Yash) ವಿಚಾರದಲ್ಲಿ ಅವರು ರಫ್ ಆ್ಯಂಡ್ ಟಫ್ ಆಗಿ ಮಾತನಾಡುತ್ತಿದ್ದಾರೆ. ಹೀಗೇಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಯಶ್ನ ಅವರು ಪ್ಯಾಂಪರ್ ಮಾಡಿ ಬೆಳೆಸಿಲ್ಲವಂತೆ. ಮನೆಯಲ್ಲೂ ಯಶ್ ಹಾಗೂ ಪುಷ್ಪಾ ಇದೇ ರೀತಿ ಇರುತ್ತಾರಂತೆ. ಆ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 11, 2025 12:30 PM