ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ! ಸಿಸಿಟಿವಿ ವಿಡಿಯೋದಿಂದಾಗಿ ಸಿಕ್ಕಿಬಿದ್ದ ಆರೋಪಿ
ದಿನಸಿ ಖರೀದಿ ಮಾಡಿದ್ದರ ಸಾಲ ವಾಪಸ್ ಕೊಡುವಂತೆ ಅಂಗಡಿ ಮಾಲೀಕ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಅಂಗಡಿಗೇ ಬೆಂಕಿಹಚ್ಚಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ. ಆರೋಪಿಯು ಅಂಗಡಿ ಸಮೀಪದ ಫ್ಲೆಕ್ಸ್ಗೆ ಬೆಂಕಿಹಚ್ಚಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು, ಜುಲೈ 11: ದಿನಸಿಯ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಅಂಗಡಿಗೇ ಬೆಂಕಿಹಚ್ಚಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ. ಸಿಸಿಟಿವಿಲಿ ಸೆರೆಯಾದ ದೃಶ್ಯದ ಆಧಾರದಲ್ಲಿ ಸದ್ಯ ಬೆಳ್ತಂಗಡಿ ಪೊಲೀಸರು ಆರೋಪಿ ಉಮೇಶ್ ಬಂಗೇರಾನನ್ನು ಬಂಧಿಸಿದ್ದಾರೆ. ಈ ಹಿಂದೆ ಹೋಟೆಲ್ ನಡೆಸುತ್ತಿದ್ದಾಗ ಉಮೇಶ್ ಬಂಗೇರಾ, ಗುರುವಾಯನಕೆರೆಯ ಸದಕತುಲ್ಲಾ ಎಂಬಾತನ ದಿನಸಿ ಅಂಗಡಿಯಿಂದ 38,000 ರೂ. ಸಾಲ ಪಡೆದಿದ್ದ. ದೂರವಾಣಿ ಕರೆ ಮಾಡಿದ್ದ ಸದಕತುಲ್ಲಾ, ಹಳೇ ಬಾಕಿ ತೀರಿಸುವಂತೆ ಆಗ್ರಹಿಸಿದ್ದ. ಇದರಿಂದ ಕೋಪಗೊಂಡ ಉಮೇಶ್ ಅಂಗಡಿ ಮುಂಭಾಗ ಹಾಕಿದ್ದ ಫ್ಲೆಕ್ಸ್ಗೆ ಬೆಂಕಿ ಹಾಕಿದ್ದಾನೆ. ಇದರಿಂದ 3 ಸಾವಿರ ನಷ್ಟ ಆಗಿದೆ ಎಂದು ಅಂಗಡಿ ಮಾಲೀಕ ದೂರು ನೀಡಿದ್ದರು.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
